ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂನ ಗೇಟ್ ಬಳಿ ಜಮೆಯಾಗಿದ್ದು ಸಸ್ಯರಾಶಿಯನ್ನು ತೆಗೆಯಲು ರೈತರು ಹರಸಹಾಸ ಪಟ್ಟಿದ್ದಾರೆ. ಡ್ಯಾಂಗೆ ಹರಿದು ಬರುತ್ತಿರುವ ಸಸ್ಯರಾಶಿ ಅವೈಜ್ಞಾನಿಕ ಗೇಟ್ಗೆ ಅಡ್ಡಲಾಗಿ ಕೂತ ಬೆನ್ನಲ್ಲೇ ನೀರು ಹರಿಯದೆ ರೈತರ ಜಾಮೀನುಗಳಿಗೆ ನುಗ್ಗಿವೆ.
ಈ ಹಿನ್ನೆಲೆ ರೈತರೇ ಸಸ್ಯರಾಶಿಯನ್ನು ತೆಗೆಯಲು ಹಗ್ಗಕಟ್ಟಿಕೊಂಡು ಕ್ರಸ್ಟ್ಗೇಟ್ಗಿಳಿದಿದ್ದಾರೆ. ಇದಲ್ಲದೇ ಪಿಕಪ್ ಡ್ಯಾಂನ ಎಲ್ಲ ಕ್ರಸ್ಟ್ ಗೇಟ್ ಗಳಿಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅವೈಜ್ಞಾನಿಕ ಕಬ್ಬಿಣದ ಸರಳಗಳನ್ನು ಅಡ್ಡಲಾಗಿ ಅಳವಡಿಕೆ ಮಾಡಿರುವುದರಿಂದ ಜಲಾಶಯಕ್ಕೆ ಹರಿದು ಬರುತ್ತಿರುವ ನೀರು ಸರಾಗವಾಗಿ ಹೊರ ಹೋಗದ ಕಾರಣ ಜಮೀನುಗಳಿಗೆ ನುಗ್ಗಿವೆ.
ಇದರಿಂದ ನೂರಾರು ಎಕರೆ ಭತ್ತದ ಬೆಳೆ ಮತ್ತು ತೋಟಗಳು ಮುಳುಗಡೆಯಾಗಿವೆ. ಇನ್ನು ಜಲಾಶಯದ ಎಲ್ಲ ಗೇಟುಗಳು ಬಂದ್ ಆಗಿರುವುದರಿಂದ ಸಸ್ಯ ರಾಶಿ ಹೊರ ಹೋಗುತ್ತಿಲ್ಲ, ಇದರಿಂದಾಗಿ ಹಿನ್ನೀರು ಹೆಚ್ಚುತ್ತಲೇ ಇದರಿಂದ ರೈತರು ಸಸ್ಯರಾಶಿ ತೆರವು ಮಾಡಲು ಹರಸಾಹಸ ಪಟ್ಟಿದ್ದಾರೆ.
ಇನ್ನು ಅವೈಜ್ಞಾನಿಕವಾಗಿ ಅಳವಡಿಕೆ ಮಾಡಿದ ಕಬ್ಬಿಣದ ಪೋಲ್ಗಳನ್ನು ತೆರವು ಮಾಡಿದಲ್ಲಿ ಮಾತ್ರ ಹರಿದುಬರುತ್ತಿರುವ ಅಪಾರ ಪ್ರಮಾಣದ ಸಸ್ಯರಾಶಿ ಜಮಾ ಆಗದೇ ಸರಾಗವಾಗಿ ಹರಿದು ಹೋಗುತ್ತೇ ತಕ್ಷಣ ಕ್ರಸ್ಟ್ಗೇಟ್ಗಳಿಗೆ ಅಡ್ಡಲಾಗಿ ಅಳವಡಿಕೆ ಮಾಡಿರುವ ಕಬ್ಬಿಣದ ಪೋಲ್ಗಳನ್ನು ತೆರವು ಮಾಡ್ಬೇಕು ಎಂದು ರೈತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಳೆಯಿಂದ ಕಂಗೆಟ್ಟಿದ್ದ ಜನತೆಗೆ ಮತ್ತೊಂದು ಶಾಕ್: ನೋಟಿಸ್ ನೀಡದೇ ಅಕ್ರಮ ಕಟ್ಟಡಗಳ ಒತ್ತುವರಿ ತೆರವಿಗೆ ಮುಂದಾದ ಪಾಲಿಕೆ