ದಾವಣಗೆರೆ: ನಗರದ ಬಿ.ಎಸ್. ಚನ್ನಬಸಪ್ಪ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಬಂದಿದ್ದ ಮುಸ್ಲಿಂ ಯುವತಿಯರು ಹಾಗೂ ಮಹಿಳೆಯರನ್ನು ತಡೆಯೊಡ್ಡಿ ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಿಡಿಗೇಡಿಗಳನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಮೊಹಮ್ಮದ್ ಹಾಗೂ ಫಯಾಜ್ ಅಹ್ಮದ್ ಬಂಧಿತ ಆರೋಪಿಗಳು. ನಗರದ ಚನ್ನಬಸಪ್ಪ ಅಂಗಡಿಯಲ್ಲಿ ಹೊಸ ಬಟ್ಟೆ ಖರೀದಿಸಿ ವಾಪಸ್ ಮನೆಗೆ ಮುಸ್ಲಿಂ ಯುವತಿಯರು ಹಾಗೂ ಮಹಿಳೆಯರು ತೆರಳುತ್ತಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಪುಂಡರ ಗುಂಪೊಂದು ಇಲ್ಲಿ ಬಟ್ಟೆ ಖರೀದಿಸಬೇಡಿ ಎಂದು ಧಮ್ಕಿ ಹಾಕಿದ್ದರು. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.
ಶಾಂತಿ ಸೌಹಾರ್ದತೆ ಕದಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಿ: ದಾವಣಗೆರೆ ಪಾಲಿಕೆ ಮೇಯರ್
ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಶಾಂತಿ, ಸೌಹಾರ್ದತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆಟಿಜೆ ನಗರ ಸಬ್ ಇನ್ಸ್ಸ್ಪೆಕ್ಟರ್ಗೆ ಘಟನೆ ಸಂಬಂಧ ತನಿಖೆ ಕೈಗೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.