ದಾವಣಗೆರೆ : ನಗರದಲ್ಲಿ ವಂಚನೆ ಜಾಲ ಹೆಚ್ಚಾಗುತ್ತಿದ್ದು ಆಮಿಷಕ್ಕೊಳಗಾಗಿ ಅನೇಕರು ಮೋಸ ಹೋಗ್ತಿದ್ದಾರೆ. ದಾವಣಗೆರೆಯಲ್ಲಿ ನಡೆದಿರುವ ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಬ್ಬೊಬ್ಬರು ತಲಾ ನಾಲ್ಕೂವರೆ ಲಕ್ಷದಷ್ಟು ಹಣ ಕಳೆದುಕೊಂಡಿದ್ದಾರೆ.
ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವರಿಂದ 4.73 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ. ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ನಿವಾಸಿ ಶಶಿಕುಮಾರ್ ಮೋಸ ಹೋದ ವ್ಯಕ್ತಿ. ನೌಕರಿ ಕೊಡಿಸುವುದಾಗಿ ಅಪರಿಚಿತ ವ್ಯಕ್ತಿ ಶಶಿಕುಮಾರ್ ಅವರನ್ನು ನಂಬಿಸಿ ಲಕ್ಷಗಟ್ಟಲೇ ಹಣ ವಂಚನೆ ಮಾಡಿದ್ದಾನೆ. ಖಾಸಗಿ ಕಂಪನಿಯ ಹೆಸರು ಹೇಳಿಕೊಂಡು, ಅ ಕಂಪನಿಯ ನೌಕರನೆಂದು ಪರಿಚಿತನಾದ ಆರೋಪಿಯು ಶಶಿಕುಮಾರ್ ವಾಟ್ಸ್ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸಿ, ನೌಕರಿ ಕೊಡಿಸುವುದಾಗಿ ನಂಬಿಸಿ ಆಮಿಷವೊಡ್ಡಿದ್ದಾನೆ. ನಂತರ ಕಂಪನಿಯ ರಿಜಿಸ್ಟ್ರೇಷನ್ ಬುಕಿಂಗ್ ಮಾಡಬೇಕು, ಬಳಿಕ ನಿಮಗೆ ಹಣ ನೀಡಲಾಗುವುದು ಎಂದು ನಂಬಿಸಿದ್ದಾನೆ.
ಇದನ್ನು ನಂಬಿದ ಶರತ್ ಕುಮಾರ್, ಮೊದಲಿಗೆ ಸ್ವಲ್ಪ ಹಣ ಹಾಕಿದ್ದಾರೆ. ಬಳಿಕ ಹಂತ ಹಂತವಾಗಿ 43,854 ರೂಪಾಯಿ ಅನ್ನು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ನಂಬಿಕೆ ಬರುವಂತೆ ಅಪರಿಚಿತ ವ್ಯಕ್ತಿ ವಂಚನೆಗೊಳಗಾದ ಶರತ್ಗೆ 70,225 ಹಣವನ್ನು ಖಾತೆಗೆ ಹಾಕಿದ್ದಾನೆ. ನಂತರ ಮತ್ತೆ ಸುಮ್ಮನಿರದ ಆರೋಪಿಯು ರಿಜಿಸ್ಟ್ರೇಷನ್ಗಾಗಿ ಹಣದ ಅವಶ್ಯಕತೆ ಇದೆ ಎಂದು ವಿವಿಧ ಹಂತಗಳಲ್ಲಿ ಒಟ್ಟು 4.73 ಲಕ್ಷವನ್ನು ಹಣವನ್ನು ಹಾಕಿಸಿಕೊಂಡಿದ್ದಾನೆ. ಕೆಲಸ ಬೇಕಾದ್ರೆ ಮತ್ತೆ 11 ಲಕ್ಷ ರೂ. ಕಟ್ಟು ಎಂದಾಗ ವಂಚನೆಯ ಜಾಲ ಬಯಲಿಗೆ ಬಂದಿದೆ. ಇದನ್ನು ತಿಳಿದ ಶರತ್ ಕುಮಾರ್ ಅವರು ತಕ್ಷಣ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ವಸ್ತುಗಳನ್ನು ಆನ್ಲೈನ್ನಲ್ಲಿ ಖರೀದಿ ಮಾಡಿ ಮಾರಾಟ ಮಾಡಿದರೆ ಕಮಿಷನ್ ನೀಡುವ ಆಮಿಷ.. ಮಹಿಳೆಗೆ 18.66 ಲಕ್ಷ ವಂಚನೆ
ಆನ್ಲೈನ್ ಟ್ರೇಡಿಂಗ್ ಮಾರ್ಕೆಟಿಂಗ್ ಲಾಭಾಂಶ ನೀಡುವುದಾಗಿ ವಂಚನೆ : ಆನ್ಲೈನ್ ಟ್ರೇಡಿಂಗ್ ಮಾರ್ಕೆಟಿಂಗ್ ಮೂಲಕ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಗೆ 4.58 ಲಕ್ಷ ವಂಚನೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದಿದೆ. ಹೊನ್ನಾಳಿ ಪಟ್ಟಣದ ಗವಬರಡ ಬೀದಿಯ ನಿವಾಸಿ ಮಂಜುಶ್ರೀ ಮೋಸ ಹೋದವರು. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿರುವ ಇವರಿಗೆ ಅಪರಿಚಿತರು 4.58 ಲಕ್ಷ ಪಂಗನಾಮ ಹಾಕಿದ್ದಾರೆ.
ಅನಾಮಧೇಯ ವ್ಯಕ್ತಿಯೊಬ್ಬ ಖಾಸಗಿ ಕಂಪನಿಯ ಹೆಸರು ಹೇಳಿಕೊಂಡು ಮಂಜುಶ್ರೀ ಅವರಿಂದ ಹಂತ ಹಂತವಾಗಿ 1.50 ಲಕ್ಷವನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾನೆ. ಅನುಮಾನ ಬರದಿರಲಿ ಎಂದು ತಮ್ಮ ಖಾತೆಯಿಂದ 41,000 ರೂಪಾಯಿಯನ್ನು ಮರಳಿ ಮಂಜುಶ್ರೀಯವರ ಬ್ಯಾಂಕ್ ಅಕೌಂಟ್ಗೆ ವರ್ಗಾಯಿಸಲಾಗಿದೆ. ನಂಬಿಕೆ ಬಂದ ಮೇಲೆ ಅಪರಿಚಿತರು ಹಂತ ಹಂತವಾಗಿ ಬರೋಬ್ಬರಿ 3.46 ಲಕ್ಷ ವರ್ಗಾಯಿಕೊಂಡು ಒಟ್ಟು 4.58 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನಕಲಿ ಉದ್ಯೋಗ ದಂಧೆ ಭೇದಿಸಿದ ಕ್ರೈಂ ಬ್ರಾಂಚ್ ಕಾಶ್ಮೀರ.. 9 ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ