ETV Bharat / state

ಸರ್ಕಾರ ಕ್ರಮಕೈಗೊಂಡರೂ ಇನ್ನೂ ನಿಂತಿಲ್ಲ ಕೋವಿಡ್ ಅಕ್ರಮ

ಸಾವು-ನೋವಿನ ಈ ಕರಾಳ ದಿನಗಳಲ್ಲೂ ಕೆಲವರು ವಾಮಮಾರ್ಗದ ಮೂಲಕ ಹಣ ಮಾಡಲು ಹೊರಟಿರುವುದು ಮಾತ್ರ ದುರಂತದ ಸಂಗತಿ. ಸರ್ಕಾರ ಸೂಕ್ತ ಕ್ರಮಕೈಗೊಳ್ಳುತ್ತಿದೆ. ಆದರೂ, ಇಂತಹ ಅಕ್ರಮ ಚಟುವಟಿಕೆಗಳು ಸಂಪೂರ್ಣ ನಿಂತಿಲ್ಲ ಅನ್ನೋದೆ ವಿಪರ್ಯಾಸ..

covid-scam-special-story
ಬೆಡ್​ ಬ್ಲಾಕಿಂಗ್ ದಂಧೆ
author img

By

Published : Jun 14, 2021, 2:40 PM IST

ಬೆಂಗಳೂರು : ದಿನೇದಿನೆ ವಿವಿಧ ರೂಪ ಪಡೆಯುತ್ತಾ ಅವಾಂತರ ಸೃಷ್ಟಿಸುತ್ತಿರುವ ಕೊರೊನಾ ಕಾಳಸಂತೆಕೋರರಿಗೆ, ಮಧ್ಯವರ್ತಿಗಳಿಗೆ ರತ್ನಗಂಬಳಿ ಹಾಸಿದಂತಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್​​ ದಂಧೆ, ರೆಮ್ಡೆಸಿವಿರ್​ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಇಂತಹ ದಂಧೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳುತ್ತಿದೆ.

ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ

ಕಳೆದ ಕೆಲ ದಿನಗಳ ಹಿಂದೆ ರಾಜ್ಯ ರಾಜಧಾನಿಯಲ್ಲಿ ಸೋಂಕಿತರ ಪ್ರಮಾಣ ವಿಪರೀತವಾಗಿ ಹೆಚ್ಚಿತ್ತು. ಬೆಡ್​ಗೆ ಬೇಡಿಕೆ ಹೆಚ್ಚಾಗಿದ್ದನ್ನೇ ಬಂಡವಾಳ ಮಾಡಿಕೊಂಡ ಕೆಲವರು, ಬೆಡ್ ಬ್ಲಾಕಿಂಗ್​ ದಂಧೆ ನಡೆಸಿರೋದು ಬಯಲಾಗಿತ್ತು. ಅಲ್ಲದೆ ರೆಮ್ಡೆಸಿವಿರ್​ ಅಕ್ರಮ ಮಾರಾಟವೂ ಬೆಳಕಿಗೆ ಬಂದಿತ್ತು. ಅಕ್ರಮ ದಂಧೆ ಬಯಲಿಗೆ ಬರುತ್ತಿದ್ದಂತೆ ಸರ್ಕಾರ, ಈ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.

ದಾವಣಗೆರೆ ಜಿಲ್ಲೆಯ ಪ್ರತಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಬೆಡ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಮಧ್ಯವರ್ತಿಗಳು ಹಸ್ತಕ್ಷೇಪ ಮಾಡದಂತೆ ಜಿಲ್ಲಾಡಳಿತ ನಿಗಾವಹಿಸಿದೆ. ಕಾಳಸಂತೆಯಲ್ಲಿ ರೆಮ್ಡೆಸಿವಿರ್​​ ಅಕ್ರಮ ಮಾರಾಟಕ್ಕೆ ಪ್ರಯತ್ನಿಸಿದವರನ್ನೂ ಕೂಡ ಹೆಡೆ ಮುರಿಕಟ್ಟಲಾಗಿದೆ. ಪರಿಣಾಮ ಜಿಲ್ಲೆಯುಲ್ಲಿ ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ವರದಿಯಾಗಿಲ್ಲ.

ಸಾವು-ನೋವಿನ ಈ ಕರಾಳ ದಿನಗಳಲ್ಲೂ ಕೆಲವರು ವಾಮಮಾರ್ಗದ ಮೂಲಕ ಹಣ ಮಾಡಲು ಹೊರಟಿರುವುದು ಮಾತ್ರ ದುರಂತದ ಸಂಗತಿ. ಸರ್ಕಾರ ಸೂಕ್ತ ಕ್ರಮಕೈಗೊಳ್ಳುತ್ತಿದೆ. ಆದರೂ, ಇಂತಹ ಅಕ್ರಮ ಚಟುವಟಿಕೆಗಳು ಸಂಪೂರ್ಣ ನಿಂತಿಲ್ಲ ಅನ್ನೋದೆ ವಿಪರ್ಯಾಸ. ಹಾಗಾಗಿ, ಸಂಬಂಧಪಟ್ಟ ಅಧಿಕಾರಿಗಳು, ಪೊಲೀಸ್​ ಇಲಾಖೆಯವರು ತಮ್ಮ ಕಾರ್ಯವನ್ನ ಮತ್ತಷ್ಟು ಚುರುಕುಗೊಳಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.