ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಬೆನ್ನಲ್ಲೇ ತಹಶೀಲ್ದಾರ್, ಎಸಿ ಹಾಗೂ ಪಾಲಿಕೆ ಆಯುಕ್ತರು ಜಂಟಿಯಾಗಿ ಕೊರೊನಾ ನಿಯಮ ಪಾಲನೆ ಮಾಡದ ಕಲ್ಯಾಣ ಮಂಟಪಗಳ ಮೇಲೆ ದಿಢೀರ್ ದಾಳಿ ನಡೆಸಿದರು.
ದಾವಣಗೆರೆಯ ಮೂರು ಕಲ್ಯಾಣ ಮಂಟಪಗಳಿಗೆ ತಲಾ 30 ಸಾವಿರ ರೂ ದಂಡ ಹಾಗೂ ನೋಟಿಸ್ ನೀಡಿ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಸೂಚಿಸಿದರು.
ನಗರದ ಕಲ್ಯಾಣ ಮಂಟಪಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಾಗಿ ತಿಳಿಸಲಾಗಿತ್ತು. ಹೀಗಿದ್ದರೂ ನಿಯಮಗಳನ್ನು ಗಾಳಿ ತೂರಿದ ಕಾರಣ ಅಧಿಕಾರಿಗಳು ದಿಢೀರ್ ದಾಳಿಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಮಾಸ್ಕ್ ಅಭಿಯಾನ : ಮುಖಗವಸು ಹಾಕದ ವ್ಯಾಪಾರಿಗೆ ಎಸ್ಪಿ ಕಪಾಳಮೋಕ್ಷ