ದಾವಣಗೆರೆ: ಕೋವಿಡ್ ಕೇರ್ ಸೆಂಟರ್ನಲ್ಲಿ ಶಾಸಕ ರೇಣುಕಾಚಾರ್ಯ ವಾಸ್ತವ್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಮಾಜಿ ಶಾಸಕ ಶಾಂತನಗೌಡ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಕೋವಿಡ್ ಕೇರ್ ಸೆಂಟರ್ನಲ್ಲಿ ಘಟನೆ ನಡೆದಿದ್ದು, ಮಾಜಿ ಶಾಸಕರು ಬರುತ್ತಿದ್ದಂತೆ ಆಕ್ರೋಶ ಹೊರಹಾಕಿದ ಮಹಿಳೆಯರು ಕ್ಷಮೆ ಯಾಚಿಸುವಂತೆ ಪಟ್ಟುಹಿಡಿದಿದ್ದರು.
ಮಹಿಳೆಯರ ಒತ್ತಡಕ್ಕೆ ಮಣಿದ ಮಾಜಿ ಶಾಸಕ ಕ್ಷಮೆ ಕೇಳಿದ್ದಾರೆ. ಶಾಂತನಗೌಡ ಸೋಂಕಿತರಿಗೆ ಹಣ್ಣು ನೀಡಲು ಮುಂದಾದಾಗ ಹಣ್ಣು ಸ್ವೀಕರಿಸದ ಸೋಂಕಿತರು, ಶಾಸಕರಿಲ್ಲದಾಗ ಕೋವಿಡ್ ಕೇರ್ ಸೆಂಟರ್ಗೆ ಬಂದ್ರಾ ಎಂದು ಕಿಡಿಕಾರಿದ್ದಾರೆ.
ಬಲವಂತದಿಂದ ಮಾಜಿ ಶಾಸಕ ಶಾಂತನಗೌಡ ಸೋಂಕಿತರಿಗೆ ಹಣ್ಣು ನೀಡಲು ಮುಂದಾದಾಗ ಅದನ್ನು ಸ್ವೀಕರಿಸಲು ಮಹಿಳೆಯರು ನಿರಾಕರಿಸಿ, ನಿಮಗೆ ಅಕ್ಕ-ತಂಗಿಯರಿಲ್ವಾ ಮನೆಯಲ್ಲಿ ಎಂದು ಪ್ರಶ್ನಿಸಿದ್ದಾರೆ. ಶಾಸಕ ರೇಣುಕಾಚಾರ್ಯ ಕೋವಿಡ್ ರೋಗಿಗಳಿಗೆ ಧೈರ್ಯ ತುಂಬುತ್ತಿದ್ದಾರೆ. ಜೊತೆಗೆ ನಮ್ಮೆಲ್ಲರ ಚೇತರಿಕೆಗೆ ಸಹಾಯ ಮಾಡುತ್ತಿದ್ದಾರೆ ಅವರ ವಿರುದ್ಧವೇ ನೀವು ಕೆಟ್ಟದಾಗಿ ಮಾತನಾಡುವುದು ಏಕೆ ಎಂದು ಗರಂ ಆದರು.
ಓದಿ:ಶಾಸಕ ರೇಣುಕಾಚಾರ್ಯ ಯಾವಾಗ ಎಲ್ಲೆಲ್ಲಿ ಮಲಗಿದ್ರು ಗೊತ್ತಿಲ್ಲ; ಮಾಜಿ ಶಾಸಕ ಶಾಂತನಗೌಡರ