ETV Bharat / state

ದಾವಣಗೆರೆಯಲ್ಲಿ 88ಕ್ಕೇರಿದ ಸೋಂಕಿತರು: ಪೊಲೀಸ್ ಪೇದೆ, ಬೆಳ್ಳುಳ್ಳಿ ವ್ಯಾಪಾರಿಗೂ ಕೊರೊನಾ - ದಾವಣಗೆರೆ ಸುದ್ದಿ

ಬೆಣ್ಣೆ ನಗರಿಗೆ ಕೊರೊನಾ ವೈರಸ್​ ಇವತ್ತೂ ಕೂಡಾ ಪೆಟ್ಟು ಕೊಟ್ಟಿದೆ. ಜಿಲ್ಲೆಯಲ್ಲಿಂದು ಮೂವರು ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

Davanagere
ಕೊರೊನಾ
author img

By

Published : May 14, 2020, 3:33 PM IST

ದಾವಣಗೆರೆ: ಇಂದು ಮತ್ತೆ 3 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಸಂಚಾರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಪೇದೆ ಹಾಗೂ ಬೆಳ್ಳುಳ್ಳಿ ವ್ಯಾಪಾರಿಗೂ ಹೆಮ್ಮಾರಿ ವಕ್ಕರಿಸಿದೆ.

Davanagere
ದಾವಣಗೆರೆ

ಕಂಟೈನ್​ಮೆಂಟ್ ಝೋನ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಗೆ ಕೊರೊನಾ ಸೋಂಕು ತಗುಲಿದ್ದು, ಈಗ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಪೇದೆ ಕೆಲಸ ಮಾಡುತ್ತಿದ್ದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ.

ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದ್ದು, 82 ಸಕ್ರಿಯ ಕೇಸ್​ಗಳಿವೆ. 975 ಸೋಂಕಿತ ಪೊಲೀಸ್ ಪೇದೆಯಾದರೆ, 976ನೇ ರೋಗಿಯಾದ ಬೆಳ್ಳುಳ್ಳಿ ವ್ಯಾಪಾರಿಗೂ ಸೋಂಕು ತಗುಲಿದ್ದು ಆತಂಕಕ್ಕೆ ಕಾರಣವಾಗಿದೆ.

P-960ರ 40 ವರ್ಷದ ವ್ಯಕ್ತಿಗೆ P-852 ರಿಂದ ಸೋಂಕು ತಗುಲಿದ್ದರೆ, P-975ರ 34 ವರ್ಷದ ವ್ಯಕ್ತಿಗೆ ಕಂಟೇನ್ಮೆಂಟ್ ಝೋನ್​ನಿಂದ ಸೋಂಕು ಬಂದಿದೆ. P-976ರ 32 ವರ್ಷದ ವ್ಯಕ್ತಿ ILI ನಿಂದ ಬಳಲುತ್ತಿದ್ದು, ಇವರಿಗೂ ಕೊರೊನಾ ಬಾಧಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.