ದಾವಣಗೆರೆ: ನಗರದ ನರ್ಸಿಂಗ್ ಕಾಲೇಜಿನ 17 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿರುವ ಆಘಾತಕಾರಿ ವಿಷಯ ತಿಳಿದು ಬಂದಿದೆ.
ಮೂರು ದಿನಗಳ ಕಾಲ ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ನಿನ್ನೆ ಸಂಜೆ ಸಹ ಕೆಲ ವಿದ್ಯಾರ್ಥಿಗಳ ಸ್ವ್ಯಾಬ್ ಸಂಗ್ರಹ ಮಾಡಲಾಗಿತ್ತು. ದಾವಣಗೆರೆ ಮೂಲದ ನರ್ಸಿಂಗ್ ಕಾಲೇಜ್ ಇದಾಗಿದ್ದು ವಿದ್ಯಾರ್ಥಿಗಳಲ್ಲಿ ಸೋಂಕು ಇರುವುದು ಖಚಿತವಾಗಿದೆ.
ಓದಿ: ಹಗಲು ವೇಳೆ ಕೊರೊನಾ ಹರಡುವುದಿಲ್ಲವೇ?: ಡಿ.ಕೆ.ಶಿವಕುಮಾರ್
ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಸಿಟಿವ್ ಬಂದ ಬಹುತೇಕರು ಆರೋಗ್ಯವಾಗಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು. ವಿದ್ಯಾರ್ಥಿಗಳಲ್ಲಿ ಗಂಭೀರ ಸ್ವರೂಪದ ಸೋಂಕಿನ ಲಕ್ಷಣಗಳಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾಹಿತಿ ನೀಡಿದ್ದಾರೆ.