ETV Bharat / state

ಡ್ರೈ ಫ್ರೂಟ್ಸ್ ವ್ಯಾಪಾರಕ್ಕೆ ಧಕ್ಕೆ ಇಲ್ಲ, ಆದರೆ ಮೊದಲಿನಂತಿಲ್ಲ! - ಪೌಷ್ಠಿಕ ಆಹಾರಕ್ಕೆ ಒತ್ತು

ಕೊರೊನಾ‌ ಬಂದ ಬಳಿಕ ಜನರು ರೋಗನಿರೋಧಕ‌ ಶಕ್ತಿ ಹೆಚ್ಚಿಸಿಕೊಳ್ಳಲು ಡ್ರೈ ಫ್ರೂಟ್ಸ್​​​ನತ್ತ ಒಲವು ತೋರುತ್ತಿದ್ದು, ಲಾಕ್​ಡೌನ್​ನಲ್ಲಿ ಕೊಂಚ ಮಟ್ಟಿಗೆ ಕುಸಿದಿದ್ದ ಡ್ರೈ ಫ್ರೂಟ್ಸ್​ ವ್ಯಾಪಾರ ಸಹಜ‌ ಸ್ಥಿತಿಗೆ ಮರಳುತ್ತಿದೆ.

Dry fruit
ಡ್ರೈ ಫ್ರೂಟ್ಸ್​​​
author img

By

Published : Dec 4, 2020, 9:53 PM IST

ದಾವಣಗೆರೆ: ಪೌಷ್ಟಿಕ‌ ಆಹಾರ ಸೇವನೆ ಈಗ ಅತಿ ಮುಖ್ಯ. ಕೊರೊನಾ ನಿಗ್ರಹಕ್ಕೆ ಇಂತಹ ಆಹಾರ ಸೇವಿಸಬೇಕೆಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ.‌ ಆದರೆ ದರ ಏರಿಕೆಯಿಂದಾಗಿ ಖರೀದಿ ಮಾಡಲು ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.

ಬಾದಾಮಿ, ದ್ರಾಕ್ಷಿ, ಗೋಡಂಬಿ, ಖರ್ಜೂರ, ಕರದಂಟು, ಚಿಕ್ಕಿ, ಏಲಕ್ಕಿ, ಸಾಂಬಾರು ಪದಾರ್ಥಗಳು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳಿಗೆ ಬೇಡಿಕೆ‌ ಕಡಿಮೆಯಾಗಿಲ್ಲ. ಆದರೆ ದರ ಜಾಸ್ತಿ ಆಗಿದೆ. ಹೀಗಾಗಿ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ಲಾಕ್​​ಡೌನ್​ಗೂ ಮುಂಚೆಯಿದ್ದ ವ್ಯಾಪಾರ ಈಗ ಕೊಂಚ ಮಟ್ಟಿಗೆ ತಗ್ಗಿದೆ.

ಮನೆಯಿಂದ ಹೊರ ಬಂದರೆ ಕೊರೊನಾ‌ ಸೋಂಕು ತಗುಲುತ್ತದೆ ಎಂಬ ಭಯ ಜನರ ಮನಸ್ಸಿನಿಂದ ಇನ್ನೂ ದೂರ ಆಗಿಲ್ಲ.‌ ಈ ಹಿನ್ನೆಲೆಯಲ್ಲಿ ಗ್ರಾಹಕರು ಬರುವುದು ಕಡಿಮೆಯಾಗಿದೆ. ಅನ್​ಲಾಕ್​ ಬಳಿಕ ಡ್ರೈ ಫ್ರೂಟ್ಸ್ (ಒಣ ಹಣ್ಣು) ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಅಗತ್ಯಕ್ಕಿಂತ ಹೆಚ್ಚಿನಷ್ಟು ಬಂದಿದೆ ಎನ್ನುತ್ತಾರೆ ಡ್ರೈ ಫ್ರೂಟ್​ ವ್ಯಾಪಾರಿ.

ಡ್ರೈ ಫ್ರೂಟ್ಸ್ ವ್ಯಾಪಾರದ ಕುರಿತು ವರ್ತಕರ ಮಾತು

ಮಳೆ ಸುರಿಯುತ್ತಿರುವ ಕಾರಣ,‌ ಸಭೆ, ಸಮಾರಂಭಗಳಿಗೆ ಕಡಿಮೆ ಜನರ ಆಹ್ವಾನ ಸೇರಿದಂತೆ ಹಲವು ಕಾರಣಗಳಿಂದ ಮಾರಾಟ ಕುಸಿದಿದೆ‌. ಹಬ್ಬಗಳ ಸಂದರ್ಭದಲ್ಲಿ ತಕ್ಕ ಮಟ್ಟಿಗೆ ಖರೀದಿಗೆ ಮುಂದಾಗುತ್ತಿದ್ದಾರೆ. ಜೊತೆಗೆ ಪೌಷ್ಟಿಕಾಂಶ ಆಹಾರ ಸೇವನೆಗೆ ಜನರು ಹೆಚ್ಚಿನ ಒಲವು ತೋರುತ್ತಿರುವ ಕಾರಣ ವ್ಯಾಪಾರ ದಿನೇ ದಿನೆ ಸುಧಾರಿಸುತ್ತಿದೆ ಎನ್ನುತ್ತಾರೆ ವರ್ತಕರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.