ETV Bharat / state

ದಾವಣಗೆರೆಯಲ್ಲಿ ಕೊರೊನಾ ಚೈನ್ ಲಿಂಕ್ ಕಟ್ ಆಗಿದೆ: ಸಚಿವ ಭೈರತಿ ಬಸವರಾಜ್

ಈಗಾಗಲೇ ಜಿಲ್ಲೆಯಲ್ಲಿ 50 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ ಡಿಸಿ, ಎಸ್ಪಿ ಅವರನ್ನು ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.

author img

By

Published : May 26, 2020, 4:35 PM IST

Updated : May 26, 2020, 7:40 PM IST

Byrathi Basavaraj
ಕೊರೊನಾ ಚೈನ್ ಲಿಂಕ್ ಕಟ್ ಆಗಿದೆ : ಭೈರತಿ ಬಸವರಾಜ್ ಮಾಹಿತಿ

ದಾವಣಗೆರೆ: ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಹೆಮ್ಮಾರಿ ಕೊರೊನಾ ಸೋಂಕಿನ ಚೈನ್ ಲಿಂಕ್ ಕಟ್ ಆಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಶ್ರಮವೇ ಕಾರಣವೆಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಪ್ರಶಂಸೆ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಕೊರೊನಾ ಚೈನ್ ಲಿಂಕ್ ಕಟ್ ಆಗಿದೆ: ಸಚಿವ ಭೈರತಿ ಬಸವರಾಜ್

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೋವಿಡ್-19 ಚೈನ್ ಲಿಂಕ್ ಮತ್ತಷ್ಟು ಕಡಿಮೆಗೊಳಿಸುವ ಕಾರ್ಯ ನಡೆಯುತ್ತಿದೆ. ಎರಡರಿಂದ ಮೂರು ಪ್ರಕರಣಗಳು ಬರುತ್ತಿವೆ‌.‌ ಏರುಗತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೋಗುತ್ತಿಲ್ಲ. ದಿನೇ ದಿನೆ ಇಳಿಮುಖ ಆಗುತ್ತಿದೆ. ಈಗಾಗಲೇ 50 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ ಡಿಸಿ, ಎಸ್ಪಿ ಅವರನ್ನು ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಕಂಟೇನ್ಮೆಂಟ್​ ಝೋನ್​ಗಳಲ್ಲಿನ ಅಧಿಕಾರಿಗಳಿಗೆ ಗಂಟಲು ದ್ರವ ಪರೀಕ್ಷೆ ಮತ್ತಷ್ಟು ವೇಗಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಕೊರೊನಾ ಪ್ರಕರಣಗಳು ಮತ್ತಷ್ಟು ಕಡಿಮೆಯಾಗುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಮಾರೋಪಾದಿಯಲ್ಲಿ ಕಾರ್ಯ ಮುಂದುವರೆಸಲಿವೆ ಎಂದು ಸಚಿವರು ತಿಳಿಸಿದರು.

Last Updated : May 26, 2020, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.