ETV Bharat / state

ದಾವಣಗೆರೆಯಲ್ಲಿ 327 ಕೊರೊನಾ ಪಾಸಿಟಿವ್ : ಐವರು ಸೋಂಕಿಗೆ ಬಲಿ

ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಮೂವರು ಹಾಗೂ ಎಸ್.ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಇಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

Davanagere District
ದಾವಣಗೆರೆಯಲ್ಲಿ 327 ಕೊರೊನಾ ಪಾಸಿಟಿವ್
author img

By

Published : Aug 15, 2020, 11:32 PM IST

ದಾವಣಗೆರೆ: ಜಿಲ್ಲೆಯಲ್ಲಿ‌‌‌ ಕೊರೊನಾ ಅಟ್ಟಹಾಸಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಇದೇ ಮೊದಲ ಬಾರಿಗೆ ಒಂದೇ ದಿನ 327 ಮಂದಿಯಲ್ಲಿ‌ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಐದು ಸಾವಿರದ ಗಡಿ ದಾಟಿದೆ. ಇದರ ಮಧ್ಯೆ ಸೋಂಕಿನಿಂದ ಐವರು ಬಲಿಯಾಗಿದ್ದು, ಸಾವಿನ ಸಂಖ್ಯೆ 126 ಕ್ಕೇರಿದೆ.

ಹೈಪರ್ ಟೆನ್ಶನ್​​ನಿಂದ ಬಳಲುತ್ತಿದ್ದ ನಾಲ್ವರು ಹಾಗೂ ಡಯಾಬಿಟಿಸ್ ಸೇರಿದಂತೆ ಇತರೆ ರೋಗಗಳಿಂದ ಬಳಲುತ್ತಿದ್ದ ಒಬ್ಬರು ಸಾವನ್ನಪ್ಪಿದ್ದಾರೆ. ದಾವಣಗೆರೆಯ ಮೂವರು, ಹಾವೇರಿಯ ರಟ್ಟೆಹಳ್ಳಿ ಗ್ರಾಮದ ಒಬ್ಬರು ಹಾಗೂ ಹರಿಹರ ತಾಲೂಕಿನ ಹರ್ಲಾಪುರ ಗ್ರಾಮದ ಒಬ್ಬರು ಸೋಂಕಿಗೆ ತುತ್ತಾಗಿದ್ದಾರೆ.

ದಾವಣಗೆರೆಯಲ್ಲಿ 182, ಹರಿಹರ 73, ಜಗಳೂರು 7, ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕಿನಲ್ಲಿ ತಲಾ 26 ಹಾಗೂ ಅಂತರ್ ಜಿಲ್ಲೆಯಿಂದ ಬಂದಿದ್ದ 13 ಮಂದಿಯಲ್ಲಿ ಸೋಂಕು ವಕ್ಕರಿಸಿದೆ. ಇದುವರೆಗೆ ಜಿಲ್ಲೆಯಲ್ಲಿ 5070 ಸೋಂಕಿತರಿದ್ದಾರೆ.

ಇಂದು 267 ಮಂದಿ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಇದುವರೆಗೆ 3,421 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 1,523 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.