ETV Bharat / state

ಮೇಯರ್​ ಚುನಾವಣೆಗೆ ಗೈರಾದ ಕೈ ಕಾರ್ಪೋರೇಟರ್ ರಾಜೀನಾಮೆಗೆ ಆಗ್ರಹ

ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ‌ ಗೈರಾಗುವ ಮೂಲಕ ಪಕ್ಷಕ್ಕೆ ದ್ರೋಹ ಬಗೆದಿರುವ ಕಾರ್ಪೋರೇಟರ್ ಯಶೋಧ ಉಮೇಶ್ ಕೂಡಲೇ ರಾಜೀನಾಮೆ ನೀಡಬೇಕು ಎಂದು 20ನೇ ವಾರ್ಡ್​ನ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.‌

congress-corporator-yashoda-absent-in-city-corpration-election

author img

By

Published : Feb 20, 2020, 6:27 PM IST

Updated : Feb 20, 2020, 7:37 PM IST

ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ‌ ಗೈರಾಗುವ ಮೂಲಕ ಪಕ್ಷಕ್ಕೆ ದ್ರೋಹ ಬಗೆದಿರುವ ಕಾರ್ಪೋರೇಟರ್ ಯಶೋಧ ಉಮೇಶ್ ಕೂಡಲೇ ರಾಜೀನಾಮೆ ನೀಡಬೇಕು ಎಂದು 20ನೇ ವಾರ್ಡ್​ನ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.‌

ಕೈ ಕಾರ್ಪೋರೇಟರ್ ಯಶೋಧ ಉಮೇಶ್​ ರಾಜೀನಾಮೆಗೆ ಆಗ್ರಹ

ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಕಾಂಗ್ರೆಸ್​ನ 20ನೇ ವಾರ್ಡ್​ ಅಧ್ಯಕ್ಷ ಶಂಕರ್, ನಮ್ಮ ವಾರ್ಡ್​ಗೆ ಯಶೋಧ ಉಮೇಶ್ ಅಗತ್ಯವಿಲ್ಲ.‌ ಇಲ್ಲಿಂದ ತೊಲಗಬೇಕು. ಬಿಜೆಪಿ ಒಡ್ಡಿದ ಹಣ, ಇತರೆ ಆಮಿಷಕ್ಕೆ ಬಲಿಯಾಗುವ ಮೂಲಕ ಕಾಂಗ್ರೆಸ್​ಗೆ ಮತ ಹಾಕಿದ ಮತದಾರರಿಗೆ ವಿಷ ಕುಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಮುನ್ನಾ ದಿನ ರಾತ್ರಿ 12 ಗಂಟೆಯವರೆಗೆ ಕಾಂಗ್ರೆಸ್ ಪರವಾಗಿಯೇ ಇದ್ದ ಯಶೋಧ ಉಮೇಶ್ ಬೆಳಗಾಗುತ್ತಿದ್ದಂತೆ ಬಿಜೆಪಿ ಪರ ವಾಲಿದ್ದಾರೆ. ಇಂಥವರು ನಮಗೆ ಅಗತ್ಯವಿಲ್ಲ. ಅತಿ ಹೆಚ್ಚು ಮತಗಳ ಅಂತರದಿಂದ ನಾವು ಗೆಲ್ಲಿಸಿದ್ದರೂ ಮೋಸ ಮಾಡಿದರು. ಹೀಗಾಗಿ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲೇಬೇಕು. ಉಪ ಚುನಾವಣೆಯಲ್ಲಿ ನಾವು ನಮ್ಮ ವಾರ್ಡ್​ನಲ್ಲಿ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದಿದ್ದಾರೆ.

Last Updated : Feb 20, 2020, 7:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.