ETV Bharat / state

92 ಹರೆಯದಲ್ಲೂ ರಾಜಕೀಯ ರಣೋತ್ಸಾಹ!.. ಶಾಮನೂರು ಶಿವಶಂಕರಪ್ಪಗೆ ಭರ್ಜರಿ ಗೆಲುವು! - ಶಾಮನೂರು ಶಿವಶಂಕರಪ್ಪ ರಾಜಕೀಯ

ಕಾಂಗ್ರೆಸ್​ ಮುಖಂಡ ಶಾಮನೂರು ಶಿವಶಂಕರಪ್ಪ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

Congress candidate Shamanur Shivashankarappa  Shamanur Shivashankarappa again win  Davanagere south constituency  92 ಹರೆಯದಲ್ಲೂ ರಾಜಕೀಯ ರಣೋತ್ಸಾಹ  ಶಾಮನೂರು ಶಿವಶಂಕರಪ್ಪರಿಗೆ ಭರ್ಜರಿ ಗೆಲುವು  ಕಾಂಗ್ರೆಸ್​ ಮುಖಂಡ ಶಾಮನೂರು ಶಿವಶಂಕರಪ್ಪ  ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು  ಶಾಸಕ ಸ್ಥಾನಕ್ಕೆ ರಾಜೀನಾಮೆ  ಶಾಮನೂರು ಶಿವಶಂಕರಪ್ಪ ರಾಜಕೀಯ  ಕಾಂಗ್ರೆಸ್​ನಲ್ಲಿ ನಾಲ್ಕೈದು ದಶಕಗಳ ಕಾಲ ರಾಜಕಾರಣ
92 ಹರೆಯದಲ್ಲೂ ರಾಜಕೀಯ ರಣೋತ್ಸಾಹ
author img

By

Published : May 13, 2023, 12:25 PM IST

ದಾವಣಗೆರೆ: ಕಾಂಗ್ರೆಸ್​ ಮುಖಂಡ ಶಾಮನೂರು ಶಿವಶಂಕರಪ್ಪ ರಾಜ್ಯ ರಾಜಕಾರಣದಲ್ಲಿ ಅನುಭವಿ ಹಾಗೂ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಲಿಂಗಾಯತ ಸಮುದಾಯದ ಪ್ರಮುಖ ಲೀಡರ್​ ಕೂಡ ಹೌದು. ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅವರು ಈ ಬಾರಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

Congress candidate Shamanur Shivashankarappa  Shamanur Shivashankarappa again win  Davanagere south constituency  92 ಹರೆಯದಲ್ಲೂ ರಾಜಕೀಯ ರಣೋತ್ಸಾಹ  ಶಾಮನೂರು ಶಿವಶಂಕರಪ್ಪರಿಗೆ ಭರ್ಜರಿ ಗೆಲುವು  ಕಾಂಗ್ರೆಸ್​ ಮುಖಂಡ ಶಾಮನೂರು ಶಿವಶಂಕರಪ್ಪ  ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು  ಶಾಸಕ ಸ್ಥಾನಕ್ಕೆ ರಾಜೀನಾಮೆ  ಶಾಮನೂರು ಶಿವಶಂಕರಪ್ಪ ರಾಜಕೀಯ  ಕಾಂಗ್ರೆಸ್​ನಲ್ಲಿ ನಾಲ್ಕೈದು ದಶಕಗಳ ಕಾಲ ರಾಜಕಾರಣ
92 ಹರೆಯದಲ್ಲೂ ರಾಜಕೀಯ ರಣೋತ್ಸಾಹ

ವಿಶೇಷ ಎಂದರೆ ಶಾಮನೂರು ಶಿವಶಂಕರಪ್ಪ ರಾಜಕೀಯಕ್ಕೆ ಧುಮಕಿದ್ದೇ ತಮ್ಮ 60ನೇ ವಯಸ್ಸಿನಲ್ಲಿ. ಈಗ ಅವರಿಗೆ 92 ವರ್ಷ. ಅಂದರೆ ರಾಜಕೀಯ ಪ್ರವೇಶಿಸಿ ಬರೋಬ್ಬರಿ 32 ವರ್ಷ ಆಯ್ತು. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶ ಮಾಡಿದ್ದು ಅವರು ವನಪ್ರಸ್ತ ಅವಧಿಯಲ್ಲಿ.. ನಿವೃತ್ತಿ ಸಮಯದಲ್ಲಿ ಅವರು ರಾಜಕೀಯ ಎಂಟ್ರಿ ಪಡೆದುಕೊಂಡಿದ್ದರು. ಅಂದರೆ ಅದು ಅವರ ರಾಜಕೀಯ ಉತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಬಿಜೆಪಿ ಅಭ್ಯರ್ಥಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಶಾಮನೂರು ಬಾಲ್ಯ: 16 ಜೂನ್ 1931ರಲ್ಲಿ ದಾವಣಗೆರೆಯಲ್ಲಿ ಜನಿಸಿದ ಶಾಮನೂರು ಶಿವಶಂಕರಪ್ಪ, ಅಕ್ಕಿ ವಹಿವಾಟು ನಡೆಸುತ್ತಾ ರಾಜಕೀಯಕ್ಕೆ ಪ್ರವೇಶ ಮಾಡಿದವರು. ಲಿಂಗಾಯತ ಸಮುದಾಯದಲ್ಲಿ ಜನಿಸಿದ‌ ಅವರು, ಮೊಟ್ಟ ಮೊದಲ ಬಾರಿಗೆ ಅಂದಿನ‌ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ದಾವಣಗೆರೆ ನಗರಸಭೆಯ ಸದಸ್ಯರಾಗಿ, ಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿಯ ಹೆಸರು ಎಸ್ ಪಾರ್ವತಮ್ಮ.

ಕಾಂಗ್ರೆಸ್​ನಲ್ಲಿ ನಾಲ್ಕೈದು ದಶಕಗಳ ಕಾಲ ರಾಜಕಾರಣ ಮಾಡಿರುವ ಶಾಮನೂರು ಶಿವಶಂಕರಪ್ಪ, ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ಇಡೀ ರಾಜ್ಯದಲ್ಲೇ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ‌ ಮೊದಲ ಬಾರಿಗೆ ಕಾಂಗ್ರೆಸ್​ನಿಂದ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದು ಅವರ ವರ್ಚಸ್ಸಿಗೆ ಸಾಕ್ಷಿ. ಆರಂಭದಲ್ಲಿ ಕಾರ್ಮಿಕ ಮುಖಂಡ ಪಂಪಾಪತಿ ಇಲ್ಲಿ ಮೂರು ಸಲ ಕಮ್ಯೂನಿಸ್ಟ್​ ಪಕ್ಷದಿಂದ ಶಾಸಕರಾಗಿದ್ದರು. ನಂತರ ಇದು ದಾವಣಗೆರೆ ದಣಿ ಎಂದೇ ಹೆಸರಾಗಿರುವ ಶಾಮನೂರು ಶಿವಶಂಕರಪ್ಪ ಅವರ ಅಡ್ಡಾ ಆಗಿ ಪರಿವರ್ತನೆ ಆಗಿದ್ದು, ಈಗ ಇತಿಹಾಸ ನಿರ್ಮಿಸಿದ್ದಾರೆ.

ಈ ಹಿಂದೆ ದಾವಣಗೆರೆ ಕ್ಷೇತ್ರದಲ್ಲಿ ವೀರಶೈವ ಪಂಚಮಸಾಲಿ ಸಮಾಜದ ಹಾಗೂ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಸಂಬಂಧಿಯೂ ಆಗಿದ್ದ ಯಜಮಾನ್ ಮೋತಿ ವೀರಣ್ಣ ಅವರು ಈ ಕ್ಷೇತ್ರದಿಂದ ಶಾಸಕರಾಗಿದ್ದರು. ಬಳಿಕ ಶಾಮನೂರು ಶಿವಶಂಕರಪ್ಪ ಅವರ ಭದ್ರಕೋಟೆಯಾಗಿದ್ದು ಚರಿತ್ರೆ. 1994, 2004, 2008, 2013 ಹಾಗೂ 2018 ಹೀಗೆ.., ಐದು ಸಲ ಕಾಂಗ್ರೆಸ್​ ಪಕ್ಷದಿಂದ ಶಾಸಕರಾಗಿದ್ದು, ಈ ಬಾರಿ ಗೆದ್ದು ಶಾಸಕರಾಗಿ ಹೊರಹೊಮ್ಮಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ: ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು, ಅಚ್ಚರಿಯಂತೆ 1997ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಬಳಿಕ 1999ರಲ್ಲಿ ಮತ್ತೆ ಲೋಕಸಭಾ ಚುನಾನಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ವಾಜಪೇಯಿ ಸರ್ಕಾರ ಒಂದು ಮತದಿಂದ ಸೋಲು ಕಂಡ ಸಂದರ್ಭ ಇದಾಗಿತ್ತು. ಆಗ ಇವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಶಾಸಕರಾಗಿ ಆಯ್ಕೆಯಾದರು. ಹಲವು ರಾಜಕೀಯ ಸನ್ನಿವೇಶಗಳಿಂದ ಬಿಜೆಪಿ ಇಲ್ಲಿ ಎಷ್ಟೇ ಕಸರತ್ತು ಮಾಡಿದರೂ ಗೆಲುವು ಸಾಧಿಸಲು ಮಾತ್ರ ಸಾಧ್ಯವಾಗಿಲ್ಲ.

ಶಾಮನೂರು ರಾಜಕೀಯ ಜೀವನ: ಶಾಮನೂರು ಶಿವಶಂಕರಪ್ಪ 1994ಕ್ಕೆ ರಾಜಕೀಯ ಪದಾರ್ಪಣೆ ಮಾಡಿದರು. ತಮ್ಮ 64ನೇ ವಯಸ್ಸಿಯನಲ್ಲೇ ಮೊದಲ ಬಾರಿಗೆ 1994 ದಾವಣಗೆರೆ ನಗರ ಸಭೆ ಅಧ್ಯಕ್ಷರಾದರು. ಬಳಿಕ 1994ರಲ್ಲೇ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಬಳಿಕ 2004 ರಲ್ಲಿ ಮತ್ತೇ ಅದೇ ಕ್ಷೇತ್ರದಿಂದ ಆಯ್ಕೆಯಾದ ಬಳಿಕ 2008‌ ರಲ್ಲಿ ಕ್ಷೇತ್ರ ವಿಂಗಡಣೆಯಾದಾಗ 2008, 2013 ಹಾಗೂ 2018 ದಾವಣಗೆರೆ ದಕ್ಷಿಣ ಮತಕ್ಷೇತ್ರದಿಂದ ಶಾಸಕರಾಗಿ ಒಟ್ಟು ಐದು ಬಾರಿ ಆಯ್ಕೆಯಾಗಿದ್ದಾರೆ. ಇನ್ನು 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ತೋಟಗಾರಿಕೆ ಸಚಿವರಾಗಿ ಕೆಲಸ ಮಾಡಿದ್ದಾರೆ‌.‌

ಕ್ಷೇತ್ರ ವಿಂಗಡಣೆ ಬಳಿಕ ಅರಳದ ಕಮಲ: 2008 ರಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿ ವಿಂಗಡಿಸಲಾಯಿತು. 2008 ರಿಂದ‌ ಹಿಡಿದು 2018ರ ತನಕ ಅಂದರೆ ಸತತ ಮೂರು ಬಾರಿ ಇಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದರು. ಈ ಬಾರಿಯೂ ಸಹ ಗೆಲುವು ಸಾಧಿಸಿದ್ದಾರೆ. ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಇಲ್ಲಿ ಸಾಕಷ್ಟು ಪ್ರಯತ್ನ ಮಾಡಿದರೂ ಅದು ಈವರೆಗೂ ಸಾಧ್ಯವಾಗಿಲ್ಲ. ಇದರಿಂದ 2023 ಚುನಾವಣೆಯಲ್ಲಿ ಬಿಜೆಪಿ ಕೂಡ ಪಂಚಮಸಾಲಿ ಸಮಾಜದವರಾದ ಬಿಜಿ ಅಜಯ್ ಕುಮಾರ್ ಅವರನ್ನು ಕಣಕ್ಕಿಳಿಸಿ ಲಿಂಗಾಯತ ಅಸ್ತ್ರ ಪ್ರಯೋಗ ಮಾಡಿತ್ತು. ಆದ್ರೆ ಬಿಜೆಪಿ ಈ ಕ್ಷೇತ್ರದಲ್ಲಿ ಮತ್ತೆ ಸೋಲು ಅನುಭವಿಸಿದ್ದಾರೆ.

ಓದಿ: ರಾಜ್ಯದ ಅಭ್ಯರ್ಥಿಗಳಲ್ಲಿ ಇವರೇ ಸೀನಿಯರ್.. 92ನೇ ವಯಸ್ಸಿನಲ್ಲೂ ಶಾಮನೂರು ಶಿವಶಂಕರಪ್ಪ ಚುನಾವಣಾ ರಣೋತ್ಸಾಹ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.