ದಾವಣಗೆರೆ : ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರ ಎಂ.ಪಿ.ದ್ವಾರಕೇಶ್ವರಯ್ಯ ಹೂವಿನಮಡು ಅಂಜನಪ್ಪ, ಹೆಗ್ಗೆರೆ ರಂಗಪ್ಪ ಸೇರಿ 13 ಜನ ದಲಿತ ಮುಖಂಡರ ವಿರುದ್ಧ ದೂರು ದಾಖಲಿಸುವ ಮೂಲಕ ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಮಾರ್ಚ್ 28ರಂದು ದಾವಣಗೆರೆ ಪ್ರೆಸ್ ಕ್ಲಬ್ ಎದುರು ದ್ವಾರಕೇಶ್ವರಯ್ಯನಿಗೆ ದಲಿತ ಸಂಘಟನೆಗಳು ನಕಲಿ ಎಸ್ಸಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಪ್ರಶ್ನಿಸಿ, ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ಹಿನ್ನೆಲೆ ಅವರು 13 ಜನ ದಲಿತ ಮುಖಂಡರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಬೇಡ ಜಂಗಮ ಎಂದು ಹೇಳಿ ನಕಲಿ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿ, ದಲಿತ ಮುಖಂಡರು ದ್ವಾರಕೇಶ್ವರಯ್ಯ ಅವರನ್ನು ಮುತ್ತಿಗೆ ಹಾಕಿದ್ದರು. ಇವರ ಪೈಕಿ 13 ಜನ ಮುಖಂಡರ ವಿರುದ್ಧ ದಾವಣಗೆರೆ ನಗರದ ಕೆಟಿಜೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಇದರ ಬೆನ್ನಲ್ಲೇ ದಲಿತ ಸಂಘಟನೆಗಳು ಕೂಡ ಸುಮ್ಮನೆ ಕೂರದೆ ರೇಣುಕಾಚಾರ್ಯ ವಿರುದ್ಧ ಹೋರಾಟಕ್ಕೆ ಸಜ್ಜಾಗಿವೆ. ಈಗಾಗಲೇ ಹಿಂದೂ ಲಿಂಗಾಯತ ಆಗಿದ್ದವರು ಬೇಡಜಂಗಮ ಎಂದು ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ರೇಣುಕಾಚಾರ್ಯ ಕುಟುಂಬದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಶಿವಕುಮಾರ ಶ್ರೀಗಳಿಗೆ ಭಾರತರತ್ನ ನೀಡಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ನಕಲಿ ಪ್ರಮಾಣ ಪತ್ರ ಪಡೆದಿರುವ ಈ ವಿಚಾರ ಪ್ರಶ್ನೆ ಮಾಡಿ ದಲಿತ ಸಂಘಟನೆಗಳು ರೇಣುಕಾಚಾರ್ಯ ಸಹೋದರನ ಮೇಲೆ ಕೂಡ ಪ್ರತಿ ದೂರು ದಾಖಲಿಸಿದ್ದಾರೆ. ರೇಣುಕಾಚಾರ್ಯ ಅವರನ್ನ ತಕ್ಷಣ ಗಡಿಪಾರು ಮಾಡಬೇಕು. ವಿಳಂಭವಾದ್ರೆ ದಲಿತ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ಆರಂಭಿಸುವುದಾಗಿ ದಲಿತಪರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.