ದಾವಣಗೆರೆ: ನಾಳೆ ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಮೇಲೆ ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯ ಜನ ಅಪಾರ ನಿರೀಕ್ಷೆ ಇಟ್ಕೊಂಡಿದ್ದಾರೆ. ರಾಜ್ಯದ ಕೇಂದ್ರ ಬಿಂದು ದಾವಣಗೆರೆಗೆ ವಿಮಾನ ನಿಲ್ದಾಣ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಸರ್ಕಾರಿ ಮೆಡಿಕಲ್ ಕಾಲೇಜು, ಕೃಷಿ ಕ್ಷೇತ್ರದಲ್ಲಿ ಏನೂ ಸಿಗನಬಹುದು ಎಂದು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಬಜೆಟ್ ನಲ್ಲಿ ಬೆಣ್ಣೆನಗರಿಗೆ ಈ ಸರ್ಕಾರ ಕೊಡುಗೆ ಕೊಡಲಿದೆ ಎಂಬ ನಿರೀಕ್ಷೆ ಇದೆ. ಇನ್ನು ಕೃಷಿ ಕ್ಷೇತ್ರದಲ್ಲೂ ಬದಲಾವಣೆ ಆಹಬಹುದು ಎಂದು ರೈತರು ಕಾದು ಕೂತಿದ್ದಾರೆ. ಸಿಎಂ ಸಿದ್ದರಾಮಯ್ಯ ಬಜೆಟ್ ಬಗ್ಗೆ ರೈತ ಮುಖಂಡ ತೇಜಸ್ವಿ ಪಟೇಲ್ ಅವರು ಪ್ರತಿಕ್ರಿಯಿಸಿ ಬಜೆಟ್ ಮಂಡನೆ ವೇಳೆ ಬಹು ನಿರೀಕ್ಷೆ ಇರುತ್ತದೆ. ನಮ್ಮ ಕೃಷಿ ವಲಯದಲ್ಲಿ ಬಹುಕಾಲದ ಬೇಡಿಕೆ ಎಂದರೆ ಕೃಷಿ ಉತ್ಪನ್ನಗಳಿಗೆ ಯೋಗ್ಯವಾದ ಬೆಲೆ ಕೊಡಿ, ಆರ್ವತನ ನಿಧಿಗೆ ಹಣ ಕಾಯ್ದಿರಿಸಿ, ಪ್ರಕೃತಿ ವಿಕೋಪದಿಂದಾಗುವ ನಷ್ಟಗಳಿಗೆ ಸರಿಯಾದ ಪರಿಹಾರ ಕೊಡಿ ಎಂಬದು ನಮ್ಮ ಬಹುವರ್ಷಗಳ ಬೇಡಿಕೆಗಳಾಗಿವೆ.
ಈ ದಿಕ್ಕಿನಲ್ಲಿ ಸಿದ್ದರಾಮಯ್ಯ ಬಜೆಟ್ ನಲ್ಲಿ ನಮಗೆ ಬೆಳಕು ಸಿಗದಬಹುದು ಎಂಬ ನಿರೀಕ್ಷೆ ಇಲ್ಲಿನ ಜನರದ್ದಾಗಿದೆ. ಎಲ್ಲ ತಾಲೂಕುಗಳಲ್ಲಿ ಸಮಾನವಾಗಿ ಅಭಿವೃದ್ಧಿ ಆಗಿಲ್ಲ, ಆಯಾಯ ಶಾಸಕರ ಇಚ್ಛಾಶಕ್ತಿ, ಸಾಮರ್ಥ್ಯ ಶಕ್ತಿ ಮೇಲೆ ಅಭಿವೃದ್ಧಿ ಆಗಿದ್ದು, ಮಾಜಿ ಸಿಎಂ ದಿ ಜೆಹೆಚ್ ಪಟೇಲ್ ಅವರು ದಾವಣಗೆರೆ ಜಿಲ್ಲೆಯಾಗಿ ಮಾಡಿದರು. ಆದರೆ ಸಮಾತೋಲಿತ ಅಭಿವೃದ್ಧಿ ಆಗಿಲ್ಲ ಎಂದರು.
ಕೃಷಿ ಕ್ಷೇತ್ರದ ನಿರೀಕ್ಷೆಗಳೇನು, ತೇಜಸ್ವಿ ಪಟೇಲ್ ಹೇಳೋದೇನು?: ಆಹಾರ ಉದ್ಯಮಕ್ಕೆ ಉತ್ತೇಜನ ನೀಡಲು ಸಿಎಫ್ ಟಿ ಆರ್ ಐ ಕೆ ಘಟಕ ದಾವಣಗೆರೆಗೆ ಬೇಕಾಗಿದೆ. ಭೈರನಪಾದ ನೀರಾವರಿ ಯೋಜನೆಗೆ ಚಾಲನೆ ನೀಡಬೇಕಾಗಿದೆ. 2006 ರಲ್ಲಿ ರೂಪಿತ ಯೋಜನೆ ಸಾಸ್ವೆಹಳ್ಳಿ ಏತಾನೀರಾವರಿ ಯೋಜನೆ ಮಂದಗತಿಯಲ್ಲಿ ಸಾಗಿದೆ. ಕಾಮಗಾರಿ ವೇಗ ಕಾಯ್ದುಕೊಳ್ಳಬೇಕು. ಜಿಲ್ಲೆಯಲ್ಲಿ ಕಬ್ಬಿಗೆ ಒಳ್ಳೆ ಬೆಲೆ ಸಿಗ್ಬೇಕಾದರೆ ಎಥೆನಾಲ್ ಉತ್ಪಾದನ ಘಟಕ ತೆರೆಯಬೇಕಾಗಿದೆ.
ದಾವಣಗೆರೆ ಜಿಲ್ಲೆಯ ಮುಖ್ಯ ಮೆಕ್ಕೆಜೋಳ ಬೆಳೆಗೆ ವ್ಯಾಲ್ಯೂ ಅಡಿಷನ್ ಘಟಕ ತೆರೆಯಬೇಕು, ಬಿಜೆಪಿ ಸರ್ಕಾರದಲ್ಲಿ ಟೆಕ್ಸಟೈಲ್ ಪಾರ್ಕ್ ಘೋಷಣೆ ಆಗಿದೆ. ಅದು ಇನ್ನೂ ಚಾಲನೆ ಸಿಕ್ಕಿಲ್ಲ. ಇನ್ನು ವಿಮಾನ ನಿಲ್ದಾಣ ಸ್ಥಾಪಿಸಿ ಅಭ್ಯಂತರ ಇಲ್ಲ. ಆದರೆ ರೈತರ ಜಮೀನಿಗೆ ಸೂಕ್ತ ಪರಿಹಾರ ನೀಡಿ ಸ್ಥಾಪಿಸಲಿ, ಸಿಎಂ ಸಿದ್ದರಾಮಯ್ಯ ಅವರ ಮೇಲೆ ಭರವಸೆ ಇದೆ. ಗ್ಯಾರಂಟಿಗಳಿಗಿಂತ ಸಂವಿಧಾನದ ಗ್ಯಾರಂಟಿಗಳಿಗೆ ಹೆಚ್ಚು ಒತ್ತು ನೀಡಿ ಎಂದರು.
ಕೈಗಾರಿಕೆಗಳನ್ನು ತೆರೆಯಿರಿ...!: ಸಿದ್ದರಾಮಯ್ಯ ಬಜೆಟ್ ಬಗ್ಗೆ ನಿರೀಕ್ಷೆಗಳೇನು ಎಂಬುದನ್ನು ಇಲ್ಲಿನ ಹೋರಾಟಗಾರ ವಾಸು ಅವರು ತಿಳಿಸಿದ್ದಾರೆ. ದಾವಣಗೆರೆ ರಾಜ್ಯದ ಕೇಂದ್ರ ಬಿಂದು ಆಗಿದ್ದು, ಇಲ್ಲಿ ತುಂಗಭದ್ರಾ ನದಿ ಕೂಡ ಹರಿಯುತ್ತಿದ್ದರಿಂದ ನಿರುದ್ಯೋಗಿಗಳ ಕೈಗಳಿಗೆ ಕೆಲಸ ಕೊಡಲು ಕೈಗಾರಿಕೆಗಳನ್ನು ತೆರೆಯಬೇಕು. ವಿಮಾನ ನಿಲ್ದಾಣ ಮಾಡ್ಬೇಕಾಗಿದ್ದು, ಕೈಗಾರಿಕೋದ್ಯಮಿಗಳಿಗೆ ಸಂಚರಿಸಲು ಅನುಕೂಲ ಆಗಲಿದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು ನೇರ ರೈಲು ಮಾರ್ಗ ಕಾಮಗಾರಿ ಬೇಗ ಮುಗಿಸ್ಬೇಕು, ಮನೆ ಇಲ್ಲದವರಿಗೆ ಮನೆ ಕೊಡ್ಬೇಕಾಗಿದ್ದು, ಜವಳಿ ಪಾರ್ಕ್, ಸರ್ಕಾರಿ ಮೆಡಿಕಲ್ ಕಾಲೇಜು, ಒಳ್ಳೆ ಆಸ್ಪತ್ರೆ ಬೇಕಾಗಿದೆ.
ಆರನೇ ಗ್ಯಾರಂಟಿ ಜಾರಿಗೆ ತನ್ನಿ...! ಕಾಂಗ್ರೆಸ್ ಅಧಿನಾಯಕಿ ಪ್ರಿಯಾಂಕ ಗಾಂಧಿ ಆರನೇ ಗ್ಯಾರಂಟಿ ಘೋಷಣೆ ಮಾಡಿದ್ದರು, ಅದರಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ವೇತನವನ್ನು ಈ ಬಜೆಟ್ ನಲ್ಲಿ ಕಾಣಿಸಬೇಕು. ಇನ್ನು ನಿವೃತ್ತಿ ಆದವರಿಗೆ ಒಂದು ಲಕ್ಷ ಪರಿಹಾರ ಹಾಗೂ ಪೆನ್ಷನ್ ನೀಡ್ಬೇಕು, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಮನೆ ಹಾಗು ಆರೋಗ್ಯ ಭದ್ರತೆ ಜಾರಿ ಮಾಡ್ಬೇಕು ಎಂದು ಮನವಿ ಮಾಡಿದರು.
ಶಿಕ್ಷಣ ,ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಅಗತ್ಯ...! ಸಿಎಂ ಸಿದ್ದರಾಮಯ್ಯನವರು ತಮ್ಮ ಬಜೆಟ್ ನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ದೊಡ್ಡಮಟ್ಟದ ಒತ್ತು ನೀಡ್ಬೇಕಾಗಿದೆ ಎಂದು ಪ್ರೊಫೆಸರ್ ಗಣೇಶ್ ಮನವಿ ಮಾಡಿದ್ದಾರೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದ್ದರಿಂದ ಒಳ್ಳೆ ಪ್ರಜೆಗಳನ್ನು ಹಾಗು ದೇಶವನ್ನು ನಿರ್ಮಾಣ ಮಾಡಬಹುದು. ಸೈನ್ಸ್ ಟೆಕ್ನಾಲಜಿ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಅವಕಾಶ ನೀಡಲಾಗುತ್ತದೆ, ಇದಕ್ಕೆ ಹೆಚ್ಚು ಒತ್ತು ನೀಡಿದ್ರೇ ಕರ್ನಾಟಕವನ್ನು ಉದ್ಯಮ ಸ್ನೇಹಿಯಾಗಿ ಮಾಡ್ಬಹುದಾಗಿದೆ. ಇನ್ನು ಆರೋಗ್ಯ ಕ್ಷೇತ್ರದಲ್ಲಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಸರಿಯಾಗಿ ಸಿಗ್ತಿಲ್ಲ, ಆಸ್ಪತ್ರೆಗಳಲ್ಲಿ ಸಂಜೆ ಒಪಿಡಿ ತೆರೆದ್ರೇ ಜನಸಾಮಾನ್ಯರಿಗೆ ಅನುಕೂಲ ಆಗಲಿದೆ ಎಂದು ಪ್ರೋಫೆಸರ್ ಗಣೇಶ್ ಅಭಿಪ್ರಾಯ ತಿಳಿಸಿದರು.
ಇದನ್ನೂಓದಿ:ರೈತರ ಪಂಪ್ಸೆಟ್ಗಳಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಶೀಘ್ರದಲ್ಲೇ ನೀತಿ: ಸಚಿವ ಕೆ ಜೆ ಜಾರ್ಜ್