ETV Bharat / state

ಓಮಿಕ್ರಾನ್ ಬಗ್ಗೆ ಸರ್ಕಾರದಿಂದ ತುರ್ತು ಕ್ರಮ, ಲಾಕ್​ಡೌನ್​ ಪ್ರಸ್ತಾವನೆಯೇ ಇಲ್ಲ: ಸಿಎಂ ಬೊಮ್ಮಾಯಿ - ಕೇರಳ ಪ್ರವಾಸಿಗರಿಗೆ ಕೋವಿಡ್ ಪರೀಕ್ಷೆ

ಸೌತ್ ಆಫ್ರಿಕಾದಿಂದ ಬಂದ ವ್ಯಕ್ತಿಗೆ ವಿಭಿನ್ನ ಸೋಂಕಿನ ಲಕ್ಷಣಗಳು ಕಂಡು ಬಂದ‌ ಬೆನ್ನಲ್ಲೇ ಐಸಿಎಂಆರ್​ಗೆ ಜಿನೋಮ್ ಸೀಕ್ವೆನ್ಸ್​ ಟೆಸ್ಟ್​ಗೆ ಕಳುಹಿಸಿದ್ದೇವೆ. ಐಸಿಎಂಆರ್ ವರದಿಗಾಗಿ ಕಾಯುತ್ತಿದ್ದೇವೆ. ಕೇರಳದಿಂದ ಬಂದವರ ಮೇಲೆ ವಿಶೇಷ ನಿಗಾವಹಿಸಲಾಗುವುದು. ಅಲ್ಲದೇ, ಅವರಿಗೆ ಟೆಸ್ಟ್ ಕಡ್ಡಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು..

cm-Basavaraja-Bommai
ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ
author img

By

Published : Nov 29, 2021, 5:17 PM IST

ದಾವಣಗೆರೆ : ಓಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮಕೈಗೊಳ್ಳುತ್ತಿದೆ. ಜೊತೆಗೆ, ಹೊರ ದೇಶಗಳಿಂದ ಬಂದವರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಈಗಾಗಲೇ, ಕೇರಳದಿಂದ ಬಂದ ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್​ ಮಾಡಲಾಗುತ್ತಿದೆ‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಓಮಿಕ್ರಾನ್ ರೂಪಾಂತರ ವೈರಸ್​ ಬಗ್ಗೆ ರಾಜ್ಯ ಸರ್ಕಾರದ ಕ್ರಮ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿರುವುದು..

ನಗರದಲ್ಲಿಂದು ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಲಾಕ್​ಡೌನ್​ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಜನ ಆತಂಕ ಪಡುವ ಅಗತ್ಯವಿಲ್ಲ. ನಾವು ಈಗ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುತ್ತಿದ್ದೇವೆ. ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು.

ಈ ಬಗ್ಗೆ ನಾವು ನಿರ್ಧಾರ‌ ಕೈಗೊಳ್ಳಲು ಆಗಲ್ಲ. ಶಾಲಾ-ಕಾಲೇಜ್​ಗಳಲ್ಲಿ ಕೋವಿಡ್ ಬಗ್ಗೆ ನಿಗಾವಹಿಸಿ ಅಂತಾ ಹೇಳಲಾಗಿದೆ. ರಜೆ ನೀಡುವ ಅಗತ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸೌತ್ ಆಫ್ರಿಕಾದಿಂದ ಬಂದ ವ್ಯಕ್ತಿಗೆ ವಿಭಿನ್ನ ಸೋಂಕಿನ ಲಕ್ಷಣ..

ಸೌತ್ ಆಫ್ರಿಕಾದಿಂದ ಬಂದ ವ್ಯಕ್ತಿಗೆ ವಿಭಿನ್ನ ಸೋಂಕಿನ ಲಕ್ಷಣಗಳು ಕಂಡು ಬಂದ‌ ಬೆನ್ನಲ್ಲೇ ಐಸಿಎಂಆರ್​ಗೆ ಜಿನೋಮ್ ಸೀಕ್ವೆನ್ಸ್​ ಟೆಸ್ಟ್​ಗೆ ಕಳುಹಿಸಿದ್ದೇವೆ. ಐಸಿಎಂಆರ್ ವರದಿಗಾಗಿ ಕಾಯುತ್ತಿದ್ದೇವೆ. ಕೇರಳದಿಂದ ಬಂದವರ ಮೇಲೆ ವಿಶೇಷ ನಿಗಾವಹಿಸಲಾಗುವುದು. ಅಲ್ಲದೇ, ಅವರಿಗೆ ಟೆಸ್ಟ್ ಕಡ್ಡಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಓದಿ: ಇದೆಂಥ ಯಡವಟ್ಟು.. ವರ್ಷದ ನಂತ್ರ ಬೆಂಗಳೂರಿನ ಆಸ್ಪತ್ರೆಯಲ್ಲಿ ಇಬ್ಬರು ಕೋವಿಡ್​ ರೋಗಿಗಳ ಕೊಳೆತ ಮೃತದೇಹ ಪತ್ತೆ!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.