ದಾವಣಗೆರೆ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದೆ. ಕಾಂಗ್ರೆಸ್ನ ಈ ಘೋಷಣೆ ಕುರಿತು ಟೀಕಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಜನರನ್ನು ಯಾಮಾರಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಅವರು ಹತಾಶರಾಗಿದ್ದಾರೆ ಎಂದಿದ್ದಾರೆ.
ಹರಿಹರದ ಹರ ಜಾತ್ರಾ ಮಹೋತ್ಸಕ್ಕೆ ತೆರಳುವ ಮುನ್ನ ನಗರದಲ್ಲಿ ಮಾತನಾಡಿದ ಅವರು, ಜನರಿಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುವುದು ಅಸಾಧ್ಯ ಎಂದು ಗೊತ್ತಿದೆ. ಆದರೂ ಕಾಂಗ್ರೆಸ್ ಘೋಷಣೆ ಮಾಡಿದ್ದಾರೆ. ಇನ್ನೂ ಬೇರೆ ಬೇರೆ ಆಶ್ವಾಸನೆಗಳು ಬರುತ್ತಿದೆ. ಕಾಂಗ್ರೆಸ್ ನವರು ಕೇಜ್ರಿವಾಲ್ ದಾರಿಯಲ್ಲಿ ಹೋಗುತ್ತಿದ್ದು, ಹೋಗಲಿ, ಜನರನ್ನು ಮರಳು ಮಾಡುವ ಕೆಲಸ ಮಾಡ್ತಿದ್ದು, ಜನರನ್ನು ಯಾಮಾರಿಸುತ್ತಿದ್ದಾರೆ. ಆದರೆ, ನಾವು ಈಗಾಗಲೇ ಮಾಡುತ್ತಿದ್ದೇವೆ ಎಸ್ಸಿ ಎಸ್ಟಿಗಳಿಗೆ 75 ಯೂನಿಟ್ ಅನ್ನು ಉಚಿತ ವಿದ್ಯುತ್ ಯೋಜನೆ ಜಾರಿಗೆ ತಂದಿದ್ದೇವೆ. ಅವರು ಕೇವಲ ಹೇಳುತ್ತಾರೆ ನಾವು ಮಾಡಿ ತೋರಿಸಿದ್ದೇವೆ ಎಂದರು.
ಜನಪರ ಬಜೆಟ್ ಮಂಡನೆ: ಬಜೆಟ್ ಪ್ರಕ್ರಿಯೆ ಶುರುವಾಗಿದೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ವಿಧಾನಸಭೆ ಜಂಟಿ ಅಧಿವೇಶನ ದಿನಾಂಕ ಗೊತ್ತು ಮಾಡಿದ್ದೇವೆ. ಬಜೆಟ್ ಅಧಿವೇಶನವನ್ನು ಫೆ.17ರಂದು ಮಾಡಬೇಕು ಎಂದುಕೊಂಡಿದ್ದು, ಅದಕ್ಕೆ ಪೂರ್ವಭಾವಿ ತಯಾರಿಯನ್ನು ಮಾಡಿದ್ದೇವೆ. ಕೆಲ ದಿನಗಳ ಹಿಂದೆ ಸಭೆ ಮಾಡಿದ್ದೇವೆ, ಹಣಕಾಸು ವ್ಯವಸ್ಥೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಎಲ್ಲ ಇಲಾಖೆಯಿಂದ ಹಣಕಾಸು ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಪ್ರಮುಖ ಸಭೆಗಳು ನಡೆಯುತ್ತಿವೆ.
ಈ ವರ್ಷದ ಹಣಕಾಸು ವ್ಯವಸ್ಥೆ, ರೆವಿನ್ಯೂ ಸಂಗ್ರಹಣೆ ನಮ್ಮ ಗುರಿ ಮೀರಿ ಸಂಗ್ರಹವಾಗುತ್ತಿದೆ. ಅದರ ಅನುಗುಣವಾಗಿ ಮುಂದಿನ ಬಜೆಟ್ ಅನ್ನು ತೀರ್ಮಾನ ಮಾಡಲು ಅವಕಾಶವಿದೆ. ಬೇರೆ ಬೇರೆ ಇಲಾಖೆ ಜೊತೆಗೆ ಯೂ ಇನ್ನೆರಡು ದಿನದಲ್ಲಿ ಸಭೆ ನಡೆಸಿ. ಫೆಬ್ರವರಿ ಎರಡನೇ ವಾರದಲ್ಲಿ ಜನಪರ ಬಜೆಟ್ ಮಂಡನೆ. ಈ ಬಾರಿ ವಿಶೇಷವಾಗಿ ಜನ ಕಲ್ಯಾಣ ಕೇಂದ್ರಕ್ಕೆ ಒತ್ತನ್ನು ನೀಡುವ ಯೋಜನೆಗಳನ್ನು ಮಾಡುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡುವ ಚಿಂತನೆ ನಡೆಸಲಾಗಿದೆ. ವಿಶೇಷವಾಗಿ ರೈತರು, ಮಹಿಳೆಯರು, ಇತರೆ ದುಡಿಯುವ ವರ್ಗಕ್ಕೆ ಶ್ರೇಯಾಭಿವೃದ್ಧಿಗೆ ಹತ್ತು ಹಲವು ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಪಂಚಮಸಾಲಿಗಳಿಗೆ ಮೀಸಲಾತಿ ನೀಡಿರುವುದರಲ್ಲಿ ಸ್ಪಷ್ಟನೆ ಇದೆ. ಈಗಾಗಲೇ ಎಸ್ಸಿ ಎಸ್ಟಿ ವಿಚಾರದಲ್ಲಿ ಮೊದಲು ಅರ್ಡೆನ್ಸ್ ಮಾಡುತ್ತಿದ್ದೇವೆ, ಬೆಳಗಾವಿ ಅಧಿವೇಶನದಲ್ಲಿ ಅದನ್ನು ಕಾನೂನು ಮಾಡಿದ್ದೇವೆ, ಕೇಂದ್ರಕ್ಕೆ ಕಳುಹಿಸಿದ್ದೇವೆ. ಶೆಡ್ಯೂಲ್ 9 ಹಾಕಲು ಕೇಂದ್ರದೊಂದಿಗೆ ಮಾತನಾಡಿದ್ದೇವೆ, ಶೆಡ್ಯೂಲ್ 9 ಹಾಕಲು ಏನೇನು ಕ್ರಮ ಬೇಕು ಅ ಪ್ರಯತ್ನ ನಡೆಯುತ್ತಿದೆ. ಈಗ ಮೀಸಲಾತಿ ವಿಚಾರದಲ್ಲಿ ಗೊಂದಲವಿಲ್ಲ. ಈ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಒಂದು ಹೆಜ್ಜೆ ಸರ್ಕಾರ ಇಟ್ಟಿದೆ. ಇದೇ ವೇಳೆ ಯತ್ನಾಳ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರಿಗೆ ಅರ್ಥ ಆಗಿಲ್ಲ, ಎಂದರೆ ನಾನೇನು ಮಾಡಲಿ ಎಂದು ಗರಂ ಆದರು.
ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಬೆಂಗಳೂರಿನಿಂದ ಸುಮಲತಾ ಅಂಬರೀಶ್ ಸ್ಪರ್ಧೆ: ನಿಖಿಲ್ ಕುಮಾರಸ್ವಾಮಿ