ETV Bharat / state

ಕಾಂಗ್ರೆಸ್ ನಾಯಕರ ಮಕ್ಕಳು ಬಿಟ್ ಕಾಯಿನ್ ಪಾಲುದಾರರು : ಸಂಸದ ಸಿದ್ದೇಶ್ವರ್ ಆಪಾದನೆ - Children of Congress leaders are bitcoin partners

ತನಿಖೆ ನಡೆಸಲು ಸಿಎಂ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ‌ ಬದಲಾವಣೆ ಇಲ್ಲ. ಬೊಮ್ಮಾಯಿ( CM Basavaraja bommai) ನೇತೃತ್ವದಲ್ಲಿ 2023ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ..

Children of Congress leaders are bitcoin partners:  MP Siddeshwar
ಸಂಸದ ಸಿದ್ದೇಶ್ವರ್
author img

By

Published : Nov 12, 2021, 6:21 PM IST

ದಾವಣಗೆರೆ : ಕಾಂಗ್ರೆಸ್ ನಾಯಕರ ಮಕ್ಕಳು ಬಿಟ್ ಕಾಯಿನ್ (BitCoin) ಪಾಲುದಾರರು. ಬೊಮ್ಮಾಯಿ ಅವರ ಒಳ್ಳೆಯ ಆಡಳಿತ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ.

ಈ ಹಿನ್ನೆಲೆ ಸಿಎಂ ಮೇಲೆ ಕಾಂಗ್ರೆಸ್​​ನಿಂದ ಸುಖಾಸುಮ್ಮನೇ ಆರೋಪ ಮಾಡಲಾಗುತ್ತಿದೆ ಎಂದು ಸಂಸದ ಜಿಎಂ ಸಿದ್ದೇಶ್ವರ್(GM Siddheshwar, MP) ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ. ಕಾಂಗ್ರೆಸ್ ನಾಯಕರ ಮಕ್ಕಳು ಬಿಟ್ ಕಾಯಿನ್ ಪಾಲುದಾರರು. ಅವರು ತಪ್ಪಿಸಿಕೊಳ್ಳಲು ಸಿಎಂ ಮೇಲೆ ಆರೋಪ ಮಾಡ್ತಿದ್ದಾರೆ ಎಂದರು.

ತನಿಖೆ ನಡೆಸಲು ಸಿಎಂ ಹೇಳಿದ್ದಾರೆ, ಯಾವುದೇ ಕಾರಣಕ್ಕೂ ಸಿಎಂ‌ ಬದಲಾವಣೆ ಇಲ್ಲ. ಬೊಮ್ಮಾಯಿ( CM Basavaraja bommai) ನೇತೃತ್ವದಲ್ಲಿ 2023ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ.

ಬಿಟ್ ಕಾಯಿನ್ ವಿಚಾರದಲ್ಲಿ ಯಾರೇ ಇದ್ರೂ ಕ್ರಮ ಆಗ್ಲಿ ಎಂದ ಸಿದ್ದೇಶ್ವರ್, ಈಗಾಗಲೇ ಬಿಟ್ ಕಾಯಿನ್ ಬಗ್ಗೆ ತನಿಖೆಗೆ ಕೊಟ್ಟಿದ್ದಾರೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.