ದಾವಣಗೆರೆ: ಶಾಲಾ ವಾಹನದಿಂದ ಬಿದ್ದು ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚನ್ನಗಿರಿ ತಾಲೂಕಿನ ಸಾರಥಿ ಗ್ರಾಮದ ಬಳಿ ನಡೆದಿದೆ.
4 ವರ್ಷದ ಅಜಯ್ ಮೃತ ಬಾಲಕ ಎಂದು ತಿಳಿದುಬಂದಿದೆ. ಶಾಲೆಗೆ ಹೋಗಿದ್ದ ವಿದ್ಯಾರ್ಥಿ ವಾಪಸ್ ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬಸ್ನಿಂದ ಕೆಳಗಿಳಿಯುಷ್ಟರಲ್ಲಿ ಚಾಲಕ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದಕ್ಕೆ, ಬಾಲಕ ವಾಹನ ಚಕ್ರದಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ.
ಚನ್ನಗಿರಿ ತಾಲೂಕಿನ ಸುಣಿಗೆರೆ ಗ್ರಾಮದ ಖಾಸಗಿ ಶಾಲೆಗೆ ಸೇರಿದ ವಾಹನ ಬಾಲಕನನ್ನು ಬಲಿ ಪಡೆದಿದೆ. ಬಾಲಕ ಅಜಯ್ ಸಾವಿನ ಹಿನ್ನೆಲೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಚನ್ನಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.