ದಾವಣಗೆರೆ: ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಗುದ್ದಿದರೂ ಸವಾರ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾದ ಘಟನೆ ನಿನ್ನೆ ರಾತ್ರಿ ನಗರದ ಪಿಬಿ ರಸ್ತೆಯ ಶ್ರಮಜೀವಿ ಲಾಡ್ಜ್ ಬಳಿಯ ಸಿಗ್ನಲ್ನಲ್ಲಿ ನಡೆದಿತ್ತು. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಶ್ರಮಜೀವಿ ಲಾಡ್ಜ್ ಮ್ಯಾನೇಜರ್ ಸೈಪುದ್ದೀನ್ ಅಪಘಾತಕ್ಕೊಳಗಾದ ಸ್ಕೂಟಿ ಸವಾರ. ಸೈಪುದ್ದೀನ್ ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಲಾಡ್ಜ್ನಿಂದ ಹೊರಟಾಗ ಪಿಬಿ ರಸ್ತೆಯಲ್ಲಿ ವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಬಸ್ ಗುದ್ದಿದ ರಭಸಕ್ಕೆ ಸ್ಕೂಟಿ ಸಮೇತ ಸವಾರ ನೆಲಕ್ಕೆ ಬಿದ್ದಿದ್ದಾನೆ. ಸೈಪುದ್ದೀನ್ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ