ದಾವಣಗೆರೆ : ಸೊಳ್ಳೆ ಬತ್ತಿಗೆ ಹಚ್ಚಿದ್ದ ಬೆಂಕಿಯ ಕಿಡಿ ಒಣ ಹುಲ್ಲಿಗೆ ತಾಗಿದ ಪರಿಣಾಮ ಎರಡು ಹಸುಗಳು ಸಜೀವ ದಹನವಾದ ಘಟನೆ ನಗರದ ಶಾಮನೂರು ಬಳಿಯ ನಾಗನೂರು ಗ್ರಾಮದಲ್ಲಿ ನಡೆದಿದೆ.
ರೈತ ಹೊನ್ನಪ್ಪ ಎಂಬುವರಿಗೆ ಸೇರಿದ ಹಸುಗಳು ಜೀವಂತವಾಗಿ ಸುಟ್ಟು ಕರಕಲಾಗಿವೆ. ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಎರಡು ಹಸುಗಳು ಸುಟ್ಟು ಕರಕಲಾಗಿದ್ದರೆ, ಒಂದು ಎತ್ತು ಗಂಭೀರವಾಗಿ ಗಾಯಗೊಂಡಿದೆ. ಸೊಳ್ಳೆ ಜಾಸ್ತಿ ಇದ್ದ ಕಾರಣ ಪ್ರತಿನಿತ್ಯವೂ ಸೊಳ್ಳೆ ಬತ್ತಿ ಹಚ್ಚಿ ಇಡಲಾಗುತಿತ್ತು. ಮನೆಯ ಪಕ್ಕದಲ್ಲಿಯೇ ಇದ್ದ ಕೊಟ್ಟಿಗೆಯಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಲಾಗುತಿತ್ತು.
ಬೆಂಕಿ ಹರಡುತ್ತಿದ್ದಂತೆ ಮನೆಯವರು ಹಾಗೂ ಅಕ್ಕಪಕ್ಕದವರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಮೂಕಪ್ರಾಣಿಗಳು ಆಹುತಿಯಾಗಿದ್ದವು.