ದಾವಣಗೆರೆ: ಪಿತ್ರಾರ್ಜಿತ ಆಸ್ತಿಯಲ್ಲಿ ತಮ್ಮ ಪಾಲು ನೀಡುವಂತೆ ತಂದೆಯ ಮನೆ ಮುಂದೆ ಮಕ್ಕಳು ಧರಣಿ ಕುಳಿತ ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ದಿ.ಸಿದ್ದಲಿಂಗಪ್ಪ ಎಂಬುವರ ಮಕ್ಕಳು ಆಸ್ತಿಗಾಗಿ ಬೀದಿಗಿಳಿದಿದ್ದಾರೆ.
ದಿ.ಸಿದ್ದಲಿಂಗಪ್ಪ ಅವರಿಗೆ ಒಟ್ಟು 12 ಮಂದಿ ಮಕ್ಕಳಿದ್ದು, ಅದರಲ್ಲಿ 8 ಮಂದಿ ಗಂಡು ಮಕ್ಕಳಿದ್ದಾರೆ. ಇವರಲ್ಲಿ ಹಿರಿಯರಾದ ಹಾಲಸಿದ್ದಪ್ಪ, ಹಾಲೇಶಪ್ಪ, ರಹನುಮಂತಪ್ಪ, ಹನುಮಂತಪ್ಪ ಎಂಬುವರು ತಮಗೆ ಆಸ್ತಿ ಪಾಲು ಮಾಡಿ ಕೊಡುತ್ತಿಲ್ಲ ಎಂದು ನಾಲ್ವರು ಸಹೋದರರು ಆರೋಪಿಸಿದ್ದಾರೆ. ತಂದೆ ವಾಸವಿದ್ದ ಮನೆಯಲ್ಲಿ ಹಿರಿಯ ಮಕ್ಕಳಾದ ಹಾಲಸಿದ್ದಪ್ಪ, ಹಾಲೇಶಪ್ಪ ವಾಸವಿದ್ದು, ಈ ಮನೆ ಮುಂದೆಯೇ ಧರಣಿ ಕುಳಿತಿದ್ದಾರೆ.
ಸಿದ್ದಲಿಂಗಪ್ಪ ಹೆಸರಲ್ಲಿ ಒಟ್ಟು 22 ಎಕರೆ ಜಮೀನು ಇದ್ದು, ಇದರಲ್ಲಿ 11.20 ಎಕರೆ ಜಂಟಿ ಖಾತೆಯಾಗಿದೆ. ಆದರೆ ತಂದೆ ಮರಣದ ನಂತರ ಆಸ್ತಿ ಪಾಲು ಮಾಡದೆ ನಾಲ್ವರು ಸಹೋದರರು ಸತಾಯಿಸುತ್ತಿದ್ದಾರೆ ಎಂದು ಧರಣಿ ನಿರತ ಸಹೋದರರು ಆರೋಪಿಸಿದ್ದಾರೆ.
ಆದರೆ ಈ ಬಗ್ಗೆ ಹಾಲಸಿದ್ದಪ್ಪ, ಹಾಲೇಶಪ್ಪ ಹೇಳೋದೆ ಬೇರೆಯಾಗಿದೆ. ನಾವು ಅವರಿಗೆ ನೀಡಬೇಕಾದುದನ್ನು ಈಗಾಗಲೇ ನೀಡಿದ್ದೇವೆ. ಈಗ ನಮ್ಮ ಮೇಲೆ ಸುಖಾ-ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಪ್ರತ್ಯಾರೋಪ ಮಾಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಶಾಲೆಗಳ ಪುನಾರಂಭ ಬೆನ್ನಲ್ಲೇ 17 ದಿನಗಳಲ್ಲಿ 14 ಮಕ್ಕಳಿಗೆ ವಕ್ಕರಿಸಿದ ಕೊರೊನಾ