ETV Bharat / state

ಬಿಜೆಪಿಯವರು ಸಂವಿಧಾನ ವಿರೋಧಿಗಳು: ಸಿದ್ದರಾಮಯ್ಯ ಕಿಡಿ - ಬಿಜೆಪಿಯವರು ಸಂವಿಧಾನ ವಿರೋಧಿಗಳು: ಸಿದ್ದರಾಮಯ್ಯ ಹೇಳಿಕೆ

ಬಿಜೆಪಿಯವರು ಸಂವಿಧಾನ ವಿರೋಧಿಗಳು. ಶಾದಿ ಭಾಗ್ಯ ರದ್ದು ಮಾಡುವುದು ಅಲ್ಪಸಂಖ್ಯಾತ ವಿರೋಧಿ ನಡೆ, ಅಲ್ಪಸಂಖ್ಯಾತರು ರಾಜ್ಯದ ಜನಸಂಖ್ಯೆಯ ಶೇ. 14ರಷ್ಟಿದ್ದಾರೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಲ್ಲಿದೆ? ಬಿಜೆಪಿಯವರು ಮನುವಾದಿಗಳು, ಸಂವಿಧಾನದ ವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದರು.

Siddaramaiah statement
ಸಿದ್ದರಾಮಯ್ಯ
author img

By

Published : Mar 8, 2020, 3:26 PM IST

ದಾವಣಗೆರೆ: ದರಿದ್ರ ಬಜೆಟ್ ಎಂಬ ತಮ್ಮ ಹೇಳಿಕೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಬಜೆಟ್‌ನ ಮಾರನೇ ದಿನವೇ ಸಪ್ಲಿಮೆಂಟರಿ ಬಜೆಟ್ ಮಂಡಿಸಲು ಸಾಧ್ಯವೇ? ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ ಹೇಗೆ ಘೋಷಿಸಿದರು? ಇದು ಕೆಟ್ಟ ಬಜೆಟ್ ಪದ್ಧತಿ, ಬಜೆಟ್‌ನ ಪಾವಿತ್ರ್ಯತೆ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರು ಸಂವಿಧಾನ ವಿರೋಧಿಗಳು: ಸಿದ್ದರಾಮಯ್ಯ ಹೇಳಿಕೆ

ನಗರದ ಬಾಪೂಜಿ ಗೆಸ್ಟ್​ಹೌಸ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸಂವಿಧಾನ ವಿರೋಧಿಗಳು. ಶಾದಿ ಭಾಗ್ಯ ರದ್ದು ಮಾಡುವುದು ಅಲ್ಪಸಂಖ್ಯಾತರ ವಿರೋಧಿ ನಡೆ. ರಾಜ್ಯದಲ್ಲಿ ಅಲ್ಪಸಂಖ್ಯಾತರು ಶೇ. 14ರಷ್ಟಿದ್ದಾರೆ. ಸಬ್ ಕಾ ಸತ್ ಸಬ್ ಕಾ ವಿಕಾಸ್ ಎಲ್ಲಿದೆ? ಬಿಜೆಪಿಯವರು ಮನುವಾದಿಗಳು, ಸಂವಿಧಾನದ ವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದರು.

ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಕೂಗಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರತ್ಯೇಕ ರಾಜ್ಯ ಕೇಳಬಾರದು. ಸಮಗ್ರ ಕರ್ನಾಟಕ ಚಿಂತನೆ ಮಾಡಬೇಕು. ಅಧಿಕಾರ, ಅನುದಾನ ಸಿಗದಿದ್ದರೆ ರಾಜೀನಾಮೆ ನೀಡದೇ ಹೋರಾಟ ಮಾಡಬೇಕು. ಸದನದ ಒಳಗೆ ಹೊರಗೆ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

ಬೀದರ್ ದೇಶದ್ರೋಹ ಪ್ರಕರಣದ ಬಗ್ಗೆ ವಿಡಂಬನಾತ್ಮಕ ನಾಟಕ ದೇಶದ್ರೋಹ ಆಗಲ್ಲ, 124 ಎ ಬ್ರಿಟಿಷರು ಜಾರಿ ತಂದ ಕಾನೂನು, ಅದು ವಿಡಂಬನಾತ್ಮಕ ನಾಟಕ ಮೇಲೆ ಹೇರುವುದು ಸರಿಯಲ್ಲ, ಫ್ರೀಡಂ ಆಫ್ ಸ್ಪೀಚ್‌ಗೆ ಧಕ್ಕೆಯಾಗುತ್ತಿದೆ. ಅಧಿವೇಶನದಿಂದ ಮಾಧ್ಯಮಗಳನ್ನು ಹೊರಗಿಟ್ಟಿದ್ದಾರೆ. ಕೆಲವು ಮಾಧ್ಯಮಗಳಿಗೆ ಸಾಫ್ಟ್ ಕಾರ್ನರ್ ಇತ್ತು, ಈಗ ಅವರಿಗೆ ಪೆಟ್ಡು ಬಿದ್ದಿದೆ ಎಂದರು. ನಾನು ಬಿಜೆಪಿ ಸೇರುತ್ತೇನೆ ಎಂಬುದು ಮೂರ್ಖತನದ ಹೇಳಿಕೆ. ನಾನು ಜನರಿಂದ ಅಧಿಕಾರ ಪಡೆದುಕೊಳ್ಳುತ್ತೇನೆ, ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದರು.

ಮಿನಿಸ್ಟರ್ ಅದವರನ್ನು ಸಿದ್ದರಾಮಯ್ಯ ಕರೆದ್ರೆ ಬರ್ತಾರೆ ಎಂಬ ಮಾರ್ಗರೇಟ್ ಆಳ್ವಾ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಮಿನಿಸ್ಟರ್ ಅಗಲು ಬಿಜೆಪಿಗೆ ಹೋದವರು ಹೇಗೆ ಬರುತ್ತಾರೆ. ಅವಕಾಶವಾದಿಗಳು ವಾಪಸ್ಸು ಬ ರಲು ಸಾಧ್ಯವಿಲ್ಲ ಎಂದರು.

ನಾನು ಅಧಿಕಾರದಲ್ಲಿದ್ದಾಗ ಕೃಷಿಗೆ 58 ಸಾವಿರ ಕೋಟಿ ರೂ. ಅನುದಾನ ನೀಡಿದ್ದೆ. ಬಿಜೆಪಿ ಸರ್ಕಾರ ಕೇವಲ 28 ಸಾವಿರ ಕೋಟಿ ರೂ. ಅನುದಾನ ನೀಡಿತು. ಈ ಬಾರಿ ಬಜೆಟ್ ಮೂಲಕ ಉತ್ತರ ನೀಡುತ್ತೇನೆ ಎಂದಿದ್ದರು ಬಿಎಸ್‌ವೈ, ಎಲ್ಲಿದೆ ನಿಮ್ಮ ಉತ್ತರ ಎಂದ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.