ETV Bharat / state

ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ : ಶಾಸಕ ಬಸವಂತಪ್ಪ

ಅಯೋಧ್ಯೆ ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಮಾಯಕೊಂಡ ಶಾಸಕ ಕೆ ಎಸ್​ ಬಸವಂತಪ್ಪ ಆರೋಪಿಸಿದ್ದಾರೆ.

Etv Bharat
ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ : ಶಾಸಕ ಬಸವಂತಪ್ಪ
author img

By ETV Bharat Karnataka Team

Published : Jan 2, 2024, 7:36 PM IST

ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ : ಶಾಸಕ ಬಸವಂತಪ್ಪ

ದಾವಣಗೆರೆ : ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿಯವರು ರಾಮ ಮಂದಿರ ಉದ್ಘಾಟನೆಯನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮಾಯಕೊಂಡ ಶಾಸಕ ಕೆ ಎಸ್​ ಬಸವಂತಪ್ಪ ಆರೋಪಿಸಿದ್ದಾರೆ.

ತಾಲೂಕಿನ ಕುರ್ಕಿ ಗ್ರಾಮದಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯನವರು ಕೊಟ್ಟ ಅನ್ನಭಾಗ್ಯದ ಅಕ್ಕಿಗೆ ಅರಿಶಿಣ ಹಚ್ಚಿ, ಮಂತ್ರಾಕ್ಷತೆ ಎಂದು ರಾಜ್ಯದ ತುಂಬಾ ಹಂಚುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ರಾಮ ಮಂದಿರ ಉದ್ಘಾಟನೆ‌ಗೆ ಆಹ್ವಾನಿಸಬೇಕು. ಸಿದ್ದರಾಮಯ್ಯನವರನ್ನು ಅಹ್ವಾನಿಸಿದರೆ, ಇಡೀ ರಾಜ್ಯವನ್ನು ಆಹ್ವಾನಿಸಿದಂತೆ. ಆಹ್ವಾನ ಮಾಡದೇ ಇದ್ದರೇ ರಾಜ್ಯದ ಜನರಿಗೆ ಅವಮಾನಿಸಿದಂತೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಅಭಿವೃದ್ಧಿ ಹಾಗು ರೈತರ ಕಡೆ ಹೆಚ್ಚು ಗಮನಹರಿಸಬೇಕಾಗಿತ್ತು. ಅದರ ಬದಲು ಆಧ್ಯಾತ್ಮಿಕ ವಿಷಯಗಳ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇರೊಂದು ಮಂತ್ರವನ್ನು ತೆಗೆದುಕೊಂಡಿದ್ದರು. ಈ ಬಾರಿ ಚುನಾವಣೆಗೆ ರಾಮಮಂದಿರ ಉದ್ಘಾಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಇವರು ರಾಮಮಂದಿರಕ್ಕೆ ಹೆಚ್ಚು ಒತ್ತು ಕೊಡುವುದರಿಂದ ದೇಶ ಏನು ಉದ್ಧಾರ ಆಗುವುದಿಲ್ಲ. ಇದರ ಬದಲು ಪ್ರಧಾನಿ ಮೋದಿಯವರು ಈ ದೇಶದ ರೈತರು ಹಾಗು ಯುವಕರ ಬಗ್ಗೆ ಚಿಂತನೆ ನಡೆಸಬೇಕು ಎಂದರು. ಬೇರೆ ಬೇರೆ ದೇಶಗಳು ವೈಜ್ಞಾನಿಕ ಚಿಂತನೆಗಳಿಂದ ಅಭಿವೃದ್ಧಿ ಹೊಂದಿವೆ. ಈ ಸಂದರ್ಭದಲ್ಲಿ ಇಂತಹ ಅವೈಜ್ಞಾನಿಕ ಸಂದೇಶಗಳನ್ನು ಸಾರಬೇಡಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದರು.

ರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳಬೇಡಿ : ನಾವು ಕೂಡ ರಾಮನಿಗೆ ಕೈ ಮುಗಿಯುತ್ತೇವೆ. ಮಂದಿರ ಉದ್ಘಾಟನೆ ಆದ ಬಳಿಕ ನಾವು ಕೂಡ ಭೇಟಿ ಕೊಡುತ್ತೇವೆ. ಆದರೆ ರಾಮ ಹಾಗು ಮಂದಿರವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಬಾರದು. ಅದನ್ನು ಬಿಟ್ಟು ಲಕ್ಷಾಂತರ ಹೆಕ್ಟೇರ್ ಜಮೀನಿನಲ್ಲಿ ಕಾರ್ಖಾನೆಗಳನ್ನು ತೆರೆದು ಉದ್ಯೋಗ ಸೃಷ್ಟಿ ಮಾಡುವ ಕಡೆ ಗಮನಿಸಬೇಕಾಗಿದೆ. ಈ ಹಿಂದೆ ರಾಜ್ಯದಲ್ಲಿ ಬರ ಬಂದಾಗ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ಅದೇ ರೀತಿ ನೀವು ಕೂಟ ರೈತರ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸಿದರು.

ಬಿಜೆಪಿ ಬರ ಪರಿಹಾರ ತಂಡ ವಿವಿದೆಡೆ ಭೇಟಿ ನೀಡಿ ಬರದ ಬಗ್ಗೆ ಮಾಹಿತಿ ಪಡೆದಿದೆ. ಅದರಂತೆ ನಿಮ್ಮ ನಾಯಕರಿಗೆ ಸಾಲ ಮನ್ನವನ್ನು ಮಾಡುವಂತೆ ಹೇಳಿ. ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆ ಮಾಡದೆ ಇರುವುದು ಮಲತಾಯಿ ಧೋರಣೆಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಅಯೋಧ್ಯೆ ರಾಮ ಮಂದಿರಕ್ಕಾಗಿ ಸಿದ್ಧವಾದ 108 ಅಡಿ ಉದ್ದದ ಅಗರಬತ್ತಿಯ ಬೃಹತ್​ ಮೆರವಣಿಗೆ - ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.