ಹರಿಹರ : ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಹಕ್ಕಿ ಜ್ವರ ರೋಗವನ್ನು ನಿಯಂತ್ರಿಸಲು ಕೋಳಿ ಫಾರಂನಲ್ಲಿ 90 ದಿನಗಳವರೆಗೆ ಯಾವುದೇ ಕೋಳಿಗಳನ್ನು ಸಾಕದಂತೆ ಫಾರಂ ಮಾಲೀಕರಿಗೆ ಶಾಸಕ ಎಸ್.ರಾಮಪ್ಪ ಸೂಚಿಸಿದರು.
ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ಹಿನ್ನೆಲೆ ಸಾವಿರಾರು ಕೋಳಿಗಳನ್ನು ಕಲ್ಲಿಂಗ್ ಮಾಡಲಾಗಿದ್ದು, ಗ್ರಾಮದಲ್ಲಿ ಮತ್ತು ಕೋಳಿ ಫಾರಂನಲ್ಲಿ ವಿವಿಧ ಔಷಧಗಳನ್ನು ಸಿಂಪಡಿಸಲಾಗಿದೆ. ಪಶು ಇಲಾಖೆಯ ಆದೇಶದ ಮೇರೆಗೆ 90 ದಿನಗಳು ಗ್ರಾಮದಲ್ಲಿ ನಿಗಾ ಇರಿಸಲಾಗುವುದು ಎಂದು ಹೇಳಿದರು.
ಕೋಳಿ ಫಾರಂಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಲಾಗಿದೆ. ಇನ್ನೂ ಸರ್ಕಾರದಿಂದ ಕೋಳಿ ಮಾಲೀಕರಿಗೆ ಪರಿಹಾರವನ್ನು ನೀಡುವ ಭರವಸೆ ನೀಡಿದರು.
ಅಧಿಕಾರಿಗಳ ಆದೇಶವನ್ನು ಗ್ರಾಮಸ್ಥರು ಹಾಗೂ ಕೋಳಿ ಫಾರಂ ಮಾಲೀಕರು ಪಾಲಿಸುತ್ತೇವೆ ಎಂದು ಒಪ್ಪಿದ್ದಾರೆ.
ಪಶು ಇಲಾಖೆ ಜಿಲ್ಲಾ ನಿರ್ದೇಶಕ ಡಾ.ಬಾಸ್ಕರ್ ರಾವ್, ತಾಲೂಕು ಅಧಿಕಾರಿ ಡಾ.ನಂದನ್, ಆರೋಗ್ಯ ಇಲಾಖೆಯ ತಾಲೂಕು ಅಧಿಕಾರಿ ಚಂದ್ರಮೋಹನ್, ಹಿರಿಯ ಸಹಾಯಕ ಹೊರಕೆರೆ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಊರಿನ ಗ್ರಾಮಸ್ಥರು ಇದ್ದರು.