ದಾವಣಗೆರೆ: ಕೇಂದ್ರ ಸರ್ಕಾರ ಕರ್ನಾಟಕದ ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಮಾಡಿದ್ದೇ ಅದಲ್ಲಿ ಕೇಂದ್ರನೂ ಇರಲ್ಲ, ರಾಜ್ಯನೂ ಇರಲ್ಲ ಎಂಬ ಕೆಟ್ಟ ಪರಿಸ್ಥಿತಿ ಬರಲಿದೆ ಎಂದು ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ಹರಿಹರ ಪಟ್ಟಣದಲ್ಲಿ ನಡೆದ ಪಂಚಮಸಾಲಿ 2ಎ ಮೀಸಲಾತಿಗಾಗಿ ಪಂಚಲಕ್ಷ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ಕರ್ನಾಟದಲ್ಲಿ ನೀವು ಅಡ್ಡಾಡುತ್ತಿದ್ದೀರಿ ಎಂದರೆ ಅದಕ್ಕೆ ವೀರಶೈವ ಲಿಂಗಾಯತರು ಕಾರಣ. ನೀವು ರಾಜ್ಯದಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ವೀರಶೈವ ಲಿಂಗಾಯತರಿಂದ ಎನ್ನುವುದನ್ನು ಕೇಂದ್ರದವರು ಮರೆಯಬಾರದು.
ವೀರಶೈವ ಲಿಂಗಾಯತ ಸಮುದಾಯದ 2ಎ ಮೀಸಲಾತಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಡ್ಡಿ ಮಾಡಿದ್ದಾರೆ. ಹೀಗೆ ಮುಂದುವರಿದರೆ ನೀವು ಕೇಂದ್ರದಲ್ಲೂ ಇರಲ್ಲ, ರಾಜ್ಯದಲ್ಲೂ ಇರಲ್ಲ. ಯಡಿಯೂರಪ್ಪ ಶೀಘ್ರದಲ್ಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡಲಿ.
ಇಲ್ಲವಾದರೆ, ಎಲ್ಲ ವೀರಶೈವ ಲಿಂಗಾಯತ ಸಮುದಾಯದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅಪಕ್ಷ, ಈ ಪಕ್ಷ ಅಂತಲ್ಲ. ಪ್ರತಿಯೊಬ್ಬ ವೀರಶೈವ ಲಿಂಗಾಯತ ಶಾಸಕರು ರಾಜೀನಾಮೆ ನೀಡಿ ಎಂದರು.