ETV Bharat / state

ಸ್ಥಳೀಯ ಮಟ್ಟದಲ್ಲೂ ಆಪರೇಷನ್​ ಕಮಲ: ಸಚಿವ ಭೈರತಿ ಬಸವರಾಜ್​ ಸುಳಿವು - Davangere latest news

ಕೆಪಿಸಿಸಿ ಅಧ್ಯಕ್ಷರು ಬಿಜೆಪಿಯವರನ್ನು ಸೆಳೆಯಲು ಆಹ್ವಾನ ಮಾಡಿದ್ದಾರೆ. ಹಾಗಾಗಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವು ಕಾಂಗ್ರೆಸ್ಸಿಗರನ್ನು ಸೆಳೆಯುತ್ತೇವೆ. ಬಿಜೆಪಿಯಲ್ಲಿ ನಾವು 17 ಶಾಸಕರು ಸಂತೋಷದಿಂದ ನೆಮ್ಮದಿಯಾಗಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.

bhairati-basavaraj
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್
author img

By

Published : Jul 13, 2021, 2:06 PM IST

Updated : Jul 13, 2021, 2:27 PM IST

ದಾವಣಗೆರೆ: ನಾವು ಕಾಂಗ್ರೆಸ್​ನಲ್ಲಿರುವ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳನ್ನು ಸೆಳೆಯುತ್ತೇವೆ ಎಂದು ನಗರಾಭಿವೃದ್ಧಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿಯವರನ್ನು ಸೆಳೆಯಲು ಆಹ್ವಾನ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಟಾಂಗ್ ನೀಡಿದ್ದಾರೆ.

ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಬಿಜೆಪಿಯವರನ್ನು ಸೆಳೆಯಲು ಆಹ್ವಾನ ನೀಡಿದ್ದಾರೆ. ಹಾಗಾಗಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವು ಕಾಂಗ್ರೆಸ್ಸಿಗರನ್ನು ಸೆಳೆಯುತ್ತೇವೆ ಎನ್ನುವ ಮೂಲಕ ಸ್ಥಳೀಯ ಮಟ್ಟದಲ್ಲೂ ಆಪರೇಷನ್​ ಕಮಲದ ಸುಳಿವನ್ನು ನೀಡಿದ್ರು. ಬಿಜೆಪಿಯಲ್ಲಿ ನಾವು 17 ಶಾಸಕರು ಸಂತೋಷದಿಂದ ನೆಮ್ಮದಿಯಾಗಿದ್ದೇವೆ. ಕಮಲದ ಚಿಹ್ನೆಯಡಿ ಬಂದ ನಾವು ನೆಮ್ಮದಿಯಾಗಿ ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.

ನಾನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾದ ನಂತರ 17 ಬಾರಿ ಜಿಲ್ಲೆಗೆ ಬಂದಿದ್ದೇನೆ. ಇನ್ಮುಂದೆ 10 ದಿನಗಳಿಗೊಮ್ಮೆ ದಾವಣಗೆರೆ ಜಿಲ್ಲೆಗೆ ಬರುತ್ತೇನೆ. ನಗರ ಪ್ರದೇಶ ಬಿಟ್ಟು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡುತ್ತೇವೆ. ಗ್ರಾಮಗಳಲ್ಲಿನ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದ್ರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್

ಜಿಲ್ಲೆಯಲ್ಲಿ ಕೋವಿಡ್​ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡುತ್ತಿದ್ದು, ಒಂದು ವೇಳೆ ಬಿಪಿಎಲ್ ವ್ಯಾಪ್ತಿಗೆ ಬರುವುದಿಲ್ಲವೆಂದರೆ ಅಂತಹ ಕುಟುಂಬಗಳಿಗೆ ವೈಯಕ್ತಿಕವಾಗಿ ಪರಿಹಾರ ನೀಡುವುದಾಗಿ ಸಚಿವ ಭಯರತಿ ಬಸವರಾಜು ಹೇಳಿದ್ರು.

Last Updated : Jul 13, 2021, 2:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.