ETV Bharat / state

'ವೆಲ್​ಕಮ್​ ಟು ದಾವಣಗೆರೆ ರೀ ಬಿಸಿ ಪಾಟೀಲ್‌ರೇ'.. ಕೌರವನ ಕಾಲೆಳೆದ ಸಚಿವ ಭೈರತಿ ಬಸವರಾಜ್

ನಂತರ ಸಚಿವ ಬಿ ಸಿ ಪಾಟೀಲ್ ತಮ್ಮ ಮೊಬೈಲ್‌ಗಳೆರಡನ್ನೂ ಹೊರತೆಗೆದು ಕರೆ ಬಂದಿದೆಯೋ, ಇಲ್ವೋ ಎಂದು ಪರಿಶೀಲನೆ ನಡೆಸಿ, ನನಗೆ ಯಾವುದೇ ಕರೆ ಬಂದಿಲ್ಲ ಬಿಡಿ ಎಂದು ಹೇಳಿ ಮುನ್ನಡೆದರು..

BC Patil talk with bhairathi basavaraj
ಬಿಸಿ ಪಾಟೀಲ್ ಜೊತೆ ಸಚಿವ ಭೈರತಿ ಬಸವರಾಜ್
author img

By

Published : Jun 8, 2021, 5:22 PM IST

ದಾವಣಗೆರೆ : ವೆಲ್​ಕಮ್​ ಟು ದಾವಣಗೆರೆ ರೀ ಬಿಸಿ ಪಾಟೀಲ್‌ರೇ.. ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಸಂಸದ ಜಿ ಎಂ ಸಿದ್ದೇಶ್ವರ್ ಇಬ್ಬರೂ ಬಿ ಸಿ ಪಾಟೀಲ್ ಮೇಲೆ ಸ್ವಲ್ಪ ಮಟ್ಟಿಗೆ ಗರಂ ಆದ ಘಟನೆ ನಗರದಲ್ಲಿ ನಡೆಯಿತು.

ಸಚಿವ ಬಿ ಸಿ ಪಾಟೀಲ್​ ಕಾಲೆಳೆದ ಸಚಿವ ಭೈರತಿ ಬಸವರಾಜ್

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೃಷಿ ಇಲಾಖೆಗೆ ಸಂಬಂಧಿಸಿದ ಸಭೆಗಾಗಿ ಆಗಮಿಸಿದ್ದ ಸಚಿವ ಬಿ ಸಿ ಪಾಟೀಲ್​ ಅವರು, ದೂರವಾಣಿ ಕರೆ ಸ್ವೀಕರಿಸದಿದ್ದರಿಂದ ನಗರಕ್ಕೆ ಬಂದ ಸಚಿವ ಭೈರತಿ ಬಸವರಾಜ್ ವೆಲ್​ಕಮ್​ ಹೇಳುವುದರ ಮೂಲಕ ಕಾಲೆಳೆದಿದ್ದು, ಇತ್ತ ಸಂಸದ ಜಿ ಎಂ ಸಿದ್ದೇಶ್ವರ್ ಕೂಡ ನಮ್ಮ ಕರೆನೂ ಸ್ವಲ್ಪ ಸ್ವೀಕರಿಸಿ ಪಾಟೀಲ್‌ರೇ ಎಂದರು.

ನಂತರ ಸಚಿವ ಬಿ ಸಿ ಪಾಟೀಲ್ ಏರು ಧ್ವನಿಯಲ್ಲಿ ಮಾತನಾಡಿ, ದಾವಣಗೆರೆಗೆ ಬರುತ್ತಿದ್ದಂತೆ ಜನ ನಮ್ಮ ಮೇಲೆ ಆಪಾದನೆ ಮಾಡ್ತಿದ್ದಾರೆ ಎಂದು ಸಂಸದ ಹಾಗೂ ಸಚಿವ ಭೈರತಿ ಬಸವರಾಜ್ ಅವರಿಗೆ ಟಾಂಗ್ ನೀಡಿದ್ರು.

ನಂತರ ಸಚಿವ ಬಿ ಸಿ ಪಾಟೀಲ್ ತಮ್ಮ ಮೊಬೈಲ್‌ಗಳೆರಡನ್ನೂ ಹೊರತೆಗೆದು ಕರೆ ಬಂದಿದೆಯೋ, ಇಲ್ವೋ ಎಂದು ಪರಿಶೀಲನೆ ನಡೆಸಿ, ನನಗೆ ಯಾವುದೇ ಕರೆ ಬಂದಿಲ್ಲ ಬಿಡಿ ಎಂದು ಹೇಳಿ ಮುನ್ನಡೆದರು.

ಓದಿ: ಸಿಎಂ ವಿರೋಧಿ ಪಡೆ ಶಾಸಕಾಂಗ ಪಕ್ಷದ ಸಭೆಗೆ ಪಟ್ಟು.. ಬಿಜೆಪಿ ಹೈಕಮಾಂಡ್‌ಗೆ ಬಿಎಸ್‌ವೈ ಬಿಸಿ ತುಪ್ಪ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.