ETV Bharat / state

ಶಾಲೆಯ ಆವರಣದಲ್ಲಿ ಕುಡುಕರ ದಿನನಿತ್ಯ ಪಾರ್ಟಿ.. ಗ್ರಾಮಸ್ಥರ ಆಕ್ರೋಶ - ದಾವಣಗೆರೆ ತಾಲೂಕಿನ ಜರೇಕಟ್ಟೆ ಗ್ರಾಮ

ದಾವಣಗೆರೆ ನಗರದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಜರೇಕಟ್ಟೆ ಗ್ರಾಮದ ಸರ್ಕಾರಿ ಅನುದಾನಿತ ಶ್ರೀ ಆಂಜನೇಯಸ್ವಾಮಿ ವಸತಿ ಪ್ರೌಢಶಾಲೆಯ ಆವರಣದಲ್ಲಿ ಕುಡುಕರು ಸಂಜೆಯಾಗುತ್ತಿದ್ದಂತೆ ಪಾರ್ಟಿಯ ಅಡ್ಡೆ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿ ಇಡೀ ಕುಡಿಯುವ‌ ಮೂಲಕ ಕುಡಿದ ಮತ್ತಿನಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಬಿಸಾಡಿ ಹೋಗ್ತಿದ್ದು, ಶಾಲೆಯ ಇಡೀ ಆವರಣ ಬಿಯರ್ ಬಾಟಲ್​ಗಳಿಂದ ತುಂಬಿ ಹೋಗಿದೆ.

ಬಿಯರ್ ಬಾಟಲ್
ಬಿಯರ್ ಬಾಟಲ್
author img

By

Published : Dec 18, 2022, 10:20 PM IST

ಶಾಲೆಯ ಆವರಣದಲ್ಲಿ ಕುಡುಕರ ದಿನನಿತ್ಯ ಪಾರ್ಟಿ ಕುರಿತು ಗ್ರಾಮಸ್ಥರ ಆಕ್ರೋಶ

ದಾವಣಗೆರೆ: ಸರ್ಕಾರಿ ಶಾಲೆಯ ಆವರಣವನ್ನು ಕುಡುಕರು ಪಾರ್ಟಿ ಅಡ್ಡೆ ಮಾಡಿಕೊಂಡಿದ್ದಾರೆ. ಪ್ರತಿನಿತ್ಯ ರಾತ್ರಿ ಮದ್ಯ ಸೇವಿಸುವ ಕುಡುಕರು ಬಿಯರ್ ಬಾಟಲ್​ಗಳು ಶಾಲೆಯ ಆವರಣದಲ್ಲೇ ಎಸೆದಿರುವ ಅಚ್ಚರಿಯ ಘಟನೆ ದಾವಣಗೆರೆ ತಾಲೂಕಿನ ಜರೇಕಟ್ಟೆ ಗ್ರಾಮದ ಸರ್ಕಾರಿ ಅನುದಾನಿತ ಶ್ರೀ ಆಂಜನೇಯಸ್ವಾಮಿ ವಸತಿ ಪ್ರೌಢಶಾಲೆಯ ಆವರಣದಲ್ಲಿ ನಡೆದಿದೆ.

ನಗರದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಜರೇಕಟ್ಟೆ ಗ್ರಾಮದ ಈ ವಸತಿ ಪ್ರೌಢಶಾಲೆಯ ಆವರಣವನ್ನು ಕುಡುಕರು ಸಂಜೆಯಾಗುತ್ತಿದ್ದಂತೆ ಪಾರ್ಟಿಯ ಅಡ್ಡೆ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿ ಇಡೀ ಕುಡಿಯುವ‌ ಮೂಲಕ ಕುಡಿದ ಮತ್ತಿನಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಬಿಸಾಡಿ ಹೋಗ್ತಿದ್ದು, ಶಾಲೆಯ ಇಡೀ ಆವರಣ ಬಿಯರ್ ಬಾಟಲ್​ಗಳಿಂದ ತುಂಬಿ ಹೋಗಿದೆ.

ಇದೇ ವೇಳೆ ಯುವ ಬ್ರಿಗೇಡ್ ದಾವಣಗೆರೆ ಜಿಲ್ಲಾ ಸಂಚಾಲಕ ಗಜೇಂದ್ರ ಪ್ರತಿಕ್ರಿಯಿಸಿ, ಇದು ಆಘಾತಕಾರಿ ವಿಚಾರ. ಸರ್ಕಾರಿ ಶಾಲೆ ಉಳಿಸುವ ಕೆಲಸ ಮಾಡ್ಬೇಕಾಗಿದೆ. ಇಲ್ಲಿ ಸಾವಿರಾರು ಬಿಯರ್ ಬಾಟಲ್​ಗಳು ದೊರೆತಿರುವುದು ಮಕ್ಕಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಬಿಯರ್ ಬಾಟಲ್​ಗಳನ್ನು ದೂರ ಸಾಗಿಸಲಾಗಿದೆ ಎಂದರು.

ಸಾವಿರಾರು ಬಾಟಲ್ ಸ್ವಚ್ಛಗೊಳಿಸಿದ ಯುವಕರು‌‌‌.. ಶಾಲೆಯ ಆವರಣದಲ್ಲಿ 1000 ಕ್ಕೂ ಹೆಚ್ಚು ಮಧ್ಯದ ಬಾಟಲಿಗಳು ದೊರೆತಿದ್ದು, ಬಿಯರ್ ಬಾಟಲ್​ಗಳನ್ನು ದಾವಣಗೆರೆಯ ಯುವಬ್ರಿಗೇಡ್ ನ ಯುವಕರ ತಂಡ ಸ್ವಚ್ಚಗೊಳಿಸಿದ್ದಾರೆ. ಇನ್ನು ಶಾಲಾಮಕ್ಕಳು ಆಟವಾಡುವಾಗ ಗಾಜಿನ ಚೂರುಗಳು ಚುಚ್ಚಿ ಗಾಯಗಳಾಗಿವೆ. ಅಲ್ಲದೆ ಮಾನಸಿಕವಾಗಿ ಮಕ್ಕಳಲ್ಲಿ ಮದ್ಯದ ಬಗೆಗಿನ ಆಸಕ್ತಿ ಹೆಚ್ಚುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಸಾಕಷ್ಟು ಬಾರಿ ಜರೇಕಟ್ಟೆ ಗ್ರಾಮಸ್ಥರು ಕುಡುಕರಿಗೆ ಉಗಿದು ಉಪ್ಪಿನಕಾಯಿ ಹಾಕಿದ್ರು ಯಾವುದೇ ಪ್ರಯೋಜನ ಆಗಿಲ್ಲ. ಅಲ್ಲೇ ಸಾಕಷ್ಟು ಗಲೀಜು ಮಾಡ್ತಿದ್ದಾರೆಂದು ಪೋಷಕರಾದ ಸರೋಜಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಅವಾಂತರ.. ಶಾಲೆಯ ಸುತ್ತಮುತ್ತ ಕಾಂಪೌಂಡ್ ಇಲ್ಲದೇ ಇರುವುದೇ ಕುಡುಕರ ತಾಣವಾಗಲು ಪ್ರಮುಖ ಕಾರಣವಾಗಿದೆ. ಸಂಬಂಧಪಟ್ಟವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನ ಆಗಿಲ್ಲವಂತೆ. ಇದನ್ನು ಮನಗಂಡ ಯುವಬ್ರಿಗೇಡ್ ಯುವಕರು ದಾವಣಗೆರೆ ತಂಡ ಶಾಲಾ ಆವರಣದಲ್ಲಿ ಬಿದ್ದಿದ್ದ 1000 ಕ್ಕೂ ಹೆಚ್ಚು ಮದ್ಯದ ಬಾಟಲಿಗಳನ್ನು ಸೂಕ್ತ ರೀತಿಯಲ್ಲಿ ಸೂಕ್ತ ಜಾಗದಲ್ಲಿ ವಿಸರ್ಜಿಸಿ ಗ್ರಾಮದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ರು.

ಓದಿ: ಮಧ್ಯರಾತ್ರಿ ಠಾಣೆಯಲ್ಲೇ ಎಣ್ಣೆ ಪಾರ್ಟಿ: ಎಸ್​ಐ ಮೇಲೆ ಹೆಡ್ ಕಾನ್‌ಸ್ಟೇಬಲ್ ಹಲ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.