ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಮನೆಗೆ ನುಗ್ಗಿ ಸಿನಿಮೀಯ ರೀತಿಯಲ್ಲಿ ವೃದ್ಧೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಮೀನುಗಾರನಹಳ್ಳಿಯಲ್ಲಿ ನಡೆದಿದೆ.
ಹಾಲಮ್ಮ (70) ಹಲ್ಲೆಗೊಳಗಾದ ವೃದ್ಧೆ. ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದ ಹಾಲಮ್ಮನ ಪುತ್ರ ನಾಗರಾಜ್ಗೆ ಸಹ ಗಾಯಗಳಾಗಿದ್ದು, ಇಬ್ಬರನ್ನು ಜಗಳೂರು ತಾಲೂಕು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮನೆಮುಂದೆ ನೀರು ಬಿಟ್ಟರು ಎಂಬ ಕಾರಣಕ್ಕೆ ಪಕ್ಕದ ಮನೆಯವರು ಬಂದು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಬಸವನಗೌಡ, ಕಲ್ಲಪ್ಪ, ಮಲ್ಲೇಶ್, ಗಿರಿಜಮ್ಮ ಹಾಗೂ ಶಿವಮ್ಮ ಎಂಬುವರು ಹಾಲಮ್ಮನ ಮೇಲೆ ಹಲ್ಲೆ ಮಾಡಿದ್ದು, ವೃದ್ಧೆಯ ತಲೆ ಹಾಗೂ ಕಾಲಿಗೆ ಪೆಟ್ಟು ಬಿದ್ದಿದೆ.
ಈ ಘಟನೆ ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿದೆ.