ETV Bharat / state

ಸೋಲಾರ್​ ದೀಪ ಅಳವಡಿಕೆ ವಿಚಾರಕ್ಕೆ ಗ್ರಾಪಂ ಉಪಾಧ್ಯಕ್ಷೆ ಮೇಲೆ ಹಲ್ಲೆ ಆರೋಪ: ದೂರು ದಾಖಲು - ರಸ್ತೆ ತಡೆದು ಪ್ರತಿಭಟನೆ

ಸೋಲಾರ್​ ದೀಪ ಅಳವಡಿಕೆ ಸಂಬಂಧ ವ್ಯಕ್ತಿಯೋರ್ವ ಗ್ರಾಪಂ ಉಪಾಧ್ಯಕ್ಷೆ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

assault-on-gram-panchayath-vice-president-in-davanagere
ಸೋಲಾರ್​ ದೀಪ ಅಳವಡಿಕೆ ವಿಚಾರಕ್ಕೆ ಗ್ರಾಪಂ ಉಪಾಧ್ಯಕ್ಷೆ ಮೇಲೆ ಹಲ್ಲೆ: ದೂರು ದಾಖಲು
author img

By ETV Bharat Karnataka Team

Published : Oct 18, 2023, 7:01 AM IST

ದಾವಣಗೆರೆ : ಸೋಲಾರ್‌ ದೀಪ ಅಳವಡಿಕೆ ಸಂಬಂಧ ವ್ಯಕ್ತಿಯೋರ್ವ ಗ್ರಾಮ‌ ಪಂಚಾಯತಿ ಉಪಾಧ್ಯಕ್ಷೆಯ ಮೇಲೆ ಹಲ್ಲೆ ನಡೆಸಿರುವ ಆರೋಪ ಪ್ರಕರಣ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಬನ್ನಿಹಟ್ಟಿಯಲ್ಲಿ ನಡೆದಿದೆ. ಹೊಸಕೆರೆ ಗ್ರಾಮ ಪಂಚಾಯತ್​ ಉಪಾಧ್ಯಕ್ಷೆ ನಿಂಗಮ್ಮ ಹಲ್ಲೆಗೊಳಗಾಗದ ‌ಮಹಿಳೆ. ಇದೇ ಗ್ರಾಮದ ಮಾರಪ್ಪ ಎಂಬಾತನೇ ಹಲ್ಲೆ‌ ನಡೆಸಿದ ಆರೋಪಿ.

ಈ ಹಿಂದೆ ಗ್ರಾಮದಲ್ಲಿ ಸೋಲಾರ್ ದೀಪ ಅಳವಡಿಕೆ ಮಾಡಲಾಗಿತ್ತು. ತಮ್ಮ‌ ಮನೆ ಮುಂದೆ ಸೋಲಾರ್ ದೀಪ ಅಳವಡಿಕೆ ಮಾಡಬೇಕು ಇಲ್ಲವಾದರೆ ಕಂಬಗಳನ್ನು ಮುರಿದು ಹಾಕುತ್ತೇನೆ ಎಂದು ಮಾರಪ್ಪ ಕಾಲ್ಕೆರೆದು ಜಗಳಕ್ಕೆ ಬಂದಿದ್ದ. ಈ ವೇಳೆ ಮಾರಪ್ಪ ಹಾಗೂ ಉಪಾಧ್ಯಕ್ಷೆ ನಿಂಗಮ್ಮ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಬಳಿಕ ಮಾರಪ್ಪ ನಿಂಗಮ್ಮಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮನಬಂದಂತೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗ್ರಾಮಸ್ಥ ಬಸವರಾಜಪ್ಪ ಎಂಬವರು ಇಬ್ಬರ ಜಗಳ ಬಿಡಿಸಿ ಹಲ್ಲೆಗೊಳಗಾಗದ ನಿಂಗಮ್ಮ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಲ್ಲೆ ಸಂಬಂಧ ಮಾರಪ್ಪನ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಘಟನೆ- ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ.. ರಸ್ತೆ ತಡೆದು ಪ್ರತಿಭಟನೆ : ಕಲಬುರಗಿ ಜಿಲ್ಲೆಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿ ಗ್ರಾಮದಲ್ಲಿ‌ ಪ್ರತಿಭಟನೆ ನಡೆಸಲಾಯಿತು. ಗ್ರಾಮದ ಬಳಿ ಇರುವ ಬಿರೂರು - ಸಮ್ಮಸಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬಸವಣ್ಣನ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಬೇಕೆಂದು ಒತ್ತಾಯಿಸಿದರು. ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ವ್ಯತ್ಯಯ ಉಂಟಾಗಿತ್ತು.

ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಕಿ ಗ್ರಾಮದಲ್ಲಿ ಕಿಡಿಗೇಡಿಗಳು ಬಸವೇಶ್ವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ್ದಾರೆ. ಸಮಾನತೆಯ ಹರಿಕಾರ ಬಸವಣ್ಣನ ವಿಚಾರಧಾರೆ ಮೇಲೆ ಸಂವಿಧಾನ ಆಶಯದಲ್ಲಿ ರಚನೆ ಆಗಿದೆ.‌ ಇಂತಹ ಮಹಾನ್ ಚೇತನದ ಭಾವಚಿತ್ರಕ್ಕೆ ಬೆಂಕಿ ಹಚ್ಚಲಾಗಿದೆ. ಇದು ಸರಿಯಲ್ಲ. ಇಂತಹ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ವಾಮೀಜಿ ಇದೇ ವೇಳೆ ಆಗ್ರಹಿಸಿದರು.

ಇದನ್ನೂ ಓದಿ : ಕಲಬುರಗಿ : ಗೃಹಿಣಿ ಅನುಮಾನಾಸ್ಪದ ಸಾವು.. ಪತಿ ವಿರುದ್ಧ ವಿಷ ಕುಡಿಸಿ ಕೊಲೆಗೈದ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.