ETV Bharat / state

ಕೆಪಿಎಸ್​​ಸಿ ಪರೀಕ್ಷಾ ಅಕ್ರಮ: ಪೊಲೀಸ್ ಪೇದೆ​ ಸೇರಿ ಇಬ್ಬರು ಅರೆಸ್ಟ್​​ - ಅಕ್ರಮದಲ್ಲಿ ಪೊಲೀಸರು ಭಾಗಿ

ಕೆಪಿಎಸ್​ಸಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಮತ್ತಿಬ್ಬರು ಪೊಲೀಸರ ಅತಿಥಿಗಳಾಗಿದ್ದು, ಇನ್ನೂ ಹಲವು ಮಂದಿಯ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಪೊಲೀಸರು ತೀವ್ರ ಶೋಧದಲ್ಲಿ ತೊಡಗಿದ್ದಾರೆ.

Arrested In Kpsc Exam Illegal case
author img

By

Published : Jul 30, 2019, 7:51 PM IST

ದಾವಣಗೆರೆ: ಕೆಪಿಎಸ್​ಸಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಅಪರಾಧ ವಿಭಾಗದ ಪೊಲೀಸರ ಬೇಟೆ ಮುಂದುವರಿದಿದೆ. ಇಂದು ಪೊಲೀಸ್​ ಕಾನ್ಸ್​ಸ್ಟೇಬಲ್​ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧನಕ್ಕೆ ಒಳಗಾದವರ ಸಂಖ್ಯೆ 16ಕ್ಕೆ ಏರಿದೆ.

ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಪೇದೆ ಮಂಜುನಾಥ ಹಾಗೂ ದಾವಣಗೆರೆಯ ನಿಟ್ಟುವಳ್ಳಿಯ ನಿವಾಸಿ ರಾಜಪ್ಪ ಬಂಧಿತರು. ಈ ಅಕ್ರಮದಲ್ಲಿ ಭಾಗಿಯಾದವರ ಹೆಡೆಮುರಿ ಕಟ್ಟುತ್ತಿರುವ ಪೊಲೀಸರು, ದಿನ ಕಳೆದಂತೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಳೆದ ಶನಿವಾರವಷ್ಟೇ ಅಕ್ರಮದಲ್ಲಿ ಭಾಗಿಯಾಗಿದ್ದ ಬೆಂಗಳೂರು ಜಲಮಂಡಳಿ ಸಹಾಯಕ ಸಾಗರ್ ಕರ್ಕಿ, ಕಲಬುರಗಿ ರೇಷ್ಮೆ ಪದವಿ ಕಾಲೇಜು ಪ್ರಾಚಾರ್ಯ ಶ್ರೀಶೈಲ್ ಹಳ್ಳಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಹಾವೇರಿಯ ಮಾರುತಿ ಎಂಬುವರನ್ನು ಬಂಧಿಸಿದ್ದರು.

ಈ ಪ್ರಕರಣದ ಜಾಲ ರಾಜ್ಯಾದ್ಯಂತ ಹರಡಿರುವ ಶಂಕೆ ವ್ಯಕ್ತವಾಗಿದೆ. 2017ರ ಅಕ್ಟೋಬರ್​ನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕರ ನೇಮಕಾತಿಗಾಗಿ ಪರೀಕ್ಷೆ ನಡೆದಿತ್ತು. ದಾವಣಗೆರೆಯ ನೂತನ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಕೆಲವರು ಮೈಕ್ರೋ ಫೋನ್​​ಗಳನ್ನು ಬಳಸಿ ಅಕ್ರಮ ಎಸಗಿದ್ದರು. ಈ ವೇಳೆ ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು.

Intro:KN_DVG_30_KPSC ARREST_SCRIPT_01_7203307

REPORTER : YOGARAJ G. H.

ಕೆ ಪಿ ಎಸ್ ಸಿ ಪರೀಕ್ಷಾ ಅಕ್ರಮ - ಪ್ರಕರಣ ಸಂಬಂಧ ಪೊಲೀಸ್ ಪೇದೆ ಸೇರಿ ಇಬ್ಬರ ಬಂಧನ... ಅರೆಸ್ಟ್ ಆದವರ ಸಂಖ್ಯೆ 16 ಕ್ಕೆ ಏರಿಕೆ

ದಾವಣಗೆರೆ : ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಅಪರಾಧ ವಿಭಾಗದ ಪೊಲೀಸರ ಬೇಟೆ ಮುಂದುವರಿದಿದ್ದು, ಮತ್ತೆ ಇದೀಗ ಇಬ್ಬರು ಆರೋಪಿಗಳನ್ನು
ಬಂಧಿಸಿದ್ದಾರೆ.

ಕೆ ಪಿ ಎಸ್ ಸಿ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿರುವವರ ಹೆಡೆಮುರಿ ಕಟ್ಟುತ್ತಿರುವ ಪೊಲೀಸರು ದಿನ ಕಳೆದಂತೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇಬ್ಬರು ಆರೋಪಿಗಳ
ಬಂಧನದಿಂದ ಇದುವರೆಗೆ ಪ್ರಕರಣಕ್ಕೆ ಸಂಬಂಧ ಅರೆಸ್ಟ್ ಆದವರ ಸಂಖ್ಯೆ 16 ಕ್ಕೆ ಏರಿಕೆಯಾದಂತಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಪೇದೆ ಮಂಜುನಾಥ ಹಾಗೂ ದಾವಣಗೆರೆಯ
ನಿಟ್ಟುವಳ್ಳಿಯ ನಿವಾಸಿ ರಾಜಪ್ಪ ಎಂಬುವರನ್ನು ಬಂಧಿಸಲಾಗಿದೆ.

ಕಳೆದ ಶನಿವಾರವಷ್ಟೇ ದಾವಣಗೆರೆ ಅಪರಾಧ ವಿಭಾಗದ ಪೊಲೀಸರು ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿದ್ದ ಬೆಂಗಳೂರು ಜಲ ಮಂಡಳಿ ಸಹಾಯಕ ಸಾಗರ್ ಕರ್ಕಿ, ಕಲಬುರ್ಗಿ ರೇಷ್ಮೆ ಪದವಿ
ಕಾಲೇಜು ಪ್ರಾಚಾರ್ಯ ಶ್ರೀಶೈಲ್ ಹಳ್ಳಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಹಾವೇರಿ ಮೂಲದ ಮಾರುತಿ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿದವರ ಪೈಕಿ ಇಲ್ಲಿಯವರೆಗೆ ಒಟ್ಟು 16 ಆರೋಪಿಗಳ ಬಂಧನವಾಗಿದ್ದು, ಇದರ ಜಾಲ ರಾಜ್ಯಾದ್ಯಂತ ಹರಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ
ಮುಂದುವರಿದಿದೆ. 2017 ರ ಅಕ್ಟೋಬರ್ ನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕರ ನೇಮಕಾತಿಗಾಗಿ ಪರೀಕ್ಷೆ ನಡೆದಿತ್ತು. ದಾವಣಗೆರೆಯ ನೂತನ ಕಾಲೇಜಿನಲ್ಲಿ ನಡೆದ
ಪರೀಕ್ಷೆಯಲ್ಲಿ ಕೆಲವರು ಮೈಕ್ರೋ ಫೋನ್ ಗಳನ್ನು ಬಳಸಿ ಅಕ್ರಮ ಎಸಗಿದ್ದರು. ಈ ವೇಳೆ ಮೂವರು ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.

Body:KN_DVG_30_KPSC ARREST_SCRIPT_01_7203307

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.