ದಾವಣಗೆರೆ: ಅಡಿಕೆ ತೋಟದಲ್ಲಿ ಗಾಂಜಾ ಬೆಳೆಸಿದ್ದ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ರೈತನನ್ನು ಐಜಿಪಿ ಜಾಗೃತ ದಳ ಬಂಧಿಸಿದ್ದು, ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಲ್ಲೂರು ಗ್ರಾಮದ ಪಾಲಾಕ್ಷಪ್ಪ ಎಂಬ ರೈತನನ್ನು ಬಂಧಿಸಲಾಗಿದೆ. ಈತ ಇಟ್ಟಿಗೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿನ ತಮ್ಮ ಅಡಿಕೆ ತೋಟದಲ್ಲಿ ಯಾರಿಗೂ ಗೊತ್ತಾಗದ ಹಾಗೆ 40 ಗಾಂಜಾ ಗಿಡಗಳನ್ನು ಬೆಳೆಸಿದ್ದನು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿವೈಎಸ್ಪಿ ತಿರುಮಲೇಶ್ ಹಾಗೂ ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಮನೋಳಿ ತಂಡ, 50 ಸಾವಿರ ರೂಪಾಯಿ ಮೌಲ್ಯದ 10 ಕೆ.ಜಿ ಹಸಿ ಗಾಂಜಾ ಹಾಗೂ ಮನೆಯಲ್ಲಿಟ್ಟಿದ್ದ 400 ಗ್ರಾಂ ಒಣ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.