ದಾವಣಗೆರೆ: ಜಲ ಸಿರಿ ಯೋಜನೆಯಡಿ ನಗರಕ್ಕೆ ಶುದ್ಧವಾದ ಕುಡಿಯುವ ನೀರು ಪೂರೈಸುವ ಸಲುವಾಗಿ ಮೀಟರ್ಗಳನ್ನು ಅಳವಡಿಸಿ ವರ್ಷಗಳೇ ಉರುಳಿದರೂ ಈವರೆಗೂ ನಗರವಾಸಿಗಳಿಗೆ ಆ ಸೌಭಾಗ್ಯ ಒದಗಿ ಬಂದಿಲ್ಲ!
ಇದನ್ನೂ ಓದಿ...ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಮೀಸಲಾತಿ ಘೋಷಣೆ ಮಾಡ್ತಾರೆ : ಪ್ರಸನ್ನಾನಂದ ಪುರಿ ಶ್ರೀ ವಿಶ್ವಾಸ
₹400 ಕೋಟಿ ಯೋಜನೆ ಇದಾಗಿದ್ದು, ನಗರದ ವಿವಿಧ ಬಡಾವಣೆಗಳಲ್ಲಿ ನೀರಿನ ಮೀಟರ್ ಅಳವಡಿಸಲಾಗಿದೆ. ಆದರೆ ಶುದ್ಧ ಕುಡಿಯುವ ನೀರು ಮಾತ್ರ ಮರೀಚಿಕೆಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು 97,589 ನೀರಿನ ಮೀಟರ್ಗಳನ್ನು ಅಳವಡಿಸುವ ಗುರಿ ಹೊಂದಿದ್ದು, ಈವರೆಗೂ 15,595 ಮನೆಗಳಿಗೆ ಮಾತ್ರ ಪ್ರಾಯೋಗಿಕವಾಗಿ ಅಳವಡಿಸಿದ್ದಾರೆ.
ಈಗಾಗಲೇ 81 ಸಾವಿರ ಮೀಟರ್ಗಳನ್ನು ತರೆಸಿಕೊಂಡಿದ್ದಾರೆ. 2022ರ ಜನವರಿಯೊಳಗೆ ಈ ಕಾಮಗಾರಿ ಮುಗಿಯಬೇಕಿದೆ. ಕೋವಿಡ್ ಬಂದಿದ್ದರಿಂದ ಕೆಲಸ ಆಮೆಗತಿಯಲ್ಲಿ ಸಾಗುತ್ತಿದ್ದು, 2022ರ ಆಗಸ್ಟ್ ವೇಳೆಗೆ ಪೂರ್ಣಗೊಳಿಸುತ್ತೇವೆ ಎನ್ನುತ್ತಾರೆ ಅಧಿಕಾರಿಗಳು. ಈಗ ಅಳವಡಿಸಿರುವ ಮೀಟರ್ಗಳು ಕೇವಲ ನಾಮಕಾವಾಸ್ತೆ ಅಷ್ಟೇ ಎನ್ನುತ್ತಿದ್ದಾರೆ ಸಾರ್ವಜನಿಕರು.
ಎಲ್ಲೆಲ್ಲಿ ಅಳವಡಿಕೆ: ವಿದ್ಯಾನಗರ, ತರಳಬಾಳು ಬಡಾವಣೆ, ಎಂಸಿಸಿ ಬಿ ಬ್ಲಾಕ್, ಎಸ್ಎಸ್ಎಂ ನಗರ, ಮಂಡಕ್ಕಿ ಭಟ್ಟಿ ಲೇಔಟ್, ಪಿಜೆ ಬಡಾವಣೆ, ನಿಜಲಿಂಗಪ್ಪ ಬಡಾವಣೆ.