ETV Bharat / state

ಹರಿಹರ: ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಭಾವಸಾರ ಕ್ಷತ್ರಿಯ ಸಮಾಜದಿಂದ ಕರೆ - ಚೀನಾ ವಿರುದ್ಧ ಹರಿಹರದಲ್ಲಿ ಪ್ರತಿಭಟನೆ

ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸುವಂತೆ ಭಾವಸಾರ ಕ್ಷತ್ರಿಯ ಸಮಾಜದ ಸದಸ್ಯರು ಕರೆ ನೀಡಿದರು.

appeal to boycott Chinese goods
ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಭಾವಸಾರ ಕ್ಷತ್ರಿಯ ಸಮಾಜದಿಂದ ಕರೆ
author img

By

Published : Jun 28, 2020, 2:30 PM IST

ಹರಿಹರ : ಪಟ್ಟಣದ ಗಾಂಧಿ ವೃತ್ತದ ಬಳಿ ಚೀನಾ ವಸ್ತುಗಳನ್ನು ಸುಡುವ ಮೂಲಕ, ಆ ದೇಶದ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸುವಂತೆ ಗಾಂಧಿನಗರದ ಭಾವಸಾರ ಕ್ಷತ್ರಿಯ ಸಮಾಜದ ಸದಸ್ಯರು ಕರೆ ನೀಡಿದರು.

ಈ ವೇಳೆ ಸಮಾಜದ ಮುಖಂಡ ರವೀಂದ್ರ ನವಲೆ ಮಾತನಾಡಿ, ದೇಶದ ಗಡಿ ಭಾಗದಲ್ಲಿ ಚೀನಾ ಸೈನಿಕರು ನಮ್ಮ ಭಾರತೀಯ ಸೈನಿಕರಿಗೆ ಅನಾವಶ್ಯಕವಾಗಿ ತೊಂದರೆ ಕೊಡುತ್ತಿದ್ದಾರೆ. ಇದನ್ನು ಭಾರತೀಯರಾದ ನಾವು ವಿರೋಧಿಸುತ್ತೇವೆ. ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ವತಿಯಿಂದ ಮಾಜಿ ಸೈನಿಕರನ್ನು ಸೇರಿಸಿ ಒಂದು ವ್ಯವಸ್ಥಿತವಾದ ಸಂಘವನ್ನು ರಚನೆ ಮಾಡಲಿದ್ದೇವೆ ಎಂದರು. ಬಿ ಇಂಡಿಯನ್, ಬೈ ಇಂಡಿಯನ್, ಸೇವ್ ಇಂಡಿಯಾ ಎಂಬ ಘೋಷವಾಕ್ಯದಿಂದ ಪ್ರತಿಭಟನೆ ನಡೆಸಿದ ಸಮಾಜದ ಸದಸ್ಯರು ಭಾರತೀಯ ವಸ್ತುಗಳನ್ನು ಖರೀದಿಸಿ ದೇಶದ ಆರ್ಥಿಕ ಸಬಲತೆಗೆ ಎಲ್ಲರೂ ಕೈಜೋಡಿಸೋಣ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.