ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿರುವ ಬೆನ್ನಲ್ಲೇ ಜಿಲ್ಲೆಯ ಬಹತೇಕ ಎಲ್ಲ ಕೆರೆಗಳು ಭರ್ತಿಯಾಗಿವೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ಇನ್ನು ಕೆಲ ರೈತರ ಜಮೀನಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿರುವುದು ಆತಂಕ ಸೃಷ್ಟಿ ಮಾಡಿದೆ.
ದಾವಣಗೆರೆ ತಾಲೂಕಿನ ಅಣಜಿ ಕೆರೆ 40 ವರ್ಷಗಳ ನಂತರ ಕೋಡಿ ಬಿದ್ದಿದ್ದು, ರೈತರ ಜಮೀನುಗಳಿಗೆ ಆಸರೆಯಾಗಿದೆ. 900 ಎಕರೆಯಷ್ಟು ವಿಶಾಲವಾದ ಅಣಜಿ ಕೆರೆಯ ಸುತ್ತಮುತ್ತಲಿನ ಅಡಕೆ, ಮೆಕ್ಕೆಜೋಳ ಬೆಳೆ ಬೆಳೆದಿದ್ದ ರೈತರ ಜಮೀನುಗಳಿಗೆ ಕೆರೆ ನೀರು ನುಗ್ಗಿದ್ದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಅಣಜಿ ಕೆರೆ ಕೋಡಿ ಬಿದ್ದಿದ್ದರಿಂದ ಕೋಡಿ ನೋಡಲು ಜನ ಮುಗಿ ಬಿದ್ದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚು ಜನ ಕೆರೆ ಬಳಿ ಆಗಮಿಸುತ್ತಿರುವ ಬೆನ್ನಲ್ಲೇ ಕೋಡಿ ಬಿದ್ದ ಸ್ಥಳದಲ್ಲಿ ತಂತಿ ಜಾಲರಿ ಅಳವಡಿಸಿ ಬಂದ್ ಮಾಡಲಾಗಿದೆ. ಕೋಡಿ ಬಿದ್ದ ಸ್ಥಳದಲ್ಲಿ ಜನ ಸಾಮಾನ್ಯರು ಇಳಿಯದಂತೆ ಮೀನುಗಳು ಕೂಡ ಕೊಚ್ಚಿ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ.
ಇದನ್ನೂ ಓದಿ: ಬರದನಾಡಿಗೆ ಜೀವಕಳೆ ತುಂಬಿದ ವಿವಿ ಸಾಗರ ಡ್ಯಾಂ, ಮೈದುಂಬಿ ಹರಿಯುವ ವೇದಾವತಿ