ETV Bharat / state

ಪಿಡಬ್ಲ್ಯೂಡಿ ಇಂಜಿನಿಯರ್ ವಿರುದ್ಧ ಆಸ್ತಿ ಕಬಳಿಕೆ ಆರೋಪ: ಸಹೋದರನ ಪತ್ನಿಯಿಂದ ದೂರು ದಾಖಲು - ದಾವಣಗೆರೆ ಸುದ್ದಿ

ದಾವಣಗೆರೆಯ ಚನ್ನಗಿರಿ ತಾಲೂಕಿನ ಪಿಡಬ್ಲ್ಯೂಡಿ ಇಂಜಿನಿಯರ್ ವಿರುದ್ಧ ಆಸ್ತಿ ಕಬಳಿಕೆ ಆರೋಪ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ, ಜಮೀನಿನಲ್ಲಿ ಬೆಳೆ ಬೆಳೆಯಲು ಅನುಮತಿ ನೀಡುತ್ತಿಲ್ಲ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಮಾಧ್ಯಮದ ಮುಂದೆ ಅಳಲು ತೋಡಿಕೊಂಡ ನೊಂದ ಕುಟುಂಬ
ಮಾಧ್ಯಮದ ಮುಂದೆ ಅಳಲು ತೋಡಿಕೊಂಡ ನೊಂದ ಕುಟುಂಬ
author img

By

Published : Dec 2, 2020, 3:41 PM IST

ದಾವಣಗೆರೆ: ಚನ್ನಗಿರಿ ತಾಲೂಕಿನ ಪಿಡಬ್ಲ್ಯೂಡಿ ಇಂಜಿನಿಯರ್ ಹಾಗೂ ಮತ್ತವರ ಕುಟುಂಬದ ವಿರುದ್ಧ ಆಸ್ತಿ ಕಬಳಿಕೆ ಮಾಡಿರುವ ಆರೋಪದ ಜೊತೆಗೆ ಜಮೀನಿನಲ್ಲಿ ಉಳುಮೆ ಹಾಗೂ ಕಟಾವು ಮಾಡಲು ಅಡ್ಡಿಪಡಿಸುತ್ತಿದ್ದಾರೆ. ಅತ್ತೆ ಹಾಗೂ ತನ್ನ ಮಕ್ಕಳ ಮೇಲೆ ಹಲ್ಲೆ ನಡೆಸಿ ಆಸ್ತಿ ನೀಡದೇ ವಂಚಿಸುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಗಂಭೀರ ಆಪಾದನೆ ಮಾಡಿದ್ದಾರೆ.

ರವಿಕುಮಾರ್ ಆರೋಪಕ್ಕೆ ಗುರಿಯಾದ ಪಿಡಬ್ಲ್ಯೂಡಿ ಇಂಜಿನಿಯರ್. ಮಾತ್ರವಲ್ಲ, ಚಿಕ್ಕಮ್ಮ ಲಕ್ಕಮ್ಮ, ಪದ್ಮಾವತಿ ಹಾಗೂ ಮಕ್ಕಳ ಮೇಲೆ ಹಲ್ಲೆ ಮಾಡಿದ ಆರೋಪಕ್ಕೂ ಗುರಿಯಾಗಿದ್ದಾರೆ. ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಮೂರು ಬಾರಿ ಪ್ರಕರಣವೂ ದಾಖಲಾಗಿದೆ. ಆದ್ರೆ, ನಾಜೂಕಾಗಿ ಜಾಮೀನು ಪಡೆದು ರವಿಕುಮಾರ್ ಮತ್ತು ಅವರ ಸಂಬಂಧಿಕರು ತೊಂದರೆ, ಕಿರುಕುಳ ನೀಡುವುದನ್ನು ಮುಂದುವರಿಸಿದ್ದು, ಆಸ್ತಿ ಬಿಟ್ಟುಕೊಡುತ್ತಿಲ್ಲ. ಬೆಳೆ ಬೆಳೆಯಲು ಹಾಗೂ ಕಟಾವಿಗೆ ಜನರನ್ನು ಬಿಟ್ಟು ಅಧಿಕಾರ ಬಳಸಿ ರವಿಕುಮಾರ್ ತೊಂದರೆ ನೀಡುತ್ತಿದ್ದಾರೆ ಎಂದು ರವಿಕುಮಾರ್ ಸಹೋದರನ ಪತ್ನಿ ಪದ್ಮಾವತಿ ಹಾಗೂ ಚಿಕ್ಕಮ್ಮ ಲಕ್ಕಮ್ಮ ಆರೋಪಿಸಿದ್ದಾರೆ.

ಮಾಧ್ಯಮದ ಮುಂದೆ ಅಳಲು ತೋಡಿಕೊಂಡ ನೊಂದ ಕುಟುಂಬ

ಈ ಸಂಬಂಧ ದಾಖಲೆಗಳ ಸಮೇತ ಪತ್ರಿಕಾಗೋಷ್ಠಿ ನಡೆಸಿದ ಪದ್ಮಾವತಿ, ಪಾಲು ಪಟ್ಟಿ ಪ್ರಕಾರ ಬಂದಿರುವ 28 ಎಕರೆ 32 ಗುಂಟೆ ಜಮೀನಿನಲ್ಲಿ ಮೆಕ್ಕೆಜೋಳ ಉಳುಮೆ ವೇಳೆ ತೊಂದರೆ ಕೊಡ್ತಿದ್ದಾರೆ. ಕಟಾವು ಬಂದಾಗಲೂ ಬೇರೆ ಬೇರೆ ಊರುಗಳಿಂದ ಜನರನ್ನು ಕರೆಯಿಸಿ ಕಟಾವು ಮಾಡಲು ಹೋದರೆ ಹಲ್ಲೆ ನಡೆಸುವುದು ಮಾತ್ರವಲ್ಲ, ಚಿತ್ರಹಿಂಸೆ ನೀಡುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಕೋರ್ಟ್​ನಲ್ಲಿಯೂ ದಾವೆ ಹೂಡಿದ್ದು, ವಿಚಾರಣೆಯ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ಘಟನೆಯ ಹಿನ್ನೆಲೆ: ಯಕ್ಕೇಗುಂದಿ ಗ್ರಾಮದ ಅಂಗಡಿ ತಿಮ್ಮಪ್ಪ ಎಂಬುವವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ನಾಗಮ್ಮ. ಎರಡನೇ ಪತ್ನಿ ಲಕ್ಕಮ್ಮ. ನಾಗಮ್ಮರಿಗೆ ರಂಗಪ್ಪ ಹಾಗೂ ತಿಪ್ಪಣ್ಣ ಇಬ್ಬರು ಗಂಡು ಮಕ್ಕಳಿದ್ದರೆ, ಎರಡನೇ ಪತ್ನಿ ಲಕ್ಕಮ್ಮರಿಗೆ ಪ್ರಕಾಶ್ ಎಂಬ ಪುತ್ರನಿದ್ದ. ಈ ಎರಡೂ ಕುಟುಂಬ ಒಟ್ಟಾಗಿದ್ದಾಗ ಖರೀದಿ ಮಾಡಿದ ಹಾಗೂ ಪಿತ್ರಾರ್ಜಿತವಾಗಿ 1995ರಲ್ಲಿ ಬಂದಿದ್ದ ಒಟ್ಟು 105 ಎಕರೆ ಜಮೀನು ಪಾಲುಪಟ್ಟಿ ನಾಗಮ್ಮ ಹಾಗೂ ಲಕ್ಕಮ್ಮರ ಕುಟುಂಬಕ್ಕೆ ಆಗಿತ್ತು. ಆದ್ರೆ, ರಿಜಿಸ್ಟ್ರರ್ ಆಗಿರಲಿಲ್ಲ. 2006ರಲ್ಲಿ ಲಕ್ಕಮ್ಮ ಪುತ್ರ ಅಂದರೆ ನನ್ನ ಗಂಡ ಪ್ರಕಾಶ್​ ಸಾವನ್ನಪ್ಪಿದ ಬಳಿಕ ನಮಗೆ ಕಿರುಕುಳ ಕೊಡಲಾಗ್ತಿದೆ. ಅದು ಈಗಲೂ ಮುಂದುವರಿದಿದೆ ಎಂದು ಪದ್ಮಾವತಿ ಆರೋಪಿಸಿದ್ದಾರೆ.

ಕೊರೊನಾ ಸೋಂಕು ತಗುಲಿ ಇತ್ತೀಚೆಗಷ್ಟೇ ರಂಗಪ್ಪ ತೀರಿಕೊಂಡಿದ್ದರು. ಈಗ ತಿಪ್ಪಣ್ಣ ಸೇರಿ ಮತ್ತವರ ಮಕ್ಕಳು ಹಾಗೂ ರಂಗಪ್ಪ ಪುತ್ರ ರವಿಕುಮಾರ್ ಸೇರಿದಂತೆ ಅವರ ಕುಟುಂಬದವರು ಹೇಳಬಾರದ ಕಾಟ ಕೊಡುತ್ತಿದ್ದಾರೆ. ಆಸ್ತಿ ರಿಜಿಸ್ಟರ್ ಮಾಡಿಸಿಕೊಡಲು ಒಪ್ಪುತ್ತಿಲ್ಲ, ಆಸ್ತಿ ಕಡಿಮೆ ಕೊಡುವುದಾಗಿ ಹೇಳುತ್ತಿದ್ದಾರೆ. ಜಮೀನಿಗೆ ಹೋಗಲು ಭಯ ಆಗ್ತಿದೆ. ನಾನು ಉಳುಮೆ ಮಾಡುತ್ತಿರುವ ಜಮೀನಿನ ಕಂದಾಯವನ್ನೂ ಕಟ್ಟುತ್ತಿದ್ದೇನೆ. ಆಸ್ತಿ ಲಪಟಾಯಿಸಬೇಕೆಂದು ನನ್ನ ಅತ್ತೆ ಲಕ್ಕಮ್ಮ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಮಾಹಿತಿ ನೀಡಿದರು.

ತನ್ನ ಗಂಡ ಸಾವನ್ನಪ್ಪಿದ ನಂತರ ಪಾಲುಪಟ್ಟಿ ಪ್ರಕಾರ ಬಂದ ಆಸ್ತಿ ನನ್ನ ಸ್ವಾಧೀನದಲ್ಲಿದೆ. ಈ ಸಂಬಂಧ ತನಗೆ ನೀಡಬೇಕೆಂದು ತಹಶೀಲ್ದಾರ್, ಉಪವಿಭಾಗಾಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಹೋಗಿ ಮನವಿ ಮಾಡಿದ್ದೇವೆ. ನ್ಯಾಯ ಕೊಡಿಸುವುದಾಗಿಯೂ ಒಪ್ಪಿದ್ದಾರೆ. ಚನ್ನಗಿರಿ ತಹಶೀಲ್ದಾರ್ ನನಗೆ ಹಾಗೂ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಅಧಿಕೃತವಾಗಿ ಆದೇಶ ನೀಡಿದ್ದಾರೆ. ಹಲ್ಲೆ ಪ್ರಕರಣ ಕುರಿತಂತೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಮೂರು ಬಾರಿ ಎಫ್ಐಆರ್ ಆಗಿದ್ದರೂ ಕಠಿಣ ಕ್ರಮ ಕೈಗೊಂಡಿಲ್ಲ. ತಹಶೀಲ್ದಾರ್ ಮಧ್ಯಪ್ರವೇಶಿಸಿ ರಿಸೀವರ್ ನೇಮಕ ಮಾಡಿ ಬೆಳೆ ಕಟಾವಿಗೆ ಅನುಮತಿ ನೀಡಿದ್ದಾರೆ. ಆದ್ರೆ, ಇದಕ್ಕೂ ಬಿಡುತ್ತಿಲ್ಲ.ಈ ಹಿನ್ನೆಲೆಯಲ್ಲಿ ನಮಗೆ ಸೂಕ್ತ ರಕ್ಷಣೆಯ ಜೊತೆಗೆ ಆಸ್ತಿ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.