ETV Bharat / state

ರಸ್ತೆ ಅಭಿವೃದ್ಧಿಗೆ ನಿವಾಸಿಗಳ ಸ್ಥಳಾಂತರ: ಹಕ್ಕು ಪತ್ರ ಕೊಟ್ಟು, ಮೂಲ ಸೌಲಭ್ಯ ನೀಡದ ಆರೋಪ - ದಾವಣಗೆರೆಯಲ್ಲಿ ರಿಂಗ್ ರಸ್ತೆಯನ್ನು ಅಭಿವೃದ್ಧಿ

ದಾವಣಗೆರೆಯಲ್ಲಿ ರಿಂಗ್ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಹೆಗಡೆ ನಗರದ ನಿವಾಸಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿಸಿದ್ದು, ಇದೀಗ ಆ ಸ್ಥಳದಲ್ಲಿ ಮೂಲ ಸೌಲ್ಯಭ್ಯಗಳ ಕೊರತೆ ಇದೆ ಎಂಬ ಆರೋಪ ಕೇಳಿ ಬಂದಿದೆ.

allegation
ಮೂಲಭೂತ ಸೌಲಭ್ಯ ನೀಡದ ಆರೋಪ
author img

By ETV Bharat Karnataka Team

Published : Dec 8, 2023, 2:29 PM IST

Updated : Dec 8, 2023, 3:14 PM IST

ರಸ್ತೆ ಅಭಿವೃದ್ಧಿಗೆ ನಿವಾಸಿಗಳ ಸ್ಥಳಾಂತರ: ಹಕ್ಕು ಪತ್ರ ಕೊಟ್ಟು, ಮೂಲ ಸೌಲಭ್ಯ ನೀಡದ ಆರೋಪ

ದಾವಣಗೆರೆ: ನಗರದಲ್ಲಿ ಹಾದು ಹೋಗಿರುವ ರಿಂಗ್ ರಸ್ತೆಯನ್ನು ಅಭಿವೃದ್ಧಿ ಪಡಿಸಲು ದಾವಣಗೆರೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ರಸ್ತೆ ಅನ್ನು ಅಭಿವೃದ್ಧಿ ಪಡಿಸುವುದಕ್ಕೆ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳು ಅಡ್ಡಿಯಾಗಿದ್ದರು. ಜಿಲ್ಲಾಡಳಿತಕ್ಕೆ ಇವರನ್ನು ಶಿಪ್ಟ್ ಮಾಡಿಸುವುದೇ ಒಂದು ಸವಾಲಿನ ಕೆಲಸವಾಗಿತ್ತು‌. ಹಲವಾರು ವರ್ಷಗಳಿಂದ ವಾಸವಾಗಿದ್ದ ಹೆಗಡೆ ನಗರ ನಿವಾಸಿಗಳನ್ನು ಬೇರೆಡೆ ಸ್ಥಳಾಂತರ ಮಾಡಿಸುವುದು ಜಿಲ್ಲಾಡಳಿತಕ್ಕೆ ಅಷ್ಟು ಸುಲಭದ ವಿಚಾರವಾಗಿರಲಿಲ್ಲ.

ಆದರೆ ಹೆಗಡೆ ನಗರದ ನಿವಾಸಿಗಳಿಗೆ ಕಳೆದ ಹದಿನೈದು ದಿನಗಳ ಹಿಂದೆ ಪ್ರತಿಯೊಂದು ಸೌಲಭ್ಯ ನೀಡುವ ಭರಸೆಯೊಂದಿಗೆ ಹಕ್ಕು ಪತ್ರಗಳನ್ನು ಹಸ್ತಾಂತರ ಮಾಡಲಾಗಿತ್ತು. ನಾಲ್ಕೈದು ದಿನಗಳ ಹಿಂದೆ ಹೆಗಡೆ ನಗರ ನಿವಾಸಿಗಳಿಗೆ ದಾವಣಗೆರೆ ದೊಡ್ಡಬಾತಿಯಲ್ಲಿ ಅವರಿಗೆ ವಸತಿ ರಹಿತ ನಿವೇಶನವನ್ನು ನೀಡಲಾಗಿದೆ. 419 ಕುಟುಂಬಗಳಲ್ಲಿ 281 ಜನರಿಗೆ ನಿವೇಶನ ಹಕ್ಕು ಪತ್ರ ಹಂಚಲಾಗಿದ್ದು, ಉಳಿದವರಿಗೂ ಹಕ್ಕುಪತ್ರ ನೀಡುವ ಭರವಸೆ ಅಧಿಕಾರಿಗಳು ನೀಡಿದ್ದಾರೆ‌.

ಸದ್ಯ ದೊಡ್ಡಬಾತಿ ಸಮೀಪ ಹೆಗಡೆ ನಗರದ ನಿವಾಸಿಗಳಿಗೆ ತಾತ್ಕಾಲಿಕ ಶೆಲ್ಟರ್​ಗಳನ್ನು ತೆರೆದು ವಸತಿ ಕಲ್ಪಿಸಲಾಗಿದೆ. ದುರಂತ ಎಂದರೆ ಅಲ್ಲಿ ರಸ್ತೆ, ಕುಡಿಯುವ ನೀರು, ಶೌಚಾಲಯ, ಮಕ್ಕಳಿಗೆ ಶಾಲೆ, ವಿದ್ಯುತ್ ಸೇರಿದಂತೆ ಅನೇಕ ಮೂಲ ಸೌಕರ್ಯ ಮರಿಚೀಕೆಯಾಗಿದೆ. ಪೂರ್ವ ಸಿದ್ಧತೆ ಇಲ್ಲದೇ ಮಾಡಿದ ಎಡವಟ್ಟಿನಿಂದ ಹೆಗಡೆ ನಗರ ನಿವಾಸಿಗಳು ಪರಿತಪಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಹೆಗಡೆ ನಗರ ನಿವಾಸಿಗಳ ಅಳಲು: ಈ ವೇಳೆ, ಹೆಗಡೆ ನಗರದ ನಿವಾಸಿ ರೇಣುಕಮ್ಮ ಮಾತನಾಡಿ, ನಮನ್ನು ಬಾತಿ ಗ್ರಾಮದ ಬಳಿ ತಂದು ಹಾಕಿದ್ದಾರೆ‌. ‌ನಿಮಗೆ ಶೆಡ್ ಹಾಕಿಸಿಕೊಡುತ್ತೇವೆ ಎಂದು ಹೇಳಿದ್ದರಿಂದ ನಾವು ಬಂದಿದ್ದೇವೆ. ಅದರೆ ಇಲ್ಲಿ ನೀರು, ವಿದ್ಯುತ್, ರಸ್ತೆ, ಏನೂ ಇಲ್ಲ. ಮಕ್ಕಳಿಗೆ ಶಾಲೆ ಇಲ್ಲ, ನಮ್ನ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕಿದ್ದಾರೆ ಈ ಅಧಿಕಾರಿಗಳು. ನಮಗೆ ಸೌಲಭ್ಯ ಸಿಗದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ ಬಳಿ ಹೋರಾಟ ಮಾಡಿ ಅಲ್ಲಿ ಜೀವನ ಮಾಡ್ತಿವಿ ಎಂದು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಪಾಲಿಕೆ ಆಯುಕ್ತೆ ಹೇಳಿದಿಷ್ಟು: ಈ ವೇಳೆ ಪ್ರತಿಕ್ರಿಯಿಸಿದ ಆಯುಕ್ತೆ ರೇಣುಕಾ ಅವರು, ಹಕ್ಕು ಪತ್ರ ನೀಡಿದರೆ ನಾವು ಜಾಗ ಖಾಲಿ ಮಾಡುವುದಾಗಿ ತಿಳಿಸಿದ್ರು. ಅದರಂತೆ ನಾವು ಮಹಾನಗರ ಪಾಲಿಕೆಯಿಂದು 12 ಎಕರೆ ಜಮೀನು ಖರೀದಿಸಿ, ಅಲ್ಲಿ ಲೇಔಟ್​ ನಿರ್ಮಿಸಿ, ಶೆಲ್ಟರ್​ ಹಾಕಿ ತಾತ್ಕಾಲಿಕವಾಗಿ ಮೂಲ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇವೆ. ಶಾಶ್ವತವಾಗಿ ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಕಲ್ಪಿಸುವುದಕ್ಕೆ ಎಷ್ಟು ಖರ್ಚಾಗುತ್ತದೆ ಎಂದು ಮೈನಾರಿಟಿಯಿಂದ ಲೆಕ್ಕಾಚಾರ ವರದಿ ಸಿದ್ದಪಡಿಸಿದ್ದೇವೆ. ಅದನ್ನು ಜಿಲ್ಲಾಧಿಕಾರಿಗೆ ನೀಡಿ ಅವರಿಗೆ ಮೂಲ ಸೌಕರ್ಯ ಕಲ್ಪಿಸಿಕೊಡುತ್ತೇವೆ ಎಂದು ಹೇಳಿದರು.

ಇಲ್ಲಿ ತನಕ ಒಟ್ಟು 355 ಜನರಿಗೆ ನಿವೇಶನಗಳ ಹಕ್ಕು ಪತ್ರಗಳನ್ನು ನೀಡಿ, ಮಂಜೂರಾಗಿರುವ ನಿವೇಶನಗಳಲ್ಲಿ ವಾಸಸಿಸಲು ತೆರಳುವ ಕುಟುಂಬಗಳಿಗೆ ಶೆಲ್ಟರ್ ವ್ಯವಸ್ಥೆ ಮಾಡಲಾಗಿದೆ. ಮಂಜೂರು ಮಾಡಿರುವ ನಿವೇಶನಗಳಲ್ಲಿ ರಾಜೀವ್ ಗಾಂಧಿ ಯೋಜನೆಯಡಿ ಒಟ್ಟು ಸಾವಿರ ಮನೆಗಳನ್ನು ನಿರ್ಮಾಣ ಮಾಡಲು ಶಾಸಕರಾದ ಶಾಮನೂರು ಶಿವಶಂಕರಪ್ಪ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಸ್ತಾವನೆ ಮಂಜೂರು ಆದ ತಕ್ಷಣವೇ ಅವುಗಳನ್ನು ಸಂತ್ರಸ್ತರಿಗೆ ನೀಡಲಾಗುವುದು. ಎರಡು ಬೋರ್​ಗಳನ್ನು ಕೊರೆಸಲಾಗಿದ್ದು, ಸದ್ಯ ಮನೆ ಮನೆಗಳಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಶೌಚಾಲಯದ ವ್ಯವಸ್ಥೆಗೆ ಪಾಲಿಕೆಯಿಂದ ಹಣ ಬಿಡುಗಡೆ ಮಾಡುತ್ತೇವೆ. ಆದಷ್ಟು ಬೇಗ ಮೂಲ ಸೌಕರ್ಯ ಕಲ್ಪಿಸುವುದಕ್ಕೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಕಂದಾಯ ಕಟ್ಟಿದರೂ ಬದುಕು ಅತಂತ್ರ; ಹಕ್ಕು ಪತ್ರಕ್ಕಾಗಿ ದಾವಣಗೆರೆ ಸ್ಲಂ ನಿವಾಸಿಗಳ ಹೋರಾಟ

Last Updated : Dec 8, 2023, 3:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.