ದಾವಣಗೆರೆ/ಶಿವಮೊಗ್ಗ: ಚಂದ್ರಶೇಖರ್ ಮೃತ ದೇಹ ಸಿಕ್ಕ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ್ ತಂದೆ ಈಗಾಗಲೇ ದೂರು ದಾಖಲಿಸಿದ್ದಾರೆ. ದಾವಣಗೆರೆ ಎಸ್ಪಿ ರಿಷ್ಯಂತ್ ನೇತೃತ್ವದ ತಂಡ ತನಿಖೆ ಮಾಡುತ್ತಿದೆ ಎಂದರು.
ಸ್ಥಳಕ್ಕೆ ಈಗಾಗಲೇ ಎಫ್ ಎಸ್ ಎಲ್ ತಂಡ ಭೇಟಿ ನೀಡಿದೆ. ಫಿಸಿಕಲ್ ಎವಿಡೆನ್ಸ್ ಸಂಗ್ರಹಿಸುತ್ತಿದ್ದಾರೆ. ನಿನ್ನೆ ರಾತ್ರಿ ಮರಣೋತ್ತರ ಪರೀಕ್ಷೆ ಆಗಿದೆ. ಇನ್ನು 2-3 ದಿನದಲ್ಲಿ ವರದಿ ಸಿಗಲಿದೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಭಾನುವಾರ ರಾತ್ರಿ 11.58ಕ್ಕೆ ನ್ಯಾಮತಿ ಬಳಿ ಕಾರು ಟ್ರೇಸ್ ಆಗಿತ್ತು. ಆದರೆ 12.06 ಕ್ಕೆ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಕಾರು 100 ಕಿ.ಮೀ ವೇಗದಲ್ಲಿತ್ತು, ಕಾಲ್ ಹಿಸ್ಟರಿ, ಸಿಡಿಆರ್ ಎಲ್ಲವೂ ತನಿಖೆ ಆಗುತ್ತಿದೆ. ದಾವಣಗೆರೆ, ಶಿವಮೊಗ್ಗ ಎಸ್ಪಿ ಜೊತೆಯಾಗಿ ತನಿಖೆ ಮಾಡುತ್ತಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿದೆ. ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ. ಮರಣೋತ್ತರ ಪರೀಕ್ಷೆ ವರದಿ ಆದಷ್ಟು ಬೇಗ ಕೊಡುವಂತೆ ಕೇಳಿದ್ದೇವೆ. ಈ ಕುರಿತು ನಾವು ಎವಿಡೆನ್ಸ್ ಸಂಗ್ರಹಿಸುತ್ತಿದ್ದೇವೆ. ಮತ್ತು ಅದಕ್ಕೆ ತಜ್ಞರಿದ್ದಾರೆ. ಅವರಿದ್ದಾಗ ನಾವು ಮಾತಾಡಬಾರದು. ದೂರು ದಾಖಲಾದ ತಕ್ಷಣ ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಸುತ್ತ ಹುಡುಕಾಟ ನಡೆಸಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಇದನ್ನೂ ಓದಿ : ಚಂದ್ರಶೇಖರ್ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು: ಬಿ ಎಸ್ ಯಡಿಯೂರಪ್ಪ
ಕುಟಂಬಸ್ಥರ ದೂರಿನ ಮೇರೆಗೆ ತನಿಖೆ: ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಪೊಲೀಸ ಕುಟುಂಬಗಳ ಜೊತೆ ಸಮಲೋಚನ ಸಭೆಯ ನಂತರ ಮಾತನಾಡಿದ ಅಲೋಕ್ ಕುಮಾರ್, ಚಂದ್ರಶೇಖರ್ ಅವರ ಕುಟುಂಬಸ್ಥರು ನೀಡುವ ದೂರಿನ ಮೇರೆಗೆ ಪೊಲೀಸರ ತನಿಖೆ ನಡೆಯುತ್ತದೆ. ಚಂದ್ರಶೇಖರ್ ಅಕ್ಟೊಂಬರ್ 30 ರಂದು ಮನೆಯಿಂದ ಹೊರಗೆ ಹೋಗಿದ್ದು, ಅಕ್ಟೋಬರ್ 31 ರಂದು ನಾಪತ್ತೆ ಪ್ರಕರಣ ದಾಖಲಾಗಿದೆ.
ಮೃತ ಚಂದ್ರು ಕಾರಿನ ಗುರುತನ್ನು ನಮ್ಮ ಪೊಲೀಸರ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ ಕಾರು ಎಲ್ಲೆಲ್ಲಿ ಸಂಚಾರ ಮಾಡಿದೆಯೂ ಅದು ಸಿ.ಸಿ ಕ್ಯಾಮಾರದಲ್ಲಿ ಸೆರೆಯಾಗಿದೆ ಎಂದರು.
ಚಂದ್ರು ಸಾವು ಕೋಮು ವಿಚಾರಕ್ಕೆ ನಡೆದಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ ಅಲೋಕ್ ಕುಮಾರ್, ಯಾವ ರೀತಿ ದೂರು ದಾಖಲಾಗುತ್ತದೆಯೂ ಅದೇ ರೀತಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೂ ಮುಂದೆಯು ಅವಶ್ಯಕತೆ ಬಿದ್ರೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.
ಯುಎಪಿಎ ಕೇಸ್ ತನಿಖೆ ಮುಂದುವರೆದಿದೆ: ಶಿವಮೊಗ್ಗದಲ್ಲಿ ದೇಶ ವಿರೋಧಿ ಚಟುವಟಿಕೆ ಸಂಬಂಧ ಯುಎಪಿಎ ಪ್ರಕರಣ ದಾಖಲಾಗಿ ಇಬ್ಬರನ್ನು ಬಂಧಿಸಿದ್ದು, ಉಳಿದವರ ಹುಡುಕಾಟವನ್ನು ನಮ್ಮ ಪೊಲೀಸ್ ತಂಡ ಮುಂದುವರೆಸಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಇತರರಿದ್ದರು.