ETV Bharat / state

ಹೋಟೆಲ್,​ ಮಾಲ್​ಗಳಲ್ಲಿ ಭದ್ರತಾ ವ್ಯವಸ್ಥೆ ಕುರಿತು ಎಡಿಜಿಪಿ ಅಲೋಕ್​ ಕುಮಾರ್​ ಸಭೆ - chandrashekar guruji murder case

ವಾಸ್ತು ತಜ್ಞ ಚಂದ್ರಶೇಖರ್​ ಗುರೂಜಿ ಹತ್ಯೆಯ ಬಳಿಕ ಶಾಪಿಂಗ್ ಮಾಲ್​, ಹೋಟೆಲ್​ಗಳಲ್ಲಿ ಸಿಸಿಟಿವಿ ಅಳವಡಿಕೆಯ ಕುರಿತು ದಾವಣಗೆರೆಯಲ್ಲಿ ಎಡಿಜಿಪಿ ಅಲೋಕ್​ ಕುಮಾರ್ ಸಭೆ ನಡೆಸಿದರು.

adgp alok kumar meeting
ಹೋಟೆಲ್​ ಮಾಲ್​ಗಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ ಗೃಹ ಇಲಾಖೆ ಆದೇಶ.
author img

By

Published : Jul 8, 2022, 11:41 AM IST

ದಾವಣಗೆರೆ: ಹುಬ್ಬಳ್ಳಿಯಲ್ಲಿ ಸರಳ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆಯ ಬೆನ್ನಲ್ಲೇ ಇದೀಗ ರಾಜ್ಯ ಗೃಹ ಇಲಾಖೆ ಮಹಾನಗರಗಳಲ್ಲಿರುವ ಹೋಟೆಲ್​, ಮಾಲ್​ಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಯನ್ನು ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅಡಿಯಲ್ಲಿ ಕಡ್ಡಾಯಗೊಳಿಸುವಂತೆ ಆದೇಶ ಹೊರಡಿಸಿದೆ. ಈ ಕುರಿತು ನಗರದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಟೇಲ್​, ಮಾಲ್​ಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಕನಿಷ್ಠ 30 ದಿನಗಳ ದೃಶ್ಯಾವಳಿಗಳಿರಬೇಕು. ಮುಖ್ಯದ್ವಾರದಲ್ಲಿ ಡೋರ್ ಫ್ರೇಂ ಮೆಟಲ್ ಡಿಟೆಕ್ಟರ್, ಹ್ಯಾಂಡ್ ಮೆಟಲ್ ಡಿಟೆಕ್ಟರ್​ ಹಾಗೂ ಬ್ಯಾಗ್​ ಸ್ಕ್ಯಾನರ್​ಗಳ ಅಳವಡಿಕೆ ಕಡ್ಡಾಯ.

ಸೆಕ್ಯೂರಿಟಿ ನೇಮಕ ಮಾಡಿ ತರಬೇತಿ ನೀಡಬೇಕು. ಒಂದು ವೇಳೆ ಯಾರಾದರೂ ಈ ನಿಯಮಗಳನ್ನು ಅನುಸರಿಸದೇ ಹೋದಲ್ಲಿ ಅಂಥವರ ವಿರುದ್ಧ ಸೆಕ್ಷನ್ 12ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವ ಮೂಲಕ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಅವರು ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ:ಜಾರ್ಜ್ ಫ್ಲಾಯ್ಡ್ ಕೊಲೆ: ಮಾಜಿ ಪೊಲೀಸ್ ಅಧಿಕಾರಿಗೆ 20ಕ್ಕೂ ಹೆಚ್ಚು ವರ್ಷ ಜೈಲು ಶಿಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.