ETV Bharat / state

ಪ್ರಜಾಕೀಯ ಪಕ್ಷ ಬೆಂಬಲಿತ ಅಭ್ಯರ್ಥಿಗೆ ಸಲಹೆ ನೀಡಿದ "ಬುದ್ದಿವಂತ" - ದಾವಣಗೆರೆ

ಪ್ರಜಾಕೀಯ ಪಕ್ಷದ ಸಿದ್ಧಾಂತದ‌ ಮೇಲೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅರೇಹಳ್ಳಿ ಗ್ರಾಮದ ಯುವಕ ಚೇತನ್​ ಗ್ರಾಮಕ್ಕೆ ಇಂದು ರಿಯಲ್ ಸ್ಟಾರ್ ಉಪ್ಪಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ..

Upendra
ಉಪೇಂದ್ರ
author img

By

Published : Jan 12, 2021, 8:03 PM IST

ದಾವಣಗೆರೆ : ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಪಂ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷ ತನ್ನ ಖಾತೆ ತೆರೆದಿದೆ. ಪ್ರಜಾಕೀಯ ಪಕ್ಷದ ಸಿದ್ಧಾಂತದ‌ ಮೇಲೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಯುವಕ ಚೇತನ್ ಅವರ ಗ್ರಾಮಕ್ಕೆ ರಿಯಲ್ ಸ್ಟಾರ್ ಉಪ್ಪಿ ಭೇಟಿ ನೀಡಿ ಅಭಿನಂದಿಸಿದ್ದಾರೆ.

ಚನ್ನಗಿರಿ ತಾಲೂಕಿನ ಕಾರಿಂಗನೂರು ಗ್ರಾಮ ಮಾಜಿ ಸಿಎಂ ಜೆ ಹೆಚ್‌ ಪಟೇಲ್ ಅವರ ಸ್ವಗ್ರಾಮ. ಇಲ್ಲಿಂದ ತಮ್ಮ ರಾಜಕೀಯ ಜೀವನ ಆರಂಭ ಮಾಡಿದ್ದ ಪಟೇಲ್ ಅವರು ಸಿಎಂ ಕುರ್ಚಿ ತನಕ ಉನ್ನತ ಮಟ್ಟದಲ್ಲಿ ಏರುತ್ತಲೇ ಹೋದ್ರು.

ಇದೀಗ ಕಾರಿಂಗನೂರು ಗ್ರಾಪಂ ವ್ಯಾಪ್ತಿಯ ಅರೇಹಳ್ಳಿ ಗ್ರಾಮದ ಯುವಕ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಸಿದ್ಧಾಂತ ಒಪ್ಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಇದೀಗ ಗೆಲುವು ಸಾಧಿಸಿದ್ದಾರೆ.

ಅರೇಹಳ್ಳಿಗೆ ಭೇಟಿ ನೀಡಿದ ಪ್ರಜಾಕೀಯ ಪಾರ್ಟಿಯ ಉಪ್ಪಿ..

ಅರೇಹಳ್ಳಿಯ ಚೇತನ್ ಎಂಬ ಯುವಕ ಮತದಾರರಿಗೆ ಹಣ, ಹೆಂಡ ಹಂಚದೆ ಪಾರದರ್ಶಕವಾಗಿ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದರಿಂದ ಖುಷಿಯಾದ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ಖ್ಯಾತ ಚಲನಚಿತ್ರ ನಟ ಉಪೇಂದ್ರ ಅರೇಹಳ್ಳಿಗೆ ಭೇಟಿ ನೀಡಿ ಚೇತನ್ ಗೆ ಅಭಿನಂದಿಸಿದರು. ಇದೇ ವೇಳೆ ಮಾತನಾಡಿದ ಉಪೇಂದ್ರ, ಕೆಲಸವನ್ನು ಮಾಡ್ಸಿ, ಲೆಕ್ಕ ಕೇಳಿ, ಆಗಲಿಲ್ಲ ಅಂದ್ರೇ ನಮ್ಮ ಚೇತನ್ ಗ್ರಾಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡ್ತಾರೆ ಅಂತಾ ನೆರೆದಿದ್ದ ಜನರಿಗೆ ಹೇಳಿದರು.

ಪ್ರಜಾಕೀಯ ಸಿದ್ಧಾಂತದಿಂದ ಗೆದ್ದ ರಾಜ್ಯದ ಏಕೈಕ ಗ್ರಾಪಂ ಸದಸ್ಯ..

ಕಾರಿಗನೂರು ಗ್ರಾಪಂನ ಅರೇಹಳ್ಳಿ ಗ್ರಾಮದ ಎಸ್ಸಿ ಮೀಸಲು ಕ್ಷೇತ್ರದಿಂದ ಚೇತನ್ ಕುಮಾರ್ ಗೆಲುವು ಸಾಧಿಸಿದ್ದರು. ಚೇತನ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜಾಕೀಯ ತತ್ವದಡಿ ಕಾರ್ಯ ನಿರ್ವಹಿಸುವುದಾಗಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಈ ವಿಡಿಯೋ ಕುರಿತು ಉಪೇಂದ್ರ ಟ್ವೀಟ್ ಮಾಡಿ ಚೇತನ್ ಗೆ ಹಾರೈಸಿದ್ದರು. ತಮ್ಮ ಪ್ರಜಾಕೀಯ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದರಿಂದ ನೂತನ ಗ್ರಾಪಂ ಸದಸ್ಯ ಚೇತನ್ ಅವರನ್ನು ಇಂದು ಭೇಟಿಯಾಗಿ ಹಾರೈಸಿದರು.

ಸೆಲ್ಫಿಗೆ ಮುಗಿದ್ರು ಅಭಿಮಾನಿಗಳು..

ಅರೇಹಳ್ಳಿಗೆ ಆಗಮಿಸುತ್ತಿದ್ದಂತೆ ಉಪ್ಪಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬಿದ್ರು, ಅದನ್ನು ತಪ್ಪಿಸಿಕೊಂಡ ಉಪ್ಪಿಯವರನ್ನು ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸೆಲ್ಫಿಗೆ ಮುಗಿಬೀಳುತ್ತಿದ್ದವರನ್ನು ತಡೆಯುವುದೇ ಪೋಲಿಸರಿಗೆ ಹರಸಾಹಸ ಪಡಬೇಕಾಯಿತು. ಇನ್ನು ಮಹಿಳೆಯರತ್ತ ಕೈ ಮಾಡಿದ ಉಪ್ಪಿಯನ್ನು ಕಂಡ ಹೆಣ್ ಹೈಕ್ಳು ನಗೆ ಬೀರಿದರು.

ಒಟ್ಟಾರೆ ಇಂದು ಅರೇಹಳ್ಳಿ ಗ್ರಾಮದಲ್ಲಿ ನಟ ಉಪೇಂದ್ರರವರು ಕೆಲ ಪ್ರಜಾಕೀಯ ಪಕ್ಷದ ಸಿದ್ಧಾಂತಗಳನ್ನು ನೆರೆದಿದ್ದ ಜನ್ರೀಗೆ ತಿಳಿ ಹೇಳಿದ್ರು. ಸಿದ್ಧಾಂತಗಳನ್ನು ಕೇಳಿ ತಲೆಹಾಕಿದ ಹಳ್ಳಿಗರಿಗಿರುವ ಈ ಬುದ್ಧಿಯನ್ನು ನಗರದ ಜನ್ರು ಪಾಲಿಸಬೇಕಾಗಿದೆ ಎಂದು ತಮ್ಮ ಪಕ್ಷದ ಗ್ರಾಪಂ ಸದಸ್ಯ‌ನಿಗೆ ಹುರಿದುಂಬಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.