ETV Bharat / state

ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬೆದರಿಕೆ : ಮನನೊಂದು ಯುವತಿ ಆತ್ಮಹತ್ಯೆ - ದಾವಣಗೆರೆ ಯುವತಿ ಆತ್ಮಹತ್ಯೆ ಪ್ರಕರಣ

ಯುವಕರಿಬ್ಬರು ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ನಡೆದಿದೆ.

ಯುವತಿ ಆತ್ಮಹತ್ಯೆ
ಯುವತಿ ಆತ್ಮಹತ್ಯೆ
author img

By ETV Bharat Karnataka Team

Published : Sep 4, 2023, 8:43 PM IST

ಪ್ರಕರಣದ ಬಗ್ಗೆ ಎಸ್ಪಿ ಹೇಳಿಕೆ

ದಾವಣಗೆರೆ: ಅಶ್ಲೀಲ ವಿಡಿಯೋ ಮಾಡಿ, ಹರಿಬಿಡುವುದಾಗಿ ಯುವಕರಿಬ್ಬರು ಬೆದರಿಕೆ ಹಾಕಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಿಸದೇ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಜಗಳೂರು ತಾಲೂಕಿನ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸಾವಿಗೂ ಮುನ್ನ ಸಂತ್ರಸ್ತ ಯುವತಿ, ತನ್ನ ಸಾವಿಗೆ ಕಾರಣರಾದ ಮಧು ಮತ್ತು ನಾಗೇಂದ್ರಸ್ವಾಮಿ ವಿರುದ್ದ ಕ್ರಮ ಕೈಗೊಳ್ಳಿ ಎಂದು ಹೇಳಿರುವ ವಿಡಿಯೋ ವೈರಲ್​ ಆಗಿದೆ. ಜಗಳೂರು ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇಬ್ಬರುನ್ನು ಪೊಲೀಸರು ಬಂಧಿಸಿದ್ದಾರೆ.

ಪೋಷಕರು ನೀಡಿರುವ ದೂರಿನಲ್ಲೇನಿದೆ: ಸಂತ್ರಸ್ತೆ ಮತ್ತು ಆರೋಪಿತ ಯುವಕರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಾರದ ಹಿಂದೆ ಬೇಕರಿ ತಿನಿಸಿನಲ್ಲಿ ಮತ್ತು ಭರಿಸುವ ಔಷಧ ಸೇರಿಸಿ ತಿನ್ನಲು ಕೊಟ್ಟಿದ್ದಾರೆ. ಆಕೆ ಪ್ರಜ್ಞೆ ತಪ್ಪಿದ ಬಳಿಕ ತಮ್ಮ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ನಂತರ ನಾವು ಕರೆದಾಗ ಬರುವಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಾವಿಗೂ ಮುನ್ನ ಯುವತಿ ಹೇಳಿದ್ದಿಷ್ಟು:

ಸಾವಿಗೂ ಮುನ್ನ ಸಂತ್ರಸ್ತೆ ಯುವತಿ, " ನನಗೆ ಆದ ರೀತಿಯ ಅನ್ಯಾಯ ಬೇರೆ ಯಾವುದೇ ಹೆಣ್ಣುಮಕ್ಕಳಿಗೂ ಆಗಬಾರದು, ಮಧು ಹಾಗೂ ನಾಗೇಂದ್ರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿ, ಇಬ್ಬರ ವಿರುದ್ದ ಕ್ರಮ ಕೈಗೊಳ್ಳಿ ಎಂದು ವಿಡಿಯೋ ಹೇಳಿಕೆ ನೀಡಿದ್ದಾಳೆ.

ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳು ನೀಡಿದ ಮಾಹಿತಿ ಹೀಗಿದೆ:

ಆಗಸ್ಟ್ 31 ರಂದು ಜಗಳೂರು ಪೋಲಿಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ, ಈ ಪ್ರಕರಣದಲ್ಲಿ ತಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿರುವ ಮದು, ಮತ್ತು ನಾಗೇಂದ್ರ ಸ್ವಾಮಿ ಈ ಇಬ್ಬರು ಕೂಡ ಮಾತಾನಡುವಂತೆ ಮತ್ತು ಸಂಪರ್ಕದಲ್ಲಿರುವಂತೆ ನಿರಂತರ ತೊಂದರೆ ಕೊಡುತ್ತಿದ್ದರು. ದೂರವಾಣಿ ಕರೆ ಮಾಡುತ್ತಿದ್ದರು. ನನಗೆ ಇಷ್ಟ ಇಲ್ಲ ಎಂದು ಹೇಳಿದ್ರು ಕೂಡ ಇಬ್ಬರು ನನ್ನ ಬಿಡ್ತಿರಲಿಲ್ಲ ಹಾಗಾಗಿ ನಾನು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ‌ ನೀಡಿದ್ದಾಳೆ. ಬಳಿಕ ಸಂತ್ರಸ್ತೆಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು ಆದರೇ ಚಿಕಿತ್ಸೆ ಫಲಕಾರಿಯಾಗದೆ ಸಂತ್ರಸ್ತೆ ನಿನ್ನೆ ಬೆಳಗ್ಗೆ ಸಾವನಪ್ಪಿದ್ದಾರೆ. ಸಧ್ಯ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ: ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.