ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ರಾಜಸ್ತಾನಿ ನೃತ್ಯ ಜನರನ್ನು ಆಕರ್ಷಿಸಿತು.
ಸೋಮವಾರ ವಾಲ್ಮೀಕಿ ಜಾತ್ರೆಯ ಉದ್ಘಾಟನಾ ದಿನವಾಗಿದ್ದರಿಂದ ವಿವಿಧ ರಾಜ್ಯದ ಕಲೆ, ಸಂಸ್ಕೃತಿ, ನೃತ್ಯವನ್ನು ಅನಾವರಣಗೊಳಿಸಲಾಯಿತು. ಎಲ್ಲಾ ರಾಜ್ಯಗಳ ನೃತ್ಯಗಳ ಪೈಕಿ ರಾಜಸ್ತಾನ ರಾಜ್ಯದ ನೃತ್ಯ ವಾಲ್ಮೀಕಿ ಜಾತ್ರೆಯಲ್ಲಿ ನೆರೆದಿದ್ದ ಹೆಚ್ಚಿನ ಜನರ ಗಮನ ಸೆಳೆಯಿತು.
ಈ ಸುದ್ದಿಯನ್ನೂ ಓದಿ: ಗಣಿಬಾಧಿತ ಗ್ರಾಮಗಳ ಶಾಲೆ, ಆಸ್ಪತ್ರೆ ಅಭಿವೃದ್ಧಿಗೆ ಮುಂದಾದ ಚಾಮರಾಜನಗರ ಡಿಸಿ
ಡೋಲಿನ ತಾಳಕ್ಕೆ ತಪ್ಪದಂತೆ ಪ್ರತಿ ತಾಳಕ್ಕೂ ತಕ್ಕ ಹೆಜ್ಜೆ ಹಾಕಿದ ನೃತ್ಯಗಾರ್ತಿಯರು ಜಾತ್ರೆಗೆ ಆಗಮಿಸಿದ್ದವರ ಪ್ರಶಂಸೆಗೆ ಪಾತ್ರರಾದರು. ಇದೇ ವೇದಿಕೆಯಲ್ಲಿ ಶ್ರೀ ಪ್ರಸನ್ನಾನಂದ ಪುರಿ ಶ್ರೀ ಹಾಗು ನಟಿ ಶೃತಿ ಭಾಗಿಯಾಗಿ ನೃತ್ಯವನ್ನು ಕಣ್ತುಂಬಿಕೊಂಡರು. ತಮಿಳುನಾಡು, ಕರ್ನಾಟಕ ಸೇರಿದಂತೆ ಮುಂತಾದ ರಾಜ್ಯದ ಕಲೆಗಾರರು ತಮ್ಮ-ತಮ್ಮ ರಾಜ್ಯಗಳ ಸಂಸ್ಕೃತಿ, ನೃತ್ಯವನ್ನು ಜನರ ಮುಂದೆ ಪ್ರದರ್ಶಿಸಿದರು.