ETV Bharat / state

ಇಗೋ ಇದು ಹಕ್ಕಿ -ಪಕ್ಷಿಗಳಿಗೇ ಮೀಸಲು: ಇದು ದಾವಣಗೆರೆ ವ್ಯಕ್ತಿಯ ಮಾದರಿ ನಡೆ - Mazie to Birds

ದಾವಣಗೆರೆಯ ಪಕ್ಷಿಪ್ರಿಯ ವ್ಯಕ್ತಿಯೊಬ್ಬರು ತಮ್ಮ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಪಕ್ಷಿಗಳ ಆಹಾರಕ್ಕೆಂದು ಮೀಸಲಿಟ್ಟು ಮಾದರಿಯಾಗಿದ್ದಾರೆ.

ಪಕ್ಷಿಗಳಿಗೆ ಮೆಕ್ಕೆಜೋಳ ಜಮೀನು ಮೀಸಲಿಟ್ಟ ಚಂದ್ರಶೇಖರ್ ಕಂಕೋಳ

author img

By

Published : Aug 7, 2020, 2:05 PM IST

ದಾವಣಗೆರೆ: ಕೊರೊನಾ ಎಂಬ ಹೆಮ್ಮಾರಿ ವಕ್ಕರಿಸಿದ ಬಳಿಕ ಜನಸಾಮಾನ್ಯರ ಬದುಕು ಸಂಕಷ್ಟವಾಗಿದೆ. ಇನ್ನು ಪ್ರಾಣಿ ಪಕ್ಷಿಗಳ ಪಾಡು ಹೇಳತೀರದ್ದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪಕ್ಷಿಪ್ರಿಯರೊಬ್ಬರು ಮೂಕ ಪ್ರಾಣಿಗಳಿಗಾಗಿ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮೀಸಲಿಟ್ಟಿದ್ದಾರೆ. ಮಾತ್ರವಲ್ಲದೇ, ಪಕ್ಷಿಗಳ ಚಿಲಿಪಿಲಿ ಕೇಳುತ್ತಾ ಆನಂದಪಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಾಣಿ ಪಕ್ಷಿಗಳ ಕಲರವ ಕಡಿಮೆಯಾಗುತ್ತಿದೆ. ನಗರೀಕರಣ ಬೆಳೆದಂತೆ ದೂರವಾಗುತ್ತಿವೆ. ಆದ್ರೆ, ದಾವಣಗೆರೆ ತಾಲೂಕಿನ ಶಾಮನೂರು ಗ್ರಾಮದ ಮಾಜಿ ಕಾರ್ಪೊರೇಟರ್ ಚಂದ್ರಶೇಖರ್ ಕಂಕೋಳ ಮೂರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಕೋವಿಡ್​ನಂತಹ ಸಂಕಷ್ಟದ ವೇಳೆಯಲ್ಲಿ ಮೂಕ ಪ್ರಾಣಿಗಳ ಬಗ್ಗೆ ಹೆಚ್ಚಾಗಿ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ, ಚಂದ್ರಶೇಖರ್ ಅವರು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದು ಗುಬ್ಬಿಗಳು, ಗಿಣಿಗಳಿಗೆ ಆಹಾರ ಉಣಬಡಿಸುವ ಮೂಲಕ ಮಾದರಿಯಾಗಿದ್ದಾರೆ.

ಪಕ್ಷಿಗಳಿಗೆ ಮೆಕ್ಕೆಜೋಳ ಜಮೀನು ಮೀಸಲಿಟ್ಟ ಚಂದ್ರಶೇಖರ್ ಕಂಕೋಳ

ಇನ್ನು ಈ ಕುರಿತು ಮಾತನಾಡಿದ ಅವರು, ಮಾಧ್ಯಮದಲ್ಲಿ ಪಕ್ಷಿಗಳು ಆಹಾರಕ್ಕೆ ಪರದಾಡುವುದನ್ನು ನೋಡಿ ಇವುಗಳಿಗೆ ತನ್ನಿಂದ ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದೆ. ಆ ಬಳಿಕ ಮೂರು ಎಕರೆ ಅಡಕೆ ತೋಟದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಫಸಲು ಚೆನ್ನಾಗಿ ಬಂದಿತ್ತು. 1 ಲಕ್ಷ ರೂಪಾಯಿ ಆದಾಯ ಗಳಿಸಬಹುದಿತ್ತಾದರೂ ಹಣ ಬೇಡ, ಪಕ್ಷಿಗಳು ಇಲ್ಲಿಗೆ ಬಂದು ಸೇವಿಸಲಿ. ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಈ ಕಾರ್ಯ ಮಾಡಿದ್ದೇನೆ ಎಂದರು.

ಪಕ್ಷಿಗಳಿಗೋಸ್ಕರ ಜೋಳವನ್ನ ಕಟಾವು ಮಾಡದೇ ಹಾಗೇ ಬಿಟ್ಟಿದ್ದಾರೆ. ಪಕ್ಷಿಗಳು ಯಾವುದೇ ಭಯವಿಲ್ಲದೇ ವಿಹರಿಸುತ್ತಾ ಇಲ್ಲಿ ದಾಂಗುಡಿ ಇಡುತ್ತಿವೆ. ಇಲ್ಲೇ ಗೂಡು ಕಟ್ಟಿ ವಾಸಿಸುತ್ತಿವೆ. ಅವುಗಳ ಚಿಲಿಪಿಲಿ ಶಬ್ದಗಳನ್ನು ಕೇಳುವುದೇ ಒಂದು ರೋಮಾಂಚನದ ಅನುಭವ. ಪ್ರತಿದಿನ ಕುಟುಂಬ ಸಮೇತರಾಗಿ ತೋಟಕ್ಕೆ ಬಂದು ಪಕ್ಷಿಗಳನ್ನು ನೋಡುತ್ತಾ ಸಂಭ್ರಮಿಸುತ್ತಿದ್ದಾರೆ.

ನೂರಾರು ವಿವಿಧ ಜಾತಿಯ ಗುಬ್ಬಿಗಳು, ಗಿಣಿಗಳು ಹೊಲಕ್ಕೆ ಬಂದು ಜೋಳ ತಿನ್ನುತ್ತಿವೆ. ಅಲ್ಲದೇ ಗೀಜಗಗಳು, ಚುಕ್ಕೆ ಮುನಿಯಾ, ಕಪ್ಪು ತಲೆ ಮುನಿಯಾ, ಮಿಂಚುಳ್ಳಿ, ಸಿಲ್ವರ್ ಫಿಂಚ್ ಹಾಗೂ ಇನ್ನಿತರ ತರಹೇವಾರಿ ಪಕ್ಷಿಗಳು ಇಲ್ಲಿಗೆ ಬಂದು ಜೋಳ ತಿಂದು ಸಂಭ್ರಮಿಸುತ್ತಿವೆ. ಗುಬ್ಬಿಗಳು ಎಂದರೆ ಈಗ ಅಲ್ಲಲ್ಲಿ ಕಾಣ ಸಿಗುತ್ತವೆ. ಆದ್ರೆ, ಇಲ್ಲಿ ಒಂದೇ ಕಡೆಯಲ್ಲಿ ಬಗೆ ಬಗೆಯ ಪಕ್ಷಿಗಳು ಕಾಣಸಿಗುತ್ತವೆ. ಇನ್ನು ಚಂದ್ರಶೇಖರ್ ಪತ್ನಿ ಕೂಡ ಪತಿಯ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.