ದಾವಣಗೆರೆ: ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಚುಡಾಯಿಸುತ್ತಿದ್ದ ಯುವಕನಿಗೆ ಸಾರ್ವಜನಿಕರೇ ಹಿಡಿದು ಸರಿಯಾಗಿ ಪಾಠ ಕಲಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಯುವಕನೋರ್ವ ನಗರದ ಜಯದೇವ ಸರ್ಕಲ್ನಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಯುವತಿವೋರ್ವಳಿಗೆ ಪ್ರತಿನಿತ್ಯ ಚುಡಾಯಿಸುತ್ತಿದ್ದ. ಇದನ್ನ ಗಮನಿಸಿದ ಆಕೆಯ ಪೋಷಕರು ಕೆಂಡಾಮಂಡಲವಾಗಿದ್ದರು. ಜೊತೆಗೆ ಸ್ಥಳೀಯರು ಸಹ ಇಂತಹ ಘಟನೆಯಿಂದ ಸಿಡಿಮಿಡಿಗೊಂಡು ಪುಂಡಾಟ ಮೆರೆದವನಿಗೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಧರ್ಮದೇಟು ನೀಡಿದ್ದಾರೆ.
ಅಷ್ಟೇ ಅಲ್ಲದೇ, ಆತನನ್ನು ಯುವತಿಯ ಬಳಿ ಎಳೆದೊಯ್ದು ಕಾಲಿಗೆ ಬೀಳಿಸಲು ಪ್ರಯತ್ನಿಸಿದ್ದಾರೆ. ಸದ್ಯ ಯುವಕನನ್ನು ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.