ದಾವಣಗೆರೆ: ನಗರದ ಚಿಕ್ಕಮ್ಮಣಿ ಬಡಾವಣೆಯಲ್ಲಿ ಬಾಲಕನ ಮೇಲೆ ಹಂದಿಗಳು ದಾಳಿ ಮಾಡಿದ್ದು, ಬಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ವೇದಾಂಗ (10) ಗಾಯಗೊಂಡ ಬಾಲಕ. ದಾರಿಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಎರಡು ಹಂದಿಗಳು ದಾಳಿ ನಡೆಸಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗಾಗಿ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.