ದಾವಣಗೆರೆ: ಬ್ಯಾಂಕ್ ಸಿಬ್ಬಂದಿ ಯಡವಟ್ಟಿನಿಂದ 50 ಮಂದಿ ಪಾಲಿಕೆ ಸದಸ್ಯರ ಅಕೌಂಟ್ಗಳಿಗೆ ತಲಾ 6ರಿಂದ 16 ಲಕ್ಷ ರೂ. ಜಮಾ ಆಗಿದೆ.
ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರ ಅಕೌಂಟ್ಗಳಿಗೆ ಹಣ ಜಮೆಯಾಗಿದ್ದು, ಬ್ಯಾಂಕ್ನ ಯಡವಟ್ಟಿನಿಂದ ಪಾಲಿಕೆಯ ಮೂರು ಕೋಟಿ ಹಣ 50 ಜನ ಪಾಲಿಕೆ ಸದಸ್ಯರ ಅಕೌಂಟ್ಗಳಿಗೆ ಸಂದಾಯವಾಗಿದೆ. ಘಟನೆ ನಡೆದ ತಕ್ಷಣವೇ ಬ್ಯಾಂಕ್ ಸಿಬ್ಬಂದಿ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಪಾಲಿಕೆ ಸದಸ್ಯರಿಗೆ ಗೌರವಧನ ಆರು ಸಾವಿರ ಕೊಡುವ ಬದಲು ಆರು ಲಕ್ಷ ರೂ. ಖಾತೆಗೆ ಜಮಾ ಮಾಡಿರುವುದನ್ನು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.
ಮಾಡಿದ ಯಡವಟ್ಟನ್ನು ಅರಿತ ಬ್ಯಾಂಕ್ ಸಿಬ್ಬಂದಿ ಕೆಲ ಅಕೌಂಟ್ಗಳನ್ನು ತಕ್ಷಣವೇ ಬ್ಲಾಕ್ ಮಾಡಿದ್ರೆ, ಇತ್ತ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿಯವರು ಹಣ ಡ್ರಾ ಮಾಡಿಕೊಂಡ ಸದಸ್ಯರಿಗೆ ಕರೆ ಮಾಡಿ ಹಣ ವಾಪಸ್ ಪಡೆದುಕೊಂಡಿದ್ದಾರೆ.