ETV Bharat / state

ಸೂಡಾನ್​ನಲ್ಲಿ ಸಿಲುಕಿದ್ದಾರೆ ದಾವಣಗೆರೆ ಜಿಲ್ಲೆಯ 39 ಮಂದಿ - etv bharat kannada

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಇಂದು ಸೂಡಾನ್ ದೇಶದಲ್ಲಿ ಸಿಲುಕಿಕೊಂಡಿರುವವರ ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.

39-people-from-two-villages-of-davangere-got-stuck-in-sudan
ಸೂಡಾನ್​ನಲ್ಲಿ ಸಿಲುಕಿದ ದಾವಣಗೆರೆ ಜಿಲ್ಲೆಯ 39 ಮಂದಿ..
author img

By

Published : Apr 19, 2023, 9:29 PM IST

Updated : Apr 19, 2023, 10:52 PM IST

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ: ಜಿಲ್ಲೆಯ ಚನ್ನಗಿರಿಯಿಂದ ಉದ್ಯೋಗ ಅರಸಿ ದಕ್ಷಿಣ ಆಫ್ರಿಕಾದ ಸೂಡಾನ್ ದೇಶಕ್ಕೆ ತೆರಳಿದ 39 ಜನರ ಮಾಹಿತಿ ಲಭಿಸಿದೆ. ಸಂಕಷ್ಟಕ್ಕೆ ಸಿಲುಕಿದವರ ಸ್ವಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇವರೆಲ್ಲರೂ ಸೂಡಾನ್ ಅಲ್ಪಷಿರ್ ನಗರದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ‌ ನೀಡಿದೆ. ತೊಂದರೆಗೊಳಗಾದ ಕುಟುಂಬಸ್ಥರಿಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸಾಂತ್ವನ ಹೇಳಿದರು.

ಸೂಡಾನ್ ದೇಶದಲ್ಲಿ ಸೇನಾಪಡೆ ಮತ್ತು ಅರೆ ಸೇನಾಪಡೆಗಳ ನಡುವೆ ಘರ್ಷಣೆ ನಡೆಯುತ್ತಿದೆ. ರಾಜಧಾನಿ ಖಾರ್ಟೂಮ್‍ ಹಾಗೂ ಅಲ್ಪಷಿರ್ ನಗರಗಳಲ್ಲಿ ಉದ್ಯೋಗಕ್ಕಾಗಿ ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿ ಮತ್ತು ಗೋಪನಹಳ್ಳಿಯ ಹಕ್ಕಿಪಿಕ್ಕಿ ಜನರು ತೆರಳಿದ್ದರು. ಇದೀಗ ಸೂಡಾನ್​ ಯುದ್ದ ಭೂಮಿಯಾಗಿ ಮಾರ್ಪಟ್ಟಿದೆ. ಅಲ್ಲಿರುವ ಸಂತ್ರಸ್ತರು ತಮ್ಮ ಕುಟುಂಬದವರಿಗೆ ಕರೆ ಮಾಡಿ ಹೇಗಾದರೂ ಮಾಡಿ ಸ್ವದೇಶಕ್ಕೆ ಕರೆಸಿಕೊಳ್ಳುವಂತೆ ಅಂಗಲಾಚುತ್ತಿದ್ದಾರೆ.

ಈ ಸಂಬಂಧ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿ ಮತ್ತು ಗೋಪನಹಳ್ಳಿಯ ಗ್ರಾಮಗಳಿಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮತ್ತು ಸೂಡಾನ್‍ನಲ್ಲಿರುವ ಸಿಲುಕಿರುವವರೊಂದಿಗೆ ಮಾತನಾಡಿ ಧೈರ್ಯ ಹೇಳಿದರು. ಅಸ್ತಾಪನಹಳ್ಳಿಯಿಂದ ಸುಮಾರು 10 ಮತ್ತು ಗೋಪನಾಳ್ ಗ್ರಾಮದಿಂದ 29 ಜನರು ಸೇರಿ ಒಟ್ಟು 39 ಜನ ಉದ್ಯೋಗಕ್ಕಾಗಿ ಸೂಡಾನ್‌ಗೆ ತೆರಳಿದ್ದಾರೆ ಎಂದು ಡಿಸಿ ತಿಳಿಸಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಸೂಡಾನ್‌ನಲ್ಲಿ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿ ಮತ್ತು ಗೋಪನಹಳ್ಳಿಯ ಗ್ರಾಮಗಳಿಂದ ತೆರಳಿದ್ದವರಿದ್ದಾರೆ. ಅವರೆಲ್ಲರೂ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ, ಕುಟುಂಬಸ್ಥರು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಅನಾವಶ್ಯಕ ಹೊರಬಾರದೆ ಭಾರತೀಯ ರಾಯಭಾರಿ ಕಚೇರಿ ನೀಡಿದ ಸೂಚನೆಗಳನ್ನು ಪಾಲಿಸಬೇಕು ಎಂದರು.

ಈಗಾಗಲೇ ಅಲ್ಲಿರುವ ನಂದಕುಮಾರ್​ ಎಂಬುವವರ ಜೊತೆ ಮಾತನಾಡಿದ್ದೀನಿ. ಸುಮಾರು 800 ಕ್ಕೂ ಅಧಿಕ ಮಂದಿ ಭಾರತೀಯರು ಒಂದೇ ಕಡೆ ಇರುವುದಾಗಿ ತಿಳಿಸಿದ್ದಾರೆ. ನಾವು ನಿಖರವಾದ ಮಾಹಿತಿ ತಿಳಿದುಕೊಂಡು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದೇವೆ ಎಂದು ಹೇಳಿದರು.

ಸೂಡಾನ್ ದೇಶದ ಅಲ್ಪಷೇರ್ ನಗರದಲ್ಲಿ ಸಿಲುಕಿರುವ ಪ್ರಭು ಎಂಬುವರು ಮಾತನಾಡಿ, ಸದ್ಯ ನಾವು ಅಲ್ಪಷೇರ್ ನಗರದಲ್ಲಿ ಜೀವನ ನಡೆಸುತ್ತಿದ್ದೇವೆ. ನಾವೆಲ್ಲರೂ ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿ ಮತ್ತು ಗೋಪನಹಳ್ಳಿಯ ಗ್ರಾಮದವರು. ನಾವು ವಾಸಿಸುವ ಮನೆಗಳ ಸುತ್ತ ಗುಂಡಿನ‌ ದಾಳಿ, ಮಿಸೈಲ್, ರಾಕೆಟ್ ದಾಳಿಗಳು ನಡೆಯುತ್ತಿವೆ. ಎಲ್ಲರೂ ಭಯಭೀತರಾಗಿದ್ದೇವೆ, ಆಹಾರ ಇಲ್ಲದೆ ಪರಿತಪಿಸುತ್ತಿದ್ದೇವೆ. ನಮ್ಮನ್ನು ಬಹುಬೇಗ ಭಾರತಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿದರು.

ಇದನ್ನೂ ಓದಿ: ಕೀನ್ಯಾ ತಲುಪಿದ ಐಎನ್‌ಎಸ್ ಐರಾವತ್: ದಕ್ಷಿಣ ಸುಡಾನ್ ಜನರಿಗೆ ಆಹಾರ ಸಾಮಗ್ರಿ ವಿತರಣೆ

Last Updated : Apr 19, 2023, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.