ETV Bharat / state

ಹರಿಹರದಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ - 31 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ರಸ್ತೆಯಲ್ಲಿ ಯಾರಿಗಾದರೂ ಅಪಘಾತವಾದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ನಮಗೆ ಸಂಬಂಧವಿಲ್ಲ ಎಂಬಂತೆ ನಿಂತುಕೊಳ್ಳದೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸೌಜನ್ಯತೆ ತೋರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೈ.ಕೆ.ಬೇನಾಳ ಹೇಳಿದರು.

National Road Safety Saptah
ರಸ್ತೆ ಸುರಕ್ಷತಾ ಸಪ್ತಾಹ..ನ್ಯಾಯಾಧೀಶ ವೈ.ಕೆ. ಬೇನಾಳ ಚಾಲನೆ
author img

By

Published : Jan 18, 2020, 9:29 AM IST

ಹರಿಹರ: ರಸ್ತೆಯಲ್ಲಿ ಯಾರಿಗಾದರೂ ಅಪಘಾತವಾದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ನಮಗೆ ಸಂಬಂಧವಿಲ್ಲ ಎಂಬಂತೆ ನಿಂತುಕೊಳ್ಳದೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸೌಜನ್ಯತೆ ತೋರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೈ.ಕೆ.ಬೇನಾಳ ಹೇಳಿದರು.

ರಸ್ತೆ ಸುರಕ್ಷತಾ ಸಪ್ತಾಹ..ನ್ಯಾಯಾಧೀಶ ವೈ.ಕೆ. ಬೇನಾಳ ಚಾಲನೆ

ನಗರದ ಕೆಎಸ್ಆರ್​ಟಿಸಿ ಬಸ್ ಘಟಕದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹರಿಹರ ಇವರ ಸಂಯುಕ್ತಾಶ್ರಯದಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ, ಯುವಕರ ದಿನಾಚರಣೆ ಮತ್ತು ಸಂವಿಧಾನ ದಿನಾಚರಣೆಯ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಾಲಕರು ವಾಹನ ಚಾಲನೆ ಮಾಡುವಾಗ ಹಿಂದೆ ಮುಂದೆ, ಅಕ್ಕ-ಪಕ್ಕ ನೋಡಿಕೊಂಡು ಚಾಲನೆ ಮಾಡಬೇಕು. ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ ರಸ್ತೆ ಸುರಕ್ಷತೆ ಬಗ್ಗೆ ಗಮನದಲ್ಲಿಟ್ಟುಕೊಂಡು ಚಾಲನೆ ಮಾಡಬೇಕು. ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಕಾನೂನಿನ ಅಡಿಯಲ್ಲಿ ಜೀವಿಸಬೇಕು. ಚಾಲಕರ ನಿರ್ಲಕ್ಷ್ಯತನದಿಂದ ಅಪಘಾತವಾದರೆ ಹೆಚ್ಚಿನ ಮೊತ್ತದ ಪರಿಹಾರ ಕೊಡಲಾಗುತ್ತದೆ. ಒಂದು ವೇಳೆ ಹಣ ಕೊಡುವಲ್ಲಿ ವಿಳಂಬ ಅಥವಾ ಕಾನೂನಿನ ಆದೇಶವನ್ನು ನಿರ್ಲಕ್ಷಿಸಿದರೆ ಸಾರಿಗೆ ಸಂಸ್ಥೆಯ ವಾಹನವನ್ನು ಜಪ್ತಿ ಮಾಡಲಾಗುತ್ತದೆ. ಇದರಿಂದ ಸಾರಿಗೆ ಸಂಸ್ಥೆ ನಷ್ಟ ಅನುಭವಿಸಬೇಕಾಗುತ್ತದೆ ಎಂದರು.

Intro:ಅಪಘಾತಕ್ಕೊಳಗಾದವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸೌಜನ್ಯ ಬೆಳೆಸಿಕೊಳ್ಳಿ
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ : ಸಿವಿಲ್ ನ್ಯಾಯಾಧೀಶ ವೈ.ಕೆ ಬೇನಾಳ

intro:
ಹರಿಹರ : ರಸ್ತೆಯಲ್ಲಿ ಯಾರಿಗಾದರು ಅಪಘಾತವಾದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ನಮಗೆ ಸಂಬಂಧವಿಲ್ಲ ಎಂಬಂತೆ ನಿಂತುಕೊಳ್ಳದೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸೌಜನ್ಯತೆ ತೋರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವೈ.ಕೆ ಬೇನಾಳ ಹೇಳಿದರು

body:
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ಘಟಕದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹರಿಹರ ಇವರುಗಳ ಸಂಯುಕ್ತಾಶ್ರಯದಲ್ಲಿ ೩೧ ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ, ಯುವಕರ ದಿನಾಚರಣೆ ಮತ್ತು ಸಂವಿಧಾನ ದಿನಾಚರಣೆಯ ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಚಾಲಕರು ವಾಹನ ಚಾಲನೆ ಮಾಡುವಾಗ ಹಿಂದೆ ಮುಂದೆ ಅಕ್ಕ-ಪಕ್ಕ ನೋಡಿಕೊಂಡು ಚಾಲನೆ ಮಾಡಬೇಕು.
ಚಾಲಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ ರಸ್ತೆ ಸುರಕ್ಷತೆ ಬಗ್ಗೆ ಜನರ ಸುರಕ್ಷತೆಯ ಬಗ್ಗೆ ಗಮನದಲ್ಲಿಟ್ಟುಕೊಂಡ ಚಾಲನೆ ಮಾಡಬೇಕು, ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಕಾನೂನಿನ ಅಡಿಯಲ್ಲಿ ಜೀವಿಸಬೇಕು ಕಾನೂನಿನ ವಿರುದ್ಧ ಜೀವಿಸಬಾರದು. ಚಾಲಕರ ನಿರ್ಲಕ್ಷ್ಯತನದಿಂದ ಅಪಘಾತವಾದರೆ ಹೆಚ್ಚಿನ ಮೊತ್ತದ ಪರಿಹಾರ ಕೊಡಲಾಗುತ್ತದೆ. ಒಂದು ವೇಳೆ ಹಣ ಕೊಡುವಲ್ಲಿ ವಿಳಂಬ ಅಥವಾ ಕಾನೂನಿನ ಆದೇಶವನ್ನು ನಿರ್ಲಕ್ಷಿಸಿದರೆ ಸಾರಿಗೆ ಸಂಸ್ಥೆಯ ವಾಹನವನ್ನು ಜಪ್ತಿ ಮಾಡಲಾಗುತ್ತದೆ ಇದರಿಂದ ಸಾರಿಗೆ ಸಂಸ್ಥೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಕಾನೂನು ಸೇವಾ ಸಮಿತಿ ಇದೆ. ಇದರ ಮುಖ್ಯ ಉದ್ದೇಶ ಜನರಿಗೆ ಇಂತಹ ಕಾರ್ಯಕ್ರಮದ ಮೂಲಕ ಕಾನೂನಿನ ಅರಿವು ಮೂಡಿಸುವುದು ಮತ್ತು ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರುವಂತವರಿಗೆ ಹಾಗೂ ಎಸ್ಸಿ, ಎಸ್ಟಿ ಸಮುದಾಯದವರಿಗೆ ತಮ್ಮ ವ್ಯಾಜ್ಯಗಳಿಗೆ ವಕೀಲರ ಸೇವಾ ಶುಲ್ಕ ಕೊಡಲಾಗದೆ ಇರುವಂತಹವರಿಗೆ ಸಿವಿಲ್ ವ್ಯಾಜ್ಯಗಳಿಗೆ ನಮ್ಮ ಕಾನೂನು ಸೇವಾ ಸಮಿತಿಯಿಂದ ಉಚಿತವಾಗಿ ವಕೀಲರನ್ನು ನೇಮಕ ಮಾಡಿ, ತಾಲ್ಲೂಕು ಮಟ್ಟದ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದವರೆಗೆ ತಗುಲುವ ವೆಚ್ಚವನ್ನು ಈ ಸಮಿತಿಯೇ ಭರಿಸುತ್ತಿದೆ.
ನಂತರ ಮಾತನಾಡಿದ ದಾವಣಗೆರೆ ವಿಭಾಗೀಯ ಸಂಚಲನಾಧಿಕಾರಿ ಮಂಜುನಾಥ್, ಭಾರತದಲ್ಲಿ ಸುಮಾರು ಒಂದುವರೆ ಲಕ್ಷ ಜನರು ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ನಿತ್ಯ ದಿನನಿತ್ಯ ಜೀವನದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಇಟ್ಟುಕೊಂಡು ಪ್ರಯಾಣಿಸಬೇಕು ನಿಯಮ ಉಲ್ಲಂಘನೆ ಮಾಡಿ ಪದೇ ಪದೇ ಜನರು ಅಪಘಾತಕ್ಕಿಡಾಗುತ್ತಿದ್ದಾರೆ. ರಸ್ತೆಯ ವಿನ್ಯಾಸದ ಕೊರತೆಯಿಂದ ಮತ್ತು ರಿಫ್ಲೆಟ ಮಾರ್ಜಿನ್ ಕೊರತೆಯಿಂದ ಅಪಘಾತವಾಗುತ್ತಿವೆ. ಅಪಘಾತ ಸ್ಥಳದಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಹಾಜರಿದ್ದು ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು. ರಸ್ತೆ ಸುರಕ್ಷತೆ ಬಗ್ಗೆ ಎಲ್ಲಿ ಬೋರ್ಡ್‌ಗಳಿರುತ್ತವೆ ಅಲ್ಲಿಯೇ ಹೆಚ್ಚಿನ ಅಪಘಾತಗಳಾಗುತ್ತವೆ ಇದು ನಮ್ಮೆಲ್ಲರ ಬೇಜವಾಬ್ದಾರಿ ಎಂದು ಹೇಳಿದರು.
ತಹಶೀಲ್ದಾರ್ ಕೆ ಬಿ ರಾಮಚಂದ್ರಪ್ಪ ಮಾತನಾಡಿ, ದಿನನಿತ್ಯ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ ಇವರ ಜೀವ ಚಾಲಕನ ಹತೋಟಿಯಲ್ಲಿರುತ್ತದೆ. ರಸ್ತೆ ಸುರಕ್ಷತಾ ಪಾಲಿಸಿದರೆ ಮಾತ್ರ ಜೀವನ ಹಸನಾಗುತ್ತದೆ. ಅಪಘಾತ ಆದ ಸಂದರ್ಭದಲ್ಲಿ ಚಾಲಕನ ಪಾತ್ರ ಏನು ಎಂಬುದು ತಿಳಿದುಕೊಳ್ಳಬೇಕು. ಕರ್ನಾಟಕದಲ್ಲಿ ೧ ವರ್ಷದಲ್ಲಿ ಹತ್ತು ಸಾವಿರ ಜನ ಮರಣ ಹೊಂದುತ್ತಿದ್ದಾರೆ. ೪೦ ಸಾವಿರ ಜನ ಅಪಘಾತಕ್ಕೀಡಾಗುತ್ತಿದ್ದಾರೆ. ನಾಗರಿಕರು ಸಿಬ್ಬಂದಿಗಳು ಅಪಘಾತ ಆಗದಂತೆ ರಸ್ತೆ ಸುರಕ್ಷತಾ ಮಾರ್ಗಗಳನ್ನು ಪಾಲಿಸಬೇಕು. ಸಮೂಹ ಸಾರಿಗೆಯಲ್ಲಿ ಚಾಲನೆ ಮಾಡಿದರೆ ಇಂಧನ ಉಳಿತಾಯ ಮಾಡಬಹುದು ಎಂದು ಸಲಹೆ ನೀಡಿದರು.

conclusion:
ಈ ಸಂದರ್ಭದಲ್ಲಿ ವಿಭಾಗೀಯ ಯಾಂತ್ರಿಕ ಅಭಿಯಂತರರಾದ ವೆಂಕಟೇಶ್, ಸಹಾಯಕ ಸರ್ಕಾರಿ ಅಭಿಯೋಜಕ ಶಂಶೀರ್‌ಅಲಿ ಖಾನ್, ವಕೀಲರಾದ ಮೋಹನ್ ಲಾಲ್ ಸಾರ್, ಜಿ ಎಚ್ ಭಾಗೀರಥಿ, ಚನ್ನಪ್ಪ, ಲಿಂಗರಾಜ್, ಮಂಜುನಾಥ್, ವಿಜಯ್, ಸಿದ್ದೇಶ್ವರ ಎನ್ ಹೆಬ್ಬಾಳ, ಬಿ.ಎಚ್ ಲಿಂಗರಾಜು, ರಮೇಶ್, ಎಂ.ಬಿ ಆನಂದ್ ಉಪಸ್ಥಿತರಿದ್ದರು.Body:ಅಪಘಾತಕ್ಕೊಳಗಾದವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸೌಜನ್ಯ ಬೆಳೆಸಿಕೊಳ್ಳಿ
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ : ಸಿವಿಲ್ ನ್ಯಾಯಾಧೀಶ ವೈ.ಕೆ ಬೇನಾಳ

intro:
ಹರಿಹರ : ರಸ್ತೆಯಲ್ಲಿ ಯಾರಿಗಾದರು ಅಪಘಾತವಾದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ನಮಗೆ ಸಂಬಂಧವಿಲ್ಲ ಎಂಬಂತೆ ನಿಂತುಕೊಳ್ಳದೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸೌಜನ್ಯತೆ ತೋರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವೈ.ಕೆ ಬೇನಾಳ ಹೇಳಿದರು

body:
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ಘಟಕದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹರಿಹರ ಇವರುಗಳ ಸಂಯುಕ್ತಾಶ್ರಯದಲ್ಲಿ ೩೧ ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ, ಯುವಕರ ದಿನಾಚರಣೆ ಮತ್ತು ಸಂವಿಧಾನ ದಿನಾಚರಣೆಯ ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಚಾಲಕರು ವಾಹನ ಚಾಲನೆ ಮಾಡುವಾಗ ಹಿಂದೆ ಮುಂದೆ ಅಕ್ಕ-ಪಕ್ಕ ನೋಡಿಕೊಂಡು ಚಾಲನೆ ಮಾಡಬೇಕು.
ಚಾಲಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ ರಸ್ತೆ ಸುರಕ್ಷತೆ ಬಗ್ಗೆ ಜನರ ಸುರಕ್ಷತೆಯ ಬಗ್ಗೆ ಗಮನದಲ್ಲಿಟ್ಟುಕೊಂಡ ಚಾಲನೆ ಮಾಡಬೇಕು, ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಕಾನೂನಿನ ಅಡಿಯಲ್ಲಿ ಜೀವಿಸಬೇಕು ಕಾನೂನಿನ ವಿರುದ್ಧ ಜೀವಿಸಬಾರದು. ಚಾಲಕರ ನಿರ್ಲಕ್ಷ್ಯತನದಿಂದ ಅಪಘಾತವಾದರೆ ಹೆಚ್ಚಿನ ಮೊತ್ತದ ಪರಿಹಾರ ಕೊಡಲಾಗುತ್ತದೆ. ಒಂದು ವೇಳೆ ಹಣ ಕೊಡುವಲ್ಲಿ ವಿಳಂಬ ಅಥವಾ ಕಾನೂನಿನ ಆದೇಶವನ್ನು ನಿರ್ಲಕ್ಷಿಸಿದರೆ ಸಾರಿಗೆ ಸಂಸ್ಥೆಯ ವಾಹನವನ್ನು ಜಪ್ತಿ ಮಾಡಲಾಗುತ್ತದೆ ಇದರಿಂದ ಸಾರಿಗೆ ಸಂಸ್ಥೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಕಾನೂನು ಸೇವಾ ಸಮಿತಿ ಇದೆ. ಇದರ ಮುಖ್ಯ ಉದ್ದೇಶ ಜನರಿಗೆ ಇಂತಹ ಕಾರ್ಯಕ್ರಮದ ಮೂಲಕ ಕಾನೂನಿನ ಅರಿವು ಮೂಡಿಸುವುದು ಮತ್ತು ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರುವಂತವರಿಗೆ ಹಾಗೂ ಎಸ್ಸಿ, ಎಸ್ಟಿ ಸಮುದಾಯದವರಿಗೆ ತಮ್ಮ ವ್ಯಾಜ್ಯಗಳಿಗೆ ವಕೀಲರ ಸೇವಾ ಶುಲ್ಕ ಕೊಡಲಾಗದೆ ಇರುವಂತಹವರಿಗೆ ಸಿವಿಲ್ ವ್ಯಾಜ್ಯಗಳಿಗೆ ನಮ್ಮ ಕಾನೂನು ಸೇವಾ ಸಮಿತಿಯಿಂದ ಉಚಿತವಾಗಿ ವಕೀಲರನ್ನು ನೇಮಕ ಮಾಡಿ, ತಾಲ್ಲೂಕು ಮಟ್ಟದ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದವರೆಗೆ ತಗುಲುವ ವೆಚ್ಚವನ್ನು ಈ ಸಮಿತಿಯೇ ಭರಿಸುತ್ತಿದೆ.
ನಂತರ ಮಾತನಾಡಿದ ದಾವಣಗೆರೆ ವಿಭಾಗೀಯ ಸಂಚಲನಾಧಿಕಾರಿ ಮಂಜುನಾಥ್, ಭಾರತದಲ್ಲಿ ಸುಮಾರು ಒಂದುವರೆ ಲಕ್ಷ ಜನರು ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ನಿತ್ಯ ದಿನನಿತ್ಯ ಜೀವನದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಇಟ್ಟುಕೊಂಡು ಪ್ರಯಾಣಿಸಬೇಕು ನಿಯಮ ಉಲ್ಲಂಘನೆ ಮಾಡಿ ಪದೇ ಪದೇ ಜನರು ಅಪಘಾತಕ್ಕಿಡಾಗುತ್ತಿದ್ದಾರೆ. ರಸ್ತೆಯ ವಿನ್ಯಾಸದ ಕೊರತೆಯಿಂದ ಮತ್ತು ರಿಫ್ಲೆಟ ಮಾರ್ಜಿನ್ ಕೊರತೆಯಿಂದ ಅಪಘಾತವಾಗುತ್ತಿವೆ. ಅಪಘಾತ ಸ್ಥಳದಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಹಾಜರಿದ್ದು ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು. ರಸ್ತೆ ಸುರಕ್ಷತೆ ಬಗ್ಗೆ ಎಲ್ಲಿ ಬೋರ್ಡ್‌ಗಳಿರುತ್ತವೆ ಅಲ್ಲಿಯೇ ಹೆಚ್ಚಿನ ಅಪಘಾತಗಳಾಗುತ್ತವೆ ಇದು ನಮ್ಮೆಲ್ಲರ ಬೇಜವಾಬ್ದಾರಿ ಎಂದು ಹೇಳಿದರು.
ತಹಶೀಲ್ದಾರ್ ಕೆ ಬಿ ರಾಮಚಂದ್ರಪ್ಪ ಮಾತನಾಡಿ, ದಿನನಿತ್ಯ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ ಇವರ ಜೀವ ಚಾಲಕನ ಹತೋಟಿಯಲ್ಲಿರುತ್ತದೆ. ರಸ್ತೆ ಸುರಕ್ಷತಾ ಪಾಲಿಸಿದರೆ ಮಾತ್ರ ಜೀವನ ಹಸನಾಗುತ್ತದೆ. ಅಪಘಾತ ಆದ ಸಂದರ್ಭದಲ್ಲಿ ಚಾಲಕನ ಪಾತ್ರ ಏನು ಎಂಬುದು ತಿಳಿದುಕೊಳ್ಳಬೇಕು. ಕರ್ನಾಟಕದಲ್ಲಿ ೧ ವರ್ಷದಲ್ಲಿ ಹತ್ತು ಸಾವಿರ ಜನ ಮರಣ ಹೊಂದುತ್ತಿದ್ದಾರೆ. ೪೦ ಸಾವಿರ ಜನ ಅಪಘಾತಕ್ಕೀಡಾಗುತ್ತಿದ್ದಾರೆ. ನಾಗರಿಕರು ಸಿಬ್ಬಂದಿಗಳು ಅಪಘಾತ ಆಗದಂತೆ ರಸ್ತೆ ಸುರಕ್ಷತಾ ಮಾರ್ಗಗಳನ್ನು ಪಾಲಿಸಬೇಕು. ಸಮೂಹ ಸಾರಿಗೆಯಲ್ಲಿ ಚಾಲನೆ ಮಾಡಿದರೆ ಇಂಧನ ಉಳಿತಾಯ ಮಾಡಬಹುದು ಎಂದು ಸಲಹೆ ನೀಡಿದರು.

conclusion:
ಈ ಸಂದರ್ಭದಲ್ಲಿ ವಿಭಾಗೀಯ ಯಾಂತ್ರಿಕ ಅಭಿಯಂತರರಾದ ವೆಂಕಟೇಶ್, ಸಹಾಯಕ ಸರ್ಕಾರಿ ಅಭಿಯೋಜಕ ಶಂಶೀರ್‌ಅಲಿ ಖಾನ್, ವಕೀಲರಾದ ಮೋಹನ್ ಲಾಲ್ ಸಾರ್, ಜಿ ಎಚ್ ಭಾಗೀರಥಿ, ಚನ್ನಪ್ಪ, ಲಿಂಗರಾಜ್, ಮಂಜುನಾಥ್, ವಿಜಯ್, ಸಿದ್ದೇಶ್ವರ ಎನ್ ಹೆಬ್ಬಾಳ, ಬಿ.ಎಚ್ ಲಿಂಗರಾಜು, ರಮೇಶ್, ಎಂ.ಬಿ ಆನಂದ್ ಉಪಸ್ಥಿತರಿದ್ದರು.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.