ETV Bharat / state

ದಾವಣಗೆರೆಯಲ್ಲಿ 199 ಕೊರೊನಾ ಪಾಸಿಟಿವ್ ದೃಢ: ಮೂವರು ಸಾವು

ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಂದು 199 ಜನರಲ್ಲಿ ಪಾಸಿಟಿವ್ ಕಾಣಿಸಿಕೊಳ್ಳುವ ಮೂಲಕ ಈ ಸಂಖ್ಯೆ 11,397ಕ್ಕೇರಿದೆ.

199 Corona Positive at Davangere
ದಾವಣಗೆರೆಯಲ್ಲಿ 199 ಕೊರೊನಾ ಪಾಸಿಟಿವ್
author img

By

Published : Sep 7, 2020, 10:40 PM IST

ದಾವಣಗೆರೆ: ಜಿಲ್ಲೆಯಲ್ಲಿ ಇಂದು 199 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 11,397ಕ್ಕೇರಿದೆ. ಮಹಾಮಾರಿಗೆ ಮೂವರು ಬಲಿಯಾಗಿದ್ದು, ಮೃತರ ಸಂಖ್ಯೆ 216 ಆಗಿದೆ.

ನಗರದ ಬೊಂಬು ಬಜಾರ್​ನ 30 ವರ್ಷದ ವ್ಯಕ್ತಿ, ದೇವರಾಜ ಅರಸ್ ಲೇಔಟ್​​ನ 64 ವರ್ಷದ ಪುರುಷ (ಸೆ. 5 ರಂದು) ಹಾಗೂ ಹರಿಹರದ ಎ.ಕೆ.‌ ಕಾಲೋನಿಯ 55 ವರ್ಷದ ಪುರುಷ (ಸೆ. 6ರಂದು) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬ ವರದಿ ಬಂದಿದೆ.

ದಾವಣಗೆರೆಯಲ್ಲಿ 96, ಹರಿಹರ 27, ಜಗಳೂರು 14, ಚನ್ನಗಿರಿ 31, ಹೊನ್ನಾಳಿ 25 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ 6 ಮಂದಿಯಲ್ಲಿ ಸೋಂಕಿರುವುದು ಖಚಿತವಾಗಿದೆ. 173 ಮಂದಿ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಇದುವರೆಗೆ ಒಟ್ಟು 8366 ಜನರು ಡಿಸ್ಚಾರ್ಜ್ ಆಗಿದ್ದಾರೆ. 2815 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.